LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಮುಖ್ಯಮಂತ್ರಿಗಳ ಮನೆಗೆ ಜಾಥ - ತಡೆದ ಪೋಲೀಸರು ಸಹನೆ ಕಳೆದುಕೊಂಡ ಭೂಸ್ವಾಧೀನ ವಿರೋಧಿ ರೈತರು | ಪೋಲೀಸರ ಎಳೆದಾಟದಲ್ಲಿ ಹಲವಾರು ರೈತರಿಗೆ ಗಾಯ

ದೇವನಹಳ್ಳಿ: ಬಲವಂತವಾಗಿ ರೈತರ ಭೂಸ್ವಾಧೀನ ಮಾಡಿಕೊಂಡು ಬಂಡವಾಳ ಶಾಹಿಗಳಿಗೆ ಮಾರಿಕೊಳ್ಳುವ ಹುನ್ನಾರ ನಡೆದಿದೆ, ಈಗಿನ ಕಾಂಗ್ರೆಸ್ ಸರ್ಕಾರದ ಭೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನಡೆಯನ್ನು ವಿರೋಧಿಸಿ ರಾಜ್ಯ ಮಟ್ಟದ ಭೂಸ್ವಾಧೀನ ವಿರೋಧಿ ಹೋರಾಟ ನಡೆಸಲಾಯಿತು, ರೈತರ ಸಭೆ ನಡೆಸಿ ಮುಖ್ಯಮಂತ್ರಿಗಳ ಮನೆಗೆ ಜಾಥಾ ಹೊರಡಲು ಸಿದ್ದರಾದಾಗ ಪೋಲೀಸರು ಅವರನ್ನು ವಶಪಡಿಸಿಕೊಂಡರು, ಪೋಲೀಸರ ಎಳೆದಾಟದಲ್ಲಿ ಕೆಲವು ರೈತರಿಗೆ ಗಾಯಗಳಾದವು.

ಚನ್ನರಾಯಪಟ್ಟಣ ರೈತರ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಗೆ ಬೆಂಬಲ ವ್ಯಕ್ತಪಡಿಸಿ, ಹಲವಾರು ರೈತಪರ, ಕನ್ನಡಪರ, ದಲಿತಪರ ಸಂಘಟನೆಗಳ ಸುಮಾರು ೧ಸಾವಿರಕ್ಕೂ ಅಧಿಕ ಜನ ದೇವನಹಳ್ಳಿ ಟೌನ್ ಹಳೇ ಬಸ್ ನಿಲ್ದಾಣದಲ್ಲಿ ಭಾಗವಹಿಸಿ ಫ್ರತಿಭಟನೆ ನಡೆಸಿದರು, ಈ ಸಮಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ದ ಹರಿಹಾಯ್ದರು.

ರೈತರನ್ನು ಅವಮಾನಿಸಿದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಈ ಕೂಡಲೇ ರಾಜಿನಾಮೆ ನೀಡಿ ರಾಜ್ಯ ಸರ್ಕಾರ ಭೂಸ್ವಾಧೀನವನ್ನು ಕೈಬಿಡಬೇಕು ಇಲ್ಲವಾದಲ್ಲಿ ಹಸಿರು ಸೇನೆ, ಕನ್ನಡಪರ ಸಂಘಟನೆ ಇನ್ನೂ ಹಲವಾರು ಸಂಘಟನೆಗಳು ಬೆಂಬಲದೊಂದಿಗೆ ಸುಮಾರು ರೈತ ಮಹಿಳೆಯರು ಸೇರಿದಂತೆ ೫ ಸಾವಿರ ಹೋರಾಟಗಾರರು ಚನ್ನರಾಯಪಟ್ಟಣ ರೈತರಿಗೆ ಬೆಂಬಲಿಸಿ ಶಾಂತಿಯುತವಾಗಿ ಹೋರಾಟ ಮಾಡಿದರು ಭೂ ಸ್ವಾಧೀನ ಇದೇ ರೀತಿ ಮುಂದೆವರೆದರೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೃಷಿ ಭೂಮಿ ಉಳಿಯುವುದಿಲ್ಲ ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿ ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತದೆ, ನಮ್ಮ ಭೂಮಿ ನಮ್ಮ ಹಕ್ಕು ಎಂದು ಅಗ್ರಹಿಸಿದರು.

ರೈತ ಸಂಘದ ಮಹಿಳಾ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ ರೈತರು ಹೋರಾಟ ಪ್ರಾರಂಭ ಮಾಡಿ ೮೪೨ಕ್ಕೂ ಹೆಚ್ಚು ದಿನಕಳೆದರೂ ಯಾವುದೇ ಕ್ರಮ ಕೈಗೊಳ್ಲದ ಸರ್ಕಾರ, ಈ ಹೋರಾಟಕ್ಕೆ ಬೂಸ್ವಾದೀನ ಬೇಡವೆಂದರೂ ೨ ಹಳ್ಳಿಗಳಿಗೆ ಕೊನೆಯ ನೋಟಿಸ್ ಕೊಟ್ಟಿರುವುದು ಯಾವ ನ್ಯಾಯ, ಚನ್ನರಾಯಪಟ್ಟಣದ ರೈತರ ಕೂಗು ಸಿದ್ದರಾಮಯ್ಯರಿಗೆ ಕೇಳಿಸಲಿಲ್ಲವೋ ಎಂದು ಅವರ ಮನೆಗೆ ಜಾಥ ಹೊರಟಿದ್ದೆವು, ಪೋಲೀಸ್ ಅನೇಕ ಜನ ರೈತ ಹೋರಾಟಗಾರರಿಗೆ ನೋಟೀಸ್ ನೀಡಿದ್ದಾರೆ, ರೈತರೇನು ದರೋಡೆ ಮಾಡಿದ್ದಾರೆಯೇ, ನಿಜಕ್ಕೂ ರಾಜ್ಯದಲ್ಲಿ ಸರ್ಕಾರವಿದೆಯೋ-ಇಲ್ಲವೋ, ಆಭಿವೃದ್ಧಿ ಹೆಸರಿನಲ್ಲಿ ಹೂವು, ಹರ್ಣಣು ತರಕಾರಿ ಬೆಳೆಯುವ ರೈತರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದರು.

ಈ ಹೋರಾಟದ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ಬಿ.ಆರ್. ಪಾಟೀಲ್ ರೈತರನ್ನುದ್ದೇಶಿಸಿ ಮಾತನಾಡಿ. ನಾನು ಮುಖ್ಯಮಂತ್ರಿಗಳ ಆಪ್ತ ಸಲಹೆಗಾರರಾಗಿ ಆಗಮಿಸಿಲ್ಲ ಮೊದಲಿನಿಂದಲೂ ಅನೇಕ ರೈತ ಹೋರಾಟಗಳಲ್ಲಿ ಪಾಲ್ಗೊಂಡಿದ್ದೇನೆ, ನಾನು ಈ ದಿನ ರೈತರ ಹೋರಾಟದಲ್ಲಿ ಭಾಗವಹಿಸಲು ಬಂದಿದ್ದೇನೆ, ಮುಂದೆ ಮುಖ್ಯಮಂತ್ರಿಗಳ ಜೊತೆ ನಿಮ್ಮ ಎಲ್ಲಾ ಮುಖಂಡರ ಜೊತೆ ಒಂದು ಸಭೆಯನ್ನು ಏರ್ಪಡಿಸಿ ಕೂಲಂಕುಷವಾಗಿ ಮಾತನಾಡೋಣ ಎಂದರು.

ಇದೇ ಸಂದರ್ಭದಲ್ಲಿ ಸಾಮೂಹಿಕ ರೈತ ಸಂಘದ ಮುಖಂಡರು ಚುಕ್ಕಿ ನಂಜುಡಸ್ವಾಮಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿಶಂಕರ್, ಮುಖಂಡ ಕಾರಹಳ್ಳಿ ಶ್ರೀನಿವಾಸ್, ಅತ್ತಿಬೆಲೆ ನರಸಪ್ಪ, ತಿಮ್ಮರಾಯಪ್ಪ, ರೈತ ಸಂಘ ಹಸಿರು ಸೇನೆಯ ಯುವ ಘಟಕದ ರಾಜ್ಯಾಧ್ಯಕ್ಷ ವಿನೋದ್‌ಕುಮಾರ್ ಗೌಡ್ರು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಯಶವಂತ್, ಹೆಚ್.ಎನ್. ನಾಗಭೂಷಣ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಹರೀಂದ್ರ, ರೈತ ಮುಖಂಡ ಕೆ.ಟಿ. ಗಂಗಾಧರ್, ಚಂದ್ರ ತೇಜಸ್ವಿ, ಚನ್ನರಾಯಪಟ್ಟಣ ಗ್ರಾಮಪಂಚಾಯತಿ ಅಧ್ಯಕ್ಷ ಮಾರೇಗೌಡ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡ ನಲ್ಲಪ್ಪನಹಳ್ಳಿ ನಂಜಪ್ಪ, ದಸಂಸ ರೈತ ಹೋರಾಟ ಮುಖಂಡರಾದ ತಿಮ್ಮರಾಯಪ್ಪ, ಹಲವಾರು ರೈತ ಹೋರಾಟಗಾರರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು