LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮನ ತಣಿಸಿದ ಚಿಣ್ಣರ ಕಲರವದಲ್ಲಿ ಮಿಂಚಿದ ಭರತನಾಟ್ಯ ಹಾಗೂ ಸಂಗೀತ ಮೇಳ

ಶೈಲೂಸಂ ಆರ್ಟ್್ಸ ಅಂಡ್ ಕ್ರಿಯೇಶನ್ಸ್ ಸಂಸ್ಥೆ ಸುಮಾರು ೧೪ ವರ್ಷಗಳಿಂದ ಅನೇಕ ಕಲೋತ್ಸವಗಳನ್ನು ಆಯೋಜಿಸಿ ವಿಶಿಷ್ಟ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡುತ್ತಿದೆ. ಅಂತಹ ಉತ್ಸವಗಳಲ್ಲಿ ನಗರದ ನಯನ ಸಭಾಂಗಣದಲ್ಲಿ ನಡೆದ ಚಿಣ್ಣರ ಕಲರವ (೨೩ನೇ ಆವೃತ್ತಿ) ಪ್ರಮುಖವಾದುದು.

ಇದರಲ್ಲಿ ಗುರುಗಳಾದ ಮಿಥುನ್ ಶಾಮ್ ರವರ ವಿದ್ಯಾರ್ಥಿಗಳು , ಗುರು ವಿ ಹರ್ಷಿತಾ ರವರ ಶಿಷ್ಯರಾದ ಸುಮನ , ಗುರುವಿದುಷಿ ಭಾವನಾ ರವರ ಶಿಷ್ಯರಾದ ಧನ್ಯಶ್ರೀ, ಗುರು ಶ್ರೀ ಸತೀಶ್ ಬಾಬುರವರ ಶಿಷ್ಯರುಗಳಾದ ಅಂಕಿತ ಮತ್ತು ಸಂಪದ ವಿಶೇಷ ಭರತನಾಟ್ಯ ಸ್ತುತಿಗಳನ್ನು ನೀಡಿ ಸಭಿಕರ ಮನಸೂರೆ ಗೊಳಿಸಿದರು. ವಿಶೇಷವೆಂದರೆ ಎಲ್ಲಾ ನೃತ್ಯ ಪ್ರದರ್ಶನಗಳು ಪ್ರತ್ಯಕ್ಷ ವಾದ್ಯ ಪರಿಕರಗಳೊಂದಿಗೆ ನಡೆದಿದ್ದು. ಒಂದು ಸಂಸ್ಥೆಯು ವಿವಿಧ ಸಂಸ್ಥೆಗಳ ಮಕ್ಕಳಿಗೆ ಇಂತಹ ಒಂದು ಅವಕಾಶ ಕಲ್ಪಿಸಿ ಕೊಟ್ಟಿರುವುದು ಶ್ಲಾಘನೀಯ.

ಈ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಗುರುವಿದೂಶಿ ಶುಭ ಧನಂಜಯ್ ರವರು ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಡಾ. ಮೀನಾ ರಾಜ್ ಗೌಡರನ್ನು ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಡಾ.ಮೀನಾ ರಾಜ್ ಗೌಡರು ಹಿರಿಯ ಪತ್ರಕರ್ತರಾದ ಶ್ರೀ ಲೇಪಾಕ್ಷಿ ಸಂತೋಷ್ ರಾವ್ ರವರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಇಂತಹ ವಿಭಿನ್ನ ಸಾಂಪ್ರದಾಯಿಕ ಕಲೆಗಳಿಗೆ ಪ್ರೋತ್ಸಾಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿ ಅನಂತ ವಿಕ್ರಂ ರವರು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಅತ್ಯಂತ ವಿಶೇಷವಾಗಿದೆ ಎಂದರು.

ಚೈತ್ರ ರಾವ್ ಹಾಗೂ ಶ್ರೀ ನರಸಿಂಹ ಆಚಾರ್ ರವರು ಈ ವಿಶೇಷ ಕಾರ್ಯಕ್ರಮದ ರೂವಾರಿಗಳಾಗಿದ್ದಾರೆ. ಅದರಲ್ಲೂ ಶ್ರೀ ಅನಂತ ವಿಕ್ರಂ ರವರು ಈ ಕಾರ್ಯಕ್ರಮದ ಆಯೋಜನೆ ಅಷ್ಟೇ ಅಲ್ಲದೆ ಸುಮಾರು ೨ ಗಂಟೆಗಳ ಕಾಲ ಸುಮಧುರವಾಗಿ ಆಡಿ ಮನರಂಜಿಸಿರುವುದು ಗಮನಾರ್ಹ. ಇವರೊಂದಿಗೆ ನಾಡಿನ ಹೆಸರಾಂತ ವಿದ್ವಾಂಸರುಗಳಾದ ವಿದ್ವಾನ್ ಪವನ್ ಮಾಧವ್ ಮತ್ತು ವಿದ್ವಾಂಸದ ಸ್ಕಂದ ಕುಮಾರ್ ಮೃದಂಗ ಮತ್ತು ಕೊಳಲಿನ ನಾದದಲ್ಲಿ ಸಹಕರಿಸಿದರು.

ಇದಲ್ಲದೆ ಶೈಲೂಸಂ ಸಮಾಜಮುಖಿ ಕಾರ್ಯವೈಕರಿಯಲ್ಲೂ ಎತ್ತಿದ ಕೈ. ಈ ಬಾರಿ 'ಶೈಲೂಸಂ ರತ್ನ' ಪ್ರಶಸ್ತಿಯನ್ನು ಡಾ. ವಿಜಯಲಕ್ಷಿ÷್ಮ ಬಾಳೆಕುಂದ್ರಿ ಅವರಿಗೆ, ಶೈಲೂಸಂ ವೈದ್ಯ ರತ್ನ ಹಾಗೂ ವಿಶ್ವಕರ್ಮ ನಾಡೋಜ ಡಾಕ್ಟರ್ ಉಮೇಶ್ ರವರಿಗೆ ಶೈಲೂಸಂ ಸಮಾಜ ಸೇವ ರತ್ನ ನೀಡಿ ಗೌರವಿಸಿತು. ಈ ಕಾರ್ಯಕ್ರಮದ ನಿರೂಪಣೆಯನ್ನು ದಂತವೈದ್ಯರಾದ ಡಾ.ರಾಗಶ್ರೀ ರವರು ನೆರವೇರಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು