LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಬೆಂಗಳೂರಿನ ಮಾಲ್‍ನಲ್ಲಿ ರೈತನಿಗೆ ಅವಮಾನ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ವಿನೋದ್‍ಕುಮಾರ್‍ಗೌಡ ಖಂಡನೆ

ದೇವನಹಳ್ಳಿ : ರೈತರನ್ನು ಕೀಳಾಗಿ ಕಾಣುವ ಯಾರೇ ಆಗಲಿ ಅವರಿಗೆ ಸರಿಯಾದ ಬುದ್ದಿ ಕಲಿಸಬೇಕು ರೈತರು ಬೆಳೆದ ಬೇಳೆಗಳನ್ನು ಮಾರಿ ಜೀವನ ಸಾಗಿಸುವ ಮಾಲ್‍ನ ಮಾಲೀಕರು ದೇಶದ, ರಾಜ್ಯದ ರೈತರ ಕ್ಷಮೆ ಯಾಚಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ವಿನೋದ್‍ಕುಮಾರ್‍ಗೌಡ ಕಿಡಿಕಾರಿದರು.

ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಾ ಇರುವ ಸಂದರ್ಭದಲ್ಲಿ ಮಾತನಾಡಿ ರೈತರು ಯಾರೇಆಗಲಿ ಅವಮನಿಸಿದಲ್ಲಿ ನಮಗೆ ಕೆಂಡದಂತಹ ಕೋಪ ಬರುತ್ತದೆ, ರೈತರಿಲ್ಲದಿದ್ದರೆ ಯಾವುದೇ ಮಾಲ್‍ಗಳಾಗಲಿ ನಡೆಸಲು ಸಾಧ್ಯವಿಲ್ಲ ಅವರು ಬೆಳೆದ ಬೆಳೆಗಳನ್ನು ಪಾಕೆಟ್ ಮಾಡಿ ಮಾರಾಟ ಮಾಡುವ ನೀವು ಪಂಚೆ ಟವೆಲ್ ಬಟ್ಟೆತೊಟ್ಟು ಬಂದ ರೈತನನ್ನು ಬಾಗಿಲಲ್ಲೆ ನಿಲ್ಲಿಸಿ ನಡೆದುಕೊಂಡ ರೀತಿ ಆ ಮಾಲ್ ಸಿಬ್ಬಂದಿಗೆ ಸರಿಯಾದ ಶಿಕ್ಷೆ ನೀಡಬೇಕು,

ಬೇರೆ ರಾಜ್ಯಗಳಿಂದ ಬರುವ ಕೆಲಸಗಾರರಿಂದ ಕನ್ನಡಿಗರಿಗೆ ಅದರಲ್ಲೂ ರೈತರಿಗೆ ಅವಮಾನವಾಗುತ್ತಿರುವುದು ಸಹಿಸಲು ಸಾಧ್ಯವಿಲ್ಲ ನಮ್ಮ ನಾಡಿನ
ಸಾಂಸ್ಕøತಿಕ ಉಡುಗೆ ಪಂಚೆ ಟವೆಲ್ ಅಂತಹ ಉಡುಗೆತೊಟ್ಟ ನಮ್ಮ ರೈತರು ದೇಶದ ಹೆಮ್ಮೆ ಎಂದರೆ ತಪ್ಪಾಗಲಾರದು ಇನ್ನಾದರೂ ಸುಸಂಸ್ಕøತರು ಅನ್ನದಾತ ರೈತರಿಗೆ ಗೌರವ ನೀಡಲಿ ಎಂದರು.

ಇದು ಮೊದಲಲ್ಲ ಮೆಟ್ರೋದಲ್ಲಿಯೂ ರೈತರಿಗೆ ಅವಮಾನವಾದಗಾ ನಾವು ಹೋರಾಟಗಳನ್ನು ಮಾಡಿದ್ದೆವು, ಕಾರು ಕೊಳ್ಳಲು ರೈತ ಚೀಲದಲ್ಲಿ ಹಣ ತೆಗೆದುಕೊಂಡು ಹೋದ ರೈತನಿಗೆ ಒಂದು ಕಂಪನಿ ಮಾಲೀಕ ಅವಮಾನ ಮಾಡಿದ್ದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ, ಆದ್ದರಿಂದ ಯಾರೇ ಆಗಲಿ ರೈತನ ಬಟ್ಟೆ ನೋಡಿ ಅಳೆಯಬೇಡಿ ಮುಂದೆ ಇಂತಹ ಘಟನೆ ಮರುಕಳಿಸಿದರೆ ಉಗ್ರ ಹೋಟಾಟ ಮಾಡಲಾಗುವುದು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಕಾರ್ಯದರ್ಶಿ ಕಡತನಮಲೆ ಬಿ.ಜಿ. ನಂಜುಂಡಪ್ಪ ಮಾತನಾಡಿ ರೈತರಿಗೆ ಗೌರವಕೊಡುವುದನ್ನು ಕಲಿತು ರೈತರಿಲ್ಲದಿದ್ದರೆ ಯಾವುದೇ ಕಂಪನಿಗಳು ನಡೆಯಲು ಸಾಧ್ಯವಿಲ್ಲ ಎಂದರು.ಈ ಸಮಯದಲ್ಲಿ ಸಣ್ಣೆ ಜಗದೀಶ್, ಕಡತನ ಮಲೆ ನಂಜುಂಡಪ್ಪ, ಪ್ರಕಾಶ್, ಸೊಣ್ಣಪ್ಪನಹಳ್ಳಿ ಮಂಜುನಾಥ್, ರಮೇಶ್, ರಾಜಣ್ಣ, ಮಲ್ಲೆಪ್ಪ, ದಾಸರಹಳ್ಳಿ ಚಂದ್ರು ಸೇರಿದಂತೆ ಇತರರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು