LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಬೈಕ್‍ನಿಂದ ಬಿದ್ದು ಇಬ್ಬರು ದುರ್ಮರಣ

ಯಾದಗಿರಿ: ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ಅನಾಹುತಗಳು ಸಂಭವಿಸುತ್ತಿವೆ. ವಾಹನ ಸವಾರರಂತು ಎಷ್ಟೇ ಜಾಗೃತಿಯಿಂದ ವಾಹನ ಚಲಾಯಿಸಿದರೂ ಕಡಿಮೆಯೇ. ಬೈಕ್ ಸವಾರರಿಬ್ಬರು ಬೈಕ್ ಸ್ಕಿಡ್ ಆಗಿ ಸಾವನ್ನಪ್ಪಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹತ್ತಿಗೂಡತ್ ಕ್ರಾಸ್ ನಲ್ಲಿ ಈ ದುರಂತ ಸಂಭವಿಸಿದೆ.ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.ವರ್ಕನಹಳ್ಳಿಯ ಯುವರಾಜ್ (23) ಹಾಗೂ ಶರಣಪ್ಪ (22) ಮೃತ ದುರ್ದೈವಿಗಳು. ಸುರಪುರದಿಂದ ವರ್ಕನಹಳ್ಳಿ ಗ್ರಾಮಕ್ಕೆ ಬರುವಾಗ ಈ ಘಟನೆ ನಡೆದಿದೆ. ಶಹಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST