LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಮಾರ್ನಿಂಗ್ ಕಾಫೀ ಫ್ರೆಂಡ್ಸ್ ಕ್ಲಬ್ ವತಿಯಿಂದ ಕನ್ನಡ ರಾಜ್ಯೋತ್ಸವ

ನೆಲಮಂಗಲ: ಭಾಷಾ ಪ್ರೌಢಮೆ ಕಾಪಾಡಲುಕನ್ನಡ ಭಾಷೆಯ ಬಳಕೆ ನಿತ್ಯ ನಿರಂತರವಾಗಿರ ಬೇಕೆಂದು ಮಕ್ಕಳ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎನ್ ಜಿ ಗೋಪಾಲ್ ಹೇಳಿದರು.ನಗರದ ಸೊಂಡೇಕೊಪ್ಪ ರಸ್ತೆಯ ಶ್ರೀ ಬಸವೇಶ್ವರ ವೃತ್ತದಲ್ಲಿ ಮಾರ್ನಿಂಗ್ ಕಾಫೀ ಫ್ರೆಂಡ್ಸ್ ಕ್ಲಬ್ ಆಯೋಜಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ದ್ವಜಾರೋಹಣವನ್ನು ಮಹದೇಶ್ವರ ಹೋಟೆಲ್ ರೂವಾರಿ ಹಿರಿಯ ನಾಗರೀಕರಾದ ಮಹದೇವಯ್ಯ ನೆರವೇರಿಸಿದರು. ಕನ್ನಡಾಭಿಮಾನಿ ವರ್ತಕ ಮೋಹನ್ ಕುಮಾರ್ ಮಾತನಾಡಿ ನಮ್ಮ ಭಾಷೆ ನಮ್ಮದೆಂಬ ಅಭಿಮಾನ ಎಲ್ಲರ ಹೃನ್ಮಂನಗಳಲ್ಲಿ ಇದ್ದಾಗ ಸದಸ ನಮ್ಮ ವ್ಯಾಪಾರ ವಹಿವಾಟುಗಳ ನಡುವೆ ಕನ್ನಡ ಸಾರ್ವಭೌಮತ್ವ ಜೀವಂತ ಇರುವುದೆಂದರು.

ಕನ್ನಡ ಸಾಂಸ್ಕೃತಿಕ ರಂಗದ ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ ನಮ್ಮ ಸುತ್ತಮುತ್ತಲಿನ ಜನರಿಗೆ ಕನ್ನಡದ ಪರ ವಿಶ್ವಾಸ ಮೂಡಿಸಬೇಕು. ಅನ್ಯ ಭಾಷಿಗರೊಂದಿಗೆ ದಿನನಿತ್ಯದ ವಹಿವಾಟನ್ನು ಕನ್ನಡ ಭಾಷೆಯಲ್ಲಿ ಮಾಡಿದಾಗ ಅನ್ಯಭಾಷಿಗರಲ್ಲೂ ಕನ್ನಡತನ ಮೂಡುತ್ತದೆ. ಇದರಿಂದ ನಮ್ಮ ಭಾಷೆ ನಾವು ಉಳಿಸುವುದರ ಜೊತೆಗೆ ಬೆಳೆಸಲು ಸಹಕಾರಿಯಾಗುವುದು ಎಂದು ಹೇಳಿದರು.

ಕ್ಲಬ್‍ನ ಪದಾಧಿಕಾರಿಯಾದ ಗ್ಯಾಸ್ ವಿತರಕರಾಘವೇಂದ್ರ (ಗ್ಯಾಸ್ ರಾಘು) ಮಾತನಾಡುತ್ತಾಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ
ದರೂ ಅರ್ಥಗರ್ಬಿತವಾಗಿ ರೂಪಿರುವುದು ಸಂತಸವನ್ನುಂಟು ಮಾಡಿದೆ ಎಂದರು.ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಕನ್ನಡದ ಶಾಲು, ಕನ್ನಡ ಪುಸ್ತಕಗಳನ್ನು ಲಘು ಉಪಹಾರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಎಂ.ಬಿ.ಮಂಜುನಾಥ್,ನಮ್ಮ ಕನ್ನಡ ಜನಸೈನ್ಯ ರಾಜ್ಯಾಧ್ಯಕ್ಷ ಡಾ.ಬಿ.ನರಸಿಂಹಯ್ಯ. ಕಸಾಪದ ರಂಗ
ನಾಥ್, ಕ್ಲಬ್‍ನ ಸುರೇಂದ್ರ, ರಾಮಣ್ಣ, ಗುಪ್ತ, ಲೋಕೇಶ್, ಕನಿಪಾ ಧ್ವನಿ ತಾ.ಖಜಾಂಚಿ ಶರಣಬಸಪ್ಪ ಗೌಡರ, ಬಾಜಪ ವಿನೋದ್, ಶಿವಲಿಂಗಯ್ಯ, ಉಡುಪಿ ಗ್ರ್ಯಾಂಡ್ ಹೋಟೆಲ್ ಮಾಲೀಕ ಉಮೇಶ್ ಶೆಟ್ಟಿ, ರೇಖಾ, ಆಶಾ, ಗಂಗರಾಜು, ಗುರುಮೂರ್ತಿ ಸೇರಿದಂತೆ ಹಲವರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು