LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ರಂಗಶಂಕರದಂತಹ ಥಿಯೇಟರ್ ಗಳು ಸಣ್ಣ ಪಟ್ಟಣಗಳಲ್ಲಿ ತಲೆಯೆತ್ತಬೇಕು: ಅರುಂಧತಿ ನಾಗ್

ಬೆಂಗಳೂರು: ''ನನಗೆ ಸೂಪರ್ ಪವರ್ ಇದ್ದರೆ ಭಾರತದ ಸಣ್ಣ ಪಟ್ಟಣಗಳಲ್ಲಿ ರಂಗಶಂಕರದಂತಹ ರಂಗಮಂದಿರಗಳನ್ನು ಸ್ಥಾಪಿಸುವಂತೆ ಶ್ರೀಮಂತರನ್ನು ಕೇಳಿಕೊಳ್ಳುತ್ತಿದೆ'' ಇದು ಹಿರಿಯ ರಂಗಕರ್ಮಿ, ನಟಿ ರಂಗಶಂಕರದ ನಿರ್ದೇಶಕಿ 2024ನೇ ಸಾಲಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express)ನ ದೇವಿ ಪ್ರಶಸ್ತಿ ವಿಜೇತೆ ಅರುಂಧತಿ ನಾಗ್ ಅವರ ಮಾತು.

ಅರುಂಧತಿ ನಾಗ್ ಅವರು ರಂಗಶಂಕರದ ಸಂಸ್ಥಾಪಕರು -- ಬೆಂಗಳೂರಿನ ಅಚ್ಚುಮೆಚ್ಚಿನ ರಂಗಮಂದಿರಗಳಲ್ಲಿ ಒಂದು ಮತ್ತು ಅತ್ಯಂತ ಜನಪ್ರಿಯವಾದದ್ದು. ರಂಗಶಂಕರ ಇತ್ತೀಚೆಗೆ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸಿದೆ.

ಅವರು 'ಲೀಡಿಂಗ್ ಚೇಂಜ್: ವಾಟ್ಸ್ ದಿ ಸೂಪರ್ ಪವರ್' ಎಂಬ ಶೀರ್ಷಿಕೆಯ ದುಂಡುಮೇಜಿನ ಮಾತುಕತೆಯಲ್ಲಿ ಖ್ಯಾತ ಲೇಖಕಿ ಮತ್ತು ಪತ್ರಕರ್ತೆ ಕಾವೇರಿ ಬಾಮ್‌ಜೈ ಅವರೊಂದಿಗೆ ನಡೆದ ಸಂಭಾಷಣೆ ವೇಳೆ ಹೀಗೆ ಹೇಳಿದ್ದಾರೆ. ನಿನ್ನೆ ಶನಿವಾರ ಬೆಂಗಳೂರಿನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾಪಿಸಿದ ದೇವಿ ಪ್ರಶಸ್ತಿಗಳ 29 ನೇ ಆವೃತ್ತಿಯ ಕಾರ್ಯಕ್ರಮ ಏರ್ಪಟ್ಟಿತ್ತು.

ದೆಹಲಿ, ಮುಂಬೈ, ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ರಂಗಮಂದಿರಗಳಿರುತ್ತವೆ. ಅಲ್ಲಿಂದಾಚೆಗೆ ಸಣ್ಣಪುಟ್ಟ ಪಟ್ಟಣಗಳಲ್ಲಿ ರಂಗಮಂದಿರಗಳು ತಲೆಯೆತ್ತಬೇಕು. ರಂಗಮಂದಿರಗಳನ್ನು 'ಬಿ' ಮತ್ತು 'ಸಿ' ವರ್ಗದ ನಗರಗಳಿಗೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಹೇಳಿದರು. ಸಣ್ಣ ಪಟ್ಟಣಗಳಲ್ಲಿ ರಂಗಶಂಕರದಂತಹ ರಂಗಮಂದಿರಗಳು ಸ್ಥಾಪನೆಯಾಗುವುದರಿಂದ ದೊಡ್ಡ ಬದಲಾವಣೆಯನ್ನು ತರಬಹುದು, ಇದು ತಮ್ಮ ಕನಸಾಗಿದೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು