`
ಕೆ.ಆರ್.ನಗರ: ಯಶಸ್ವಿನಿ, ಬಿಸಿಯೂಟ, ಸ್ತಿçÃ-ಶಕ್ತಿ ಸಂಘಗಳ ಬಲವರ್ಧನೆ ಮತ್ತಿತರ ಜನಪರ ಯೋಜನೆಗಳನ್ನು ರಾಜ್ಯಕ್ಕೆ ನೀಡಿ ದೇಶವೇ ಹೆಮ್ಮೆಪಡುವಂತೆ ಮಾಡಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುವರು ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ ಹೇಳಿದರು.ಪಟ್ಟಣದ ಎಚ್.ವಿಶ್ವನಾಥ್ ನಿವಾಸದಲ್ಲಿ 29 ರಿಂದ 79 ಟೂ 50 ವರ್ಷಗಳ ರಾಜಕೀಯ ನಡೆ ಬಗ್ಗೆ ಕೃತಜ್ಞತಾ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಶ್ವನಾಥ್ ಸುದೀರ್ಘ 50 ವರ್ಷಗಳ ರಾಜಕೀಯ ಜೀವನದಲ್ಲಿ ನೇರನುಡಿ, ನಿಷ್ಠುರ ಮಾತುಗಳನ್ನಾಡಿದ್ದು, ರಾಜಕೀಯ ವಿದ್ಯಮಾನಗಳಲ್ಲಿ ಹೆಚ್ಚು ಪ್ರಚಲಿರಾಗುವುದರ ಜತೆಗೆ ತಮ್ಮ ಹುಟ್ಟೂರು ಅಡಗೂರನ್ನು ಪ್ರಸಿದ್ಧಿಗೊಳಿಸಿದರು ಎಂದರು.
ರಾಜಕೀಯದ ಜತೆಗೆ ವಿಶ್ವನಾಥ್ ಸಾಹಿತಿಗಳಾಗಿದ್ದು, ಹಲವು ಪುಸ್ತಕಗಳನ್ನು ರಚಿಸಿಸಿರುವುದರಿಂದ ಹಳ್ಳಿ ಹಕ್ಕಿಯೆಂದೇ ಪ್ರಸಿದ್ಧರು. ವಿಶ್ವನಾಥ್ ಕರ್ನಾಟಕದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು ಸಕ್ರಿಯ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.ಶಿಕ್ಷಣ ಹಾಗೂ ಸಹಕಾರ ಇಲಾಖೆಯಲ್ಲಿ ಕ್ರಾಂತಿ ಮಾಡಿದ ವಿಶ್ವನಾಥ್ ಸುದೀರ್ಘ ರಾಜಕೀಯ ನಡೆನುಡಿ ಹಾಗೂ ಜಾರಿಗೆ ತಂದ ಜನಪರ ಯೋಜನೆಗಳನ್ನು ಮುಂದಿನ ಪೀಳಿಗೆಗೆ ಪುಸ್ತಕ ರೂಪದಲ್ಲಿ ತಂದು ಕ್ಷೇತ್ರದ ಜನತೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಗ್ರಂಥಾಲಯದಲ್ಲಿಡಬೇಕಿದೆ. ಪುಸ್ತಕ ಹೊರ ತರಲು ಸಾಹಿತಿಗಳ ತಂಡವನ್ನು ರಚಿಸಬೇಕಿದೆಯೆಂದರು. ಎಚ್.ವಿಶ್ವನಾಥ್ ಮಾತನಾಡಿ ಕ್ಷೇತ್ರದ ಜನತೆ ಕೊಟ್ಟ ಶಕ್ತಿಯಿಂದ ರಾಜ್ಯಕ್ಕೆ ಅಗತ್ಯ ಯೋಜನೆಗಳನ್ನು ನೀಡಿದೆನೆಂಬುದನ್ನು ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರದ ಜನತೆಗೆ ಕೃತಜ್ಞತೆ ಅರ್ಪಿಸಬೇಕು ಎಂದರು.
ಇAದಿನ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದೆ. ಸಾಮಾನ್ಯ ವ್ಯಕ್ತಿ ಚುನಾವಣೆ ಎದುರಿಸಲಾರ. ಪ್ರಸ್ತುತ ರಿಯಲ್ ಎಸ್ಟೇಟ್ ಕುಳಗಳು ಶಾಸಕರಾಗುತ್ತಿದ್ದಾರೆಂದ ಅವರು ರಾಜ್ಯದ ಜನತೆಗೆ ಉಚಿತ ಅಕ್ಕಿಯ ಬದಲಿಗೆ ಅಕ್ಷರ ಮತ್ತು ಆರೋಗ್ಯ ಬೇಕು. ಶಾಸಕರೇ ವಿದ್ಯಾಸಂಸ್ಥೆಗಳನ್ನು ತೆರೆದಿದ್ದು, ಸರ್ಕಾರಿ ಶಾಲೆಗಳನ್ನು ಮುಚ್ಚಿಸುತ್ತಿದ್ದಾರೆಂದರು.ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಕೆ.ಎನ್.ಬಸಂತ್, ನಿವೃತ್ತ ಡಿಡಿಪಿಐಗಳಾದ ಎಸ್.ಟಿ.ಜವರೇಗೌಡ, ಸಿ.ಎಸ್.ರಾಮಲಿಂಗು, ಜಿ.ಪಂ. ಮಾಜಿ ಸದಸ್ಯ ಅಮಿತ್.ವಿ.ದೇವರಹಟ್ಟಿ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಕಸಾಪ ಅಧ್ಯಕ್ಷ ಜಿ.ಡಿಂಡಿಮಶAಕರ್, ಮುಖಂಡರಾದ ನಾಗರಾಜು, ಶ್ರೀನಿವಾಸಗೌಡ, ಪ್ರಭಾಕರ್‌ಜೈನ್, ಎಸ್.ಪಿ.ಆನಂದ್, ಜೆ.ಶಿವಣ್ಣ, ಕೋಳಿಪ್ರಕಾಶ್, ಕೆ.ಪಿ.ಪ್ರಭುಶಂಕರ್, ಯೋಗಣ್ಣ, ನಾಗರತ್ಮಮ್ಮ, ದಾಕ್ಷಾಯಿಣಿ, ವೀರಭದ್ರಾಚಾರ್, ಎ.ಟಿ.ಗೋಪಾಲ್, ಡಾ.ಕೆ.ಆರ್.ಗೌತಮ್, ಎಂ.ಟಿ.ಕುಮಾರ್, ರೈತ ಮುಖಂಡರಾದ ಕೆ.ಎಲ್.ಸ್ವಾಮಿ, ಎ.ಎಸ್.ರಾಮಪ್ರಸಾದ್, ಎಂ.ಜೆ.ಕುಮಾರ್, ತಮ್ಮನಾಯಕ, ಕೆಂಪೇಗೌಡ, ಸಿ.ಪಿ.ರಮೇಶ್, ಎಂ.ಬಿ.ಲೋಕನಾಥ್, ರಾಧಾಕೃಷ್ಣ ಹಾಜರಿದ್ದರು.