LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ರೀಜನಲ್ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿ ಸ್ಥಾಪಿಸಲು ಅನುಮೋದನೆಗಾಗಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ರಾಜ್ಯ ಸಚಿವ ಕೆ.ಹೆಚ್.ಮುನಿಯಪ್ಪ

ದೇವನಹಳ್ಳಿ: ಆರ್‍ಆರ್‍ಎಸ್‍ಎಲ್ ಜಕ್ಕೂರಿನಲ್ಲಿ 8 ವರ್ಕಿಂಗ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿಗಳನ್ನು ನಿರ್ಮಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಆಹಾರ ಸಚಿವ ಕೆಹೆಚ್ .ಮುನಿಯಪ್ಪ.ಭಾರತ ಸರ್ಕಾರವು “ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು ಮಾಪನಶಾಸ್ತ್ರದ ಮೂಲಸೌಕರ್ಯವನ್ನು ಬಲಪಡಿಸುವುದು” ಎಂಬ ಯೋಜನೆಯಡಿಯಲ್ಲಿ 8 ವರ್ಕಿಂಗ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿಗಳನ್ನು ನಿರ್ಮಿಸಲು ರೂ.400.00 ಲಕ್ಷಗಳನ್ನು ಮಂಜೂರು ಮಾಡಿದೆ.

ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ, ಬೆಂಗಳೂರು, ಅವರು 2016 ರಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ಹಣವನ್ನು ಠೇವಣಿ ಮಾಡಿದ್ದು ಕರ್ನಾಟಕ ಸರ್ಕಾರವು “ಆಹಾರ ಭವನ” ನಿರ್ಮಿಸಲು ಆವರಣವನ್ನು ಬಳಸಿಕೊಳ್ಳಲು ನಿರ್ಧರಿಸಿತ್ತು ಮತ್ತು ಬೆಂಗಳೂರಿನ ಜಕ್ಕೂರಿನಲ್ಲಿ 8 ಎಕರೆ ಭೂಮಿಯನ್ನು ಕಾನೂನು ಮಾಪನಶಾಸ್ತ್ರ ಇಲಾಖೆಗೆ ಮಂಜೂರು ಮಾಡಿತ್ತು.

ಪ್ರಸ್ತುತ, ಒಂದು ಎಕರೆ ಪ್ರದೇಶವನ್ನು ರೀಜನಲ್ ರೆಫರೆನ್ಸ್ ಸ್ಟ್ಯಾಂಡರ್ಡ್ ಲ್ಯಾಬೊರೇಟರಿ (ಖಖSಐ) ಗಾಗಿ ಬಳಸಲಾಗಿದೆ ಮತ್ತು ಒಂದು ಎಕರೆ ಖಾಲಿ ಉಳಿದಿದೆ. 46ವರ್ಷಗಳ ನಂತರ ಕಾನೂನು ಮಾಪನಶಾಸ್ತ್ರ ಇಲಾಖೆಯಪುನರ್ ರಚನೆಯನ್ನು ಗಮನಿಸಿದರೆ, ಕಾರ್ಯಾಚರಣೆ ಗಳನ್ನು ಬಲಪಡಿಸಲು 8 ವರ್ಕಿಂಗ್ ಸ್ಟ್ಯಾಂಡರ್ಡ್ ಲ್ಯಾಬೋರೇಟರಿಗಳ ಸ್ಥಾಪನೆಯು ಅತ್ಯಗತ್ಯವಾಗಿದೆ.

22-08-2024 ರಂದು ರಾಷ್ಟ್ರೀಯ ಪರೀಕ್ಷಾ ಭವನಕ್ಕೆ ಅಡಿಗಲ್ಲು ಹಾಕಲಾಗಿದ್ದು, ಆರ್‍ಆರ್‍ಎಸ್‍ಎಲ್ ಜಕ್ಕೂರಿನಲ್ಲಿ ಉಳಿದ ಒಂದು ಎಕರೆ ಪ್ರದೇಶವು ಈ ಉದ್ದೇಶಕ್ಕೆಸೂಕ್ತವಾಗಿದೆ.ಆದ್ದರಿಂದ, ಈ ಪ್ರಯೋಗಾಲಯಗಳ ನಿರ್ಮಾಣ ಮತ್ತು ಸ್ಥಾಪನೆಗೆ ಶೀಘ್ರವಾಗಿ ತಮ್ಮ ಅನುಮೋದನೆಯನ್ನು ನೀಡಬೇಕು ಎಂದು ಕೇಂದ್ರ ಸಚಿವರಿಗೆ ಪತ್ರ ಸಲ್ಲಿಸುವ ಮೂಲಕ ವಿನಂತಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು