LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಮುದ್ದೆ ಉಣ್ಣುವ ಸ್ಪರ್ಧೆ: ದಾವಣಗೆರೆ ಯೋಗೇಶ್, ವೈಟ್ ಫೀಲ್ಡ್ನ ಸೌಮ್ಯಗೆ ಪ್ರಥಮ ಸ್ಥಾನ

ಬೆಂಗಳೂರು: ನಗರದ ಹೆಚ್‌ಎಸ್‌ಆರ್ ಬಡಾವಣೆಯ ಪರಂಗಿಪಾಳ್ಯದ ಪಾರ್ಕ್ ನಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ೫೦ರ ಪ್ರಯುಕ್ತವಾಗಿ ಪುರುಷ ಮತ್ತು ಮಹಿಳೆಯರಿಗಾಗಿ ಪ್ರತ್ಯೇಕವಾಗಿ ರಾಜ್ಯಮಟ್ಟದ ನಾಟಿ ಕೋಳಿ ಸಾರು ಮತ್ತು ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ರಾಜ್ಯದ ವಿವಿಧ ಮೂಲೆಗಳಿಂದ ನೂರಕ್ಕೂ ಅಧಿಕ ಸ್ಪರ್ಧಾಳುಗಳು ನಾಟಿ ಕೋಳಿ ಮತ್ತು ಮುದ್ದೆ ಉಣ್ಣುವ ಸ್ಪಧೆೆðಯಲ್ಲಿ ಭಾಗವಹಿಸಿ ಪೈಪೋಟಿ ನೀಡಿದರು. ದಾವಣಗೆರೆ, ರಾಮನಗರ, ಕುಣಿಗಲ್, ಮಾಲೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದರು.
ಪುರುಷರ ವಿಭಾಗದಲ್ಲಿ ದಾವಣಗೆರೆಯ ಯೋಗೇಶ್ ಹದಿಮೂರು ಮುದ್ದೆಗಳನ್ನು ತಿಂದು ಪ್ರಥಮ ಸ್ಥಾನ ಪಡೆದು ಬಹುಮಾನವಾಗಿ ಟಗರು ಪಡೆದರು,ಮಹಿಳೆಯರ ವಿಭಾಗದಲ್ಲಿ ವೈಟ್ ಫೀಲ್ಡ್ನ ಸೌಮ್ಯ ಒಂಬತ್ತು ಮುದ್ದೆ ಸವಿದು ಪ್ರಥಮ ಸ್ಥಾನ ಪಡೆದು ಮೂವತ್ತೆರಡು ಇಂಚಿನ ಟಿವಿ ಬಹುಮಾನವಾಗಿ ಪಡೆದರು.
ಬೆಂಗಳೂರಿನ ಶ್ರೀನಿವಾಸ ರೆಡ್ಡಿ ಹದಿಮೂರು ಮುದ್ದೆ ತಿಂದು ದ್ವಿತೀಯ ಸ್ಥಾನ ಪಡೆದು ಕುರಿ ಪಟ್ಲಿ, ಕುಣಿಗಲ್ ನ ಲೋಕೆಶ್ ೧೨ಮುದ್ದೆ ತಿಂದು ತೃತೀಯ ಸ್ಥಾನ ಪಡೆದು ಎರಡು ನಾಟಿ ಕೋಳಿಗಳನ್ನು ಬಹುಮಾನವಾಗಿ ಪಡೆದರೆ, ಮಹಿಳೆಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಚಂದ್ರಕಲಾ ಸಿ.ಜಿ.ಎಂಟು ಮುದ್ದೆ ತಿಂದು ಮಿಕ್ಸರ್ ಗ್ಲೆöÊಡರ್, ಸ್ಟಾರ್ ಹೋಟೆಲ್ ನ ಯಾವುದೇ ಕಾರ್ಯಕ್ರಮಗಳಲ್ಲಿ ಹಾಜರಾಗಿ ಊಟ ಸವಿಯುವ ಮಹಿಳೆಯೊಬ್ಬರು ಏಳು ಮುದ್ದೆ ತಿಂದು ತೃತೀಯ ಸ್ಥಾನ ಪಡೆದು ಕಿಚನ್ ಸೆಟ್ ಬಹುಮಾನವಾಗಿ ಪಡೆದರು.
ಕಾಂಗ್ರೆಸ್ ಮುಖಂಡ, ಚಲನ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ, ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ನಾರಾಯಣ ಗೌಡ,ವಾಸುದೇವ ರೆಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು.
ಆಯೋಜಕ, ವಕೀಲ ಅನಿಲ್ ರೆಡ್ಡಿ ಮಾತನಾಡಿ, ಮುದ್ದೆ ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆ ಮಂಡ್ಯ ಭಾಗದಲ್ಲಿ ಕಾಣುವಂತಾಗಿದ್ದು, ಆದರೆ ಇದೇ ಪ್ರಥಮ ಭಾರಿಗೆ ಬೆಂಗಳೂರಿನ ಹೆಚ್.ಎಸ್.ಆರ್.ಬಡಾವಣೆಯಲ್ಲಿ ಆಯೋಜನೆ ಮಾಡಲಾಗಿದೆ, ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಮಾಡಲಾಗುವುದು, ಮುಂದಿನ ವರ್ಷದ ನವೆಂಬರ್ ೧೬ರಂದು ನಾಟಿ ಕೋಳಿ ಮುದ್ದೆ ತಿನ್ನುವ ಸ್ಪರ್ದೆ ಆಯೋಜಿಸಲಾಗುವುದು, ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಂದಿ ಆಗಮಿಸಿದ್ದರು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ ಭಾಗಗಳಲ್ಲಿ ಆಯಾ ಭಾಗಗಳ ಖಾದ್ಯಗಳ ತಿನ್ನುವ ಸ್ಪರ್ಧೆ ಆಯೋಜನೆ ಮಾಡಲಾಗುವುದು ಎಂದು ಆಯೋಜಕ ಅನಿಲ್ ರೆಡ್ಡಿ ತಿಳಿಸಿದರು.
ಸಧೆÉð ವೀಕ್ಷಿಸಲು ಆಗಮಿಸಿದ್ದ ಸಾವರಾರು ಮಂದಿ ಮುದ್ದೆ, ನಾಟಿಕೋಳಿ ಊಟ, ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು