LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ರಣಜಿ ಪಂದ್ಯಗಳಲ್ಲಿ ಘಟಾನುಘಟಿಗಳ ಪರದಾಟ

ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಸೇರಿದಂತೆ ಟೀಂ ಇಂಡಿಯಾದ ಹಿರಿಯ ಆಟಗಾರರು ರಣಜಿ ಆಡಲು ಮನಮಾಡಿದಾಗ ದೊಡ್ಡ ಮಟ್ಟಿನ ನಿರೀಕ್ಷೆಗಳಿದ್ದವು, ಅದಕ್ಕೆ ತಕ್ಕಂತೆ ಬುಧವಾರವಷ್ಟೇ ಮುಂಬೈ ರಣಜಿ ತಂಡದ ನಾಯಕ ಅಜಿಂಕ್ಯ ರಹಾನೆ ಅವರು ಸಹ ರೋಹಿತ್ ಅವರು ಖಂಡಿತವಾಗಿಯೂ ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಎಂದು ಆಶಾವಾದದಿಂದ ನುಡಿದಿದ್ದರು.

ಆದರೆ ಎಲ್ಲರ ನಿರೀಕ್ಷೆಯನ್ನೂ ಇದೀಗ ರೋಹಿತ್ ಶರ್ಮಾ ಹುಸಿ ಮಾಡಿದ್ದಾರೆ. ಜಮ್ಮು ಕಾಶ್ಮೀರದ ವಿರುದ್ಧ ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಅವರು ಗಳಿಸಿದ್ದು ಕೇವಲ 3 ರನ್, ವೇಗಿ ಉಮರ್ ನಝೀರ್ ಬೌಲಿಂಗ್ ನಲ್ಲಿ ಪಿಕೆ ಡೋಗ್ರಾ ಅವರಿಗೆ ಕ್ಯಾಚಿತ್ತು ಔಟಾದರು. ಜೈಸ್ವಾಲ್, ಅಯ್ಯರ್ ಕತೆಯೂ ಅಷ್ಟೇ ಇದು ರೋಹಿತ್ ಶರ್ಮಾ ಅವರು ಮಾತ್ರ ಅಲ್ಲ, ಮುಂಬೈ ತಂಡದಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್ ಅವರದ್ದೂ ಇದೇ ಹಣೆಬರಹ.

ಭಾರತದ ಅತ್ಯಂತ ಭರವಸೆಯ ಓಪನ್ ಆಗಿರುವ ಯಶಸ್ವಿ ಜೈಸ್ವಾಲ್ ಅವರು 4 ರನ್ ಗಳಿಸಿ ರೋಹಿತ್ ಅವರಿಗಿಂತಲೂ ಮೊದಲೇ ಪೆವಿಲಿಯನ್ ಸೇರಿಕೊಂಡಿದ್ದರು. ಮುಂಬೈ ನಾಯಕ ಅಜಿಂಕ್ಯ ರೆಹಾನೆ 12 ರನ್ ಮಾಡಿ ಔಟಾದರೆ, ಶ್ರೇಯಸ್ ಅಯ್ಯರ್ ಅವರೂ ಗಳಿಸಿದ್ದು 11 ರನ್ ಮಾತ್ರ. ಯಶಸ್ವಿ ಜೈಸ್ವಾಲ್ ಅವರು ಆರಂಭಿಕ ಮಧ್ಯಮ ವೇಗಿ ಅಕ್ವಿಬ್ ನಖ್ವಿ ಅವರಿಗೆ ವಿಕೆಟ್ ಒಪ್ಪಿಸಿದರೆ, ರೋಹಿತ್ ಮತ್ತು ಶ್ರೇಯಸ್ ಅಯ್ಯರ್ ಅವರು ಮತ್ತೊಬ್ಬ ಮಧ್ಯಮ ವೇಗಿ ಉಮರ್ ನಝೀರ್ ಅವರ ಬೌಲಿಂಗ್ ಅನ್ನು ಎದುರಿಸಲಾಗದೆ ಪೇಚಿಗೀಡಾದರು.ಶಾರ್ದೂಲ್ ಠಾಕೂರ್ ಕ್ರೀಸಿಗಂಟಿಕೊಂಡು ಅರ್ಧಶತಕ ಗಳಿಸಿದ್ದರಿಂ ಮುಂಬೈ ಮೊತ್ತ 100 ರನ್ ದಾಟಿದೆ. ಮತ್ತೊಂದು ತುದಿಯಿಂದ ಸರಿಯಾದ ಬೆಂಬಲ ಸಿಗದ ಶಾರ್ದೂಲ್ ಠಾಕೂರ್ 51 ರನ್ ಗಳಿಸಿ ಕೊನೆಯದಾಗಿ ಔಟಾಗುವುದರೊಂದಿಗೆ ಬಲಿಷ್ಠ ತಂಡದ ಇನ್ನಿಂಗ್ಸ್ 120 ರನ್ ಗಳಿಗೆ ಕೊನೆಗೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು