LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

`ಯುವಕರೇ ಮಾದಕ ವ್ಯಸನದಿಂದ ದೂರವಿರಿ’

ಕೋಲಾರ: ಅಧಿಕ ರಕ್ತದೊತ್ತಡ, ಮಾದಕ ವ್ಯಸನ, ಧೂಮಪಾನ ಮತ್ತಿತರ ಕಾರಣಗಳಿಂದ ಬರುವ ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ) ತಡೆಗೆ ಜಿಲ್ಲಾಸ್ಪತ್ರೆಯಲ್ಲಿಯೂ ಚಿಕಿತ್ಸೆಗೆ ಅಗತ್ಯ ವೈದ್ಯರು, ಸಿಬ್ಬಂದಿ ಇದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್.ಹೊಸಮನಿ ಕರೆ ನೀಡಿದರು.

ಜಿಲ್ಲಾಡಳಿತ,ಜಿಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಬ್ರೈನ್ ಹೆಲ್ತ್ ಕಾರ್ಯಕ್ರಮ ಹಾಗೂ ಅಂತರಗಂಗಾ ವೃದ್ದಾಶ್ರಮ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ)ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ವೃದ್ದರು ಮಕ್ಕಳಂತೆ ಎಂಬುದನ್ನು ಅರಿತು ಅವರ ಆರೋಗ್ಯ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಕೆಲಸವನ್ನು ಮಾಡಬೇಕು, ಅವರಲ್ಲಿನ ಏಕಾಂಗಿತನ ಹೋಗಲಾಡಿಸಿ ಅವರೊಂದಿಗೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯ ತುಂಬಬೇಕು ಎಂದು ತಿಳಿಸಿದರು.60 ರಿಂದ 70 ವಯಸ್ಸಿನವರಲ್ಲಿ ಮರೆಗುಳಿತನ ಸಮಸ್ಯೆ ಸಾಮಾನ್ಯ, ಇದರಿಂದ ಬಳಲುತ್ತಿರುವವರಲ್ಲಿ ಆಲೋಚನಾ ತೊಂದರೆ, ಮನಸ್ಥಿತಿ ಬದಲಾವನೆ, ನಡವಳಿಕೆ ಕ್ಷೀಣತೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಸಾಮಥ್ರ್ಯ ಕುಗ್ಗುತ್ತದೆ ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಚಿಕಿತ್ಸೆ ನೀಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ) ಹಲವಾರು ಕಾರಣಗಳ ಸಂಯೋಜನೆಯಿಂದ ಬರುತ್ತದೆ, ಜದಾಹರಣೆಗೆ ಜನನಾತ್ಮಕ ಅಂಶಗಳು ಅಂದರೆ ಕುಟುಂಬದ ಐತಿಹಾಸಿಕ ಚರಿತ್ರೆ, ಅಷ್ಟೇ ಅಲ್ಲದೇ ಪರಿಸರದ ಅಂಶಗಳು ಅಂದರೆ ತಲೆಗೆ ಗಾಯ, ಸ್ಟ್ರೋಕ್, ಅಧಿಕ ರಕ್ತದೊತ್ತಡ, ಜೀವನ ಶೈಲಿಯ ಅಂಶಗಳಾದ ಶಾರೀರಿಕ ಕ್ರಿಯಾಶೀಲತೆಯ ಕೊರತೆ, ಧೂಮಪಾನ,ಮದ್ಯಪಾನ ದುಷ್ಟಾಹಾರ ಪದ್ದತಿ ಯಿಂದಲೂ ಬರಬಹುದು ಎಂದರು.

ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ಸೌಲಭ್ಯ: ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಮಾನಸಿಕ ಕಾಯಿಲೆಗಳಲ್ಲಿ ಅಲ್ಝೀಮರ್ಸ್ ರೋಗ (ಮರೆವು ಕಾಯಿಲೆ) ಒಂದಾಗಿದ್ದು, ಇದು ಅನುವಂಶಿಕತೆಯಿಂದ, ಪದೇ ಪದೇ ತಲೆಗೆ ಪೆಟ್ಟು, ಮಾದಕ ವ್ಯಸನ, ಅಧಿಕ ಒತ್ತಡದಿಂದ ಬರುತ್ತಿದೆ ಎಂದು ತಿಳಿಸಿದರು.

ಅಧಿಕ ರಕ್ತದೊತ್ತಡದಿಂದಲೂ ಈ ಕಾಯಿಲೆ ಬರುವುದರಿಂದ ಒತ್ತಡವಿಲ್ಲದ ಜೀವನ ರೂಢಿಸಿಕೊಳ್ಳಬೇಕು, ಯೋಗಾಭ್ಯಾಸ, ಧ್ಯಾನ, ಪೌಷ್ಟಿಕ ಆಹಾರ ಸೇವನೆ ರಕ್ತದೊತ್ತಡ ನಿಯಂತ್ರಣದಲ್ಲಿಟ್ಟುಕೊಂಡು ವೈದ್ಯರ ಬಳಿ ಚಿಕಿತ್ಸೆಗೆ ಒಳಗಾಗಬೇಕಾಗುವುದು.ಇದರ ಜತೆಗೆ ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಹೈಕೊಲೆಸ್ಟ್ರಾಲ್, ಪಾರ್ಕಿನ್‍ಸನ್ಸ್‍ಗಳಿಂದ ಈ ಕಾಯಿಲೆ ಉಂಟಾಗುತ್ತದೆ ಎಂದು ತಿಳಿಸಿದ ಅವರು, ಸದರಿ ಕಾಯಿಲೆಗೆ ಕೋಲಿನಸ್ಟೇಸ್ ಇನ್ಟಿಬಾಬರ್‍ಗಳು, ಮೊಮೊಚೈನ್ ಹಾಗೂ ಸಮ್ಮಿಶ್ರ, ಚಿಕಿತ್ಸಾ ವಿಧಾನ, ಮತ್ತು ಔಷಧೋಪಚಾರದಿಂದ ಪುನಶ್ಚೇತನದ ಮೂಲಕ ಗುಣಪಡಿಸಬಹುದು ಎಂದರು.

ಹಿಂದೆ ಮಾನಸಿಕ ಕಾಯಿಲೆಗೆ ನಿಮ್ಹಾನ್ಸ್‍ಗೆ ಹೋಗಬೇಕಾಗಿತ್ತು ಆದರೆ ಈಗ ಕರ್ನಾಟಕ ಬ್ರೈನ್ ಹೆಲ್ತ್ ಇನ್ಷಿಯೇಟಿವ್ ನಡಿ ಸ್ಥಳೀಯ ವೈದ್ಯರಿಗೆ ತರಬೇತಿ ನೀಡಿದ್ದು, ಜಿಲ್ಲಾಸ್ಪತ್ರೆಯಲ್ಲೂ ಇದರ ಸೌಲಭ್ಯ ಇದ್ದು, ಅಲ್ಲಿ ಮನೋ ವೈದ್ಯರು ಸಿಬ್ಬಂದಿ ಇದ್ದಾರೆ ಎಂದರು. ಜಿಲ್ಲಾಸ್ಪತ್ರೆಯಲ್ಲಿ ಸಿಗುವ ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಎನ್.ಸಿ. ನಾರಾಯಣಸ್ವಾಮಿ ಮಾತನಾಡಿ, ಮನೋಚೈತನ್ಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶಿಬಿರಗಳನ್ನು ನಡೆಸುವ ಮೂಲಕ ಸ್ಥಳೀಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂತರಗಂಗಾ ಆಶ್ರಮದ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಸ್.ಶಂಕರ್, ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಮನೋವೈದ್ಯ ಡಾ.ಶರತ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪ್ರೇಮಾ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ವೃದ್ದಾಶ್ರಮದ ಶಿಬಿರಾರ್ಥಿಗಳು ಹಾಗೂ ವೈದ್ಯ ವಿದ್ಯಾರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು