LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮೈದಾನದಲ್ಲಿ ಕಿತ್ತಾಟ: ಸಿರಾಜ್, ಹೆಡ್ ವಿರುದ್ಧ ಐಸಿಸಿ ಶಿಸ್ತುಕ್ರಮ?

ಅಡಿಲೇಡ್‍ನಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ನಡುವಿನ ಮಾತಿನ ಚಕಮಕಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗಂಭೀರವಾಗಿ ಪರಿಗಣಿಸಿದೆ. ಇಬ್ಬರೂ ಶಿಸ್ತುಕ್ರಮಕ್ಕೆ ಒಳಗಾಗುವ ಸಾಧ್ಯತೆ ಇದೆ.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ, ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‍ನ 82ನೇ ಓವರ್‍ನಲ್ಲಿ ಸಿರಾಜ್ ಎಸೆದ ಅದ್ಭುತ ಯಾರ್ಕರ್‍ಗೆ ಟ್ರಾವಿಸ್ ಹೆಡ್ ಬೌಲ್ಡ್ ಆಗಿದ್ದರು. ಆದರೆ ಆಗಲೇ ಹೆಡ್ 140 ರನ್ ಚಚ್ಚಿದ್ದರು. ಹೆಡ್‍ರನ್ನು ಔಟ್ ಮಾಡಿದ್ದ ಸಿರಾಜ್, ಅವರಿಗೆ ಪೆವಿಲಿಯನ್ ದಾರಿ ತೋರಿಸುವಾಗ ಹದ್ದು ಮೀರಿ ವರ್ತಿಸಿದ್ದರು. ಅವರ ಆಕ್ರಮಣಕಾರಿ ಸ್ವಭಾವ ಚರ್ಚೆಗೆ ಗ್ರಾಸವಾಗಿತ್ತು.

ಈ ವೇಳೆ ಸಿರಾಜ್‍ಗೆ ಹೆಡ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ಆದರೆ ಅವರಿಬ್ಬರ ನಡುವೆ ವಿನಿಮಯವಾದ ಮಾತುಗಳು ಏನು ಎನ್ನುವುದು ಸ್ಪಷ್ಟವಾಗಿಲ್ಲ.
ಅಡಿಲೇಡ್ ಟ್ರಾವಿಸ್ ಹೆಡ್ ತವರಾಗಿರುವುದರಿಂದ ಸಹಜವಾಗಿಯೇ ಅವರಿಗೆ ಪ್ರೇಕ್ಷಕರಿಂದ ಹೆಚ್ಚಿನ ಬೆಂಬಲ ಸಿಕ್ಕಿತ್ತು. ಸಿರಾಜ್ ಬೌಂಡರಿ ಲೈನ್ ಬಳಿ ಫೀಲ್ಡಿಂಗ್‍ಗೆ ನಿಂತಿದ್ದಾಗ ಆಸ್ಟ್ರೇಲಿಯಾ ಪ್ರೇಕ್ಷಕರು 'ಬೂ' ಎಂದು ಅವರನ್ನು ಅಣಕಿಸಿದ್ದರು.

ಟ್ರಾವಿಸ್ ಹೆಡ್ ಹೇಳಿದ್ದೇನು?ಔಟ್ ಆಗುವುದಕ್ಕೂ ಮುನ್ನ ಸಿರಾಜ್ ಎಸೆತವನ್ನು ಹೆಡ್ ಸಿಕ್ಸರ್‍ಗೆ ಅಟ್ಟಿದ್ದರು. ತಾವು ವಿಕೆಟ್ ಒಪ್ಪಿಸಿದ ಬಳಿಕ 'ಚೆನ್ನಾಗಿ ಬೌಲ್ ಮಾಡಿದ್ದಿರಿ' ಎಂದು ಹೇಳಿದ್ದಾಗಿ ದಿನದ ಆಟದ ನಂತರ ಸುದ್ದಿಗೋಷ್ಠಿಯಲ್ಲಿ ಹೆಡ್ ಹೇಳಿದ್ದರು.ಸಿರಾಜ್ ಪ್ರತಿಕ್ರಿಯೆ ಏನು?ಆದರೆ ಸ್ಟಾರ್ ಸ್ಪೋರ್ಟ್ಸ್‍ಗೆ ನೀಡಿದ ಸಂದರ್ಶನದಲ್ಲಿ ಸಿರಾಜ್, ಹೆಡ್ ಹೇಳಿಕೆಯನ್ನು ನಿರಾಕರಿಸಿದ್ದರು. 'ಚೆನ್ನಾಗಿ ಬೌಲ್ ಮಾಡಿದ್ದಿ' ಎಂಬುದಾಗಿ ಹೆಡ್ ಹೇಳಲೇ ಇಲ್ಲ ಎಂದಿದ್ದರು.
"ಒಳ್ಳೆಯ ಎಸೆತವನ್ನು ಸಿಕ್ಸರ್‍ಗೆ ಬಾರಿಸಿದಾಗ, ಅದು ನಿಮ್ಮಲ್ಲಿ ವಿಭಿನ್ನವಾಗಿ ಕಿಚ್ಚು ಹೊತ್ತಿಸುತ್ತದೆ. ನಾನು ಅವರನ್ನು ಬೌಲ್ಡ್ ಮಾಡಿದಾಗ ನಾನು ಸಂಭ್ರಮಿಸಿದ್ದೆ ಅಷ್ಟೆ. ಆಗ ಅವರು ನನ್ನನ್ನು ನಿಂದಿಸಿದರು. ಅದನ್ನು ನೀವೂ ಟಿವಿಯಲ್ಲಿ ನೋಡಿರುತ್ತೀರಿ" ಎಂದು ಸಿರಾಜ್ ಪ್ರತಿಕ್ರಿಯೆ ನೀಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು