LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ರೇಣುಕಾಸ್ವಾಮಿ ಕೊಲೆ ನೋಡಿ ಬೆಚ್ಚಿಬಿದ್ದಿದ್ದ ಸಾಕ್ಷಿದಾರ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ನಂತರ ಬೆಚ್ಚಿಬಿದ್ದಿದ್ದ ಪ್ರಮುಖ ಸಾಕ್ಷಿದಾರ ಭಯಭೀತನಾಗಿ ಜೂನ್ 11 ರಂದು ಹುಟ್ಟೂರು ಸೇರಿದ್ದ.ಜೂನ್ 11 ರ ಸಂಜೆ ಹಾಸನದ ಹುಟ್ಟೂರಿಗೆ ತೆರಳಿ ಸ್ನೇಹಿತನ ಬಳಿ ಹತ್ಯೆ ವಿಚಾರ ತಿಳಿಸಿದ್ದ...! ಹತ್ಯೆಯಲ್ಲಿ ನೀನು ಭಾಗಿಯಾಗಿದ್ಯಾ ಎಂದು ಸ್ನೇಹಿತರು ಆತನನ್ನು ಪ್ರಶ್ನೇ ಮಾಡಿದ್ದಾರೆ, ಇದಕ್ಕೆ ಉತ್ತರಿಸಿದ ಪ್ರಮುಖ ಸಾಕ್ಷಿ, ನಾನೇನು ಮಾಡಿಲ್ಲ ಆದರೆ ನಾನು ಘಟನೆಯನ್ನು ನೋಡಿದ್ದೇನೆ ಎಂದು ತಿಳಿಸಿದ್ದಾನೆ.

ತದನಂತರ ಜೂನ್ 11 ಹಾಗೂ ಜೂನ್ 12 ರಂದು ಭಯಭೀತನಾಗಿ ಮನೆಯಿಂದ ಹೊರಬಂದಿರಲಿಲ್ಲ. ಸಾಕ್ಷಿ ಜೂನ್ 13 ರಂದು ಸ್ನೇಹಿತರ ಜೊತೆ ಗೋವಾ ಗೆ ಟ್ರಿಪ್ ಗೆ ತೆರಳಿದ್ದ. ಗೋವಾಗೆ ತೆರಳಿದ್ದ ವೇಳೆ ಪಟ್ಟಣಗೆರೆ ಶೆಡ್ ನಲ್ಲಿ ರೇಣುಕಾಸ್ವಾಮಿ ಹತ್ಯೆಯಾಗಿದ್ದು,ಪವಿತ್ರಗೌಡ ದರ್ಶನ್ ಬಂಧನವಾಗಿದ್ದ ವಿಚಾರ ಮಾಧ್ಯಮಗಳಿಂದ ತಿಳಿದಿತ್ತು. ಈ ವೇಳೆ ತಾನೇನು ಮಾಡಿಲ್ಲ ಘಟನೆಯನ್ನು ನೋಡಿದ್ದೇನಷ್ಟೆ ಎಂದು ಸ್ನೇಹಿತರಿಗೆ ತಿಳಿಸಿದ್ದನು.

ಜೂನ್ 13 ರಿಂದ 16 ರವರೆಗೂ ಗೋವಾ ಟ್ರಿಪ್ ಮುಗಿಸಿ ವಾಪಸ್ ಬಂದಿದ್ದ ಪ್ರಮುಖ ಸಾಕ್ಷಿ. ಜೂನ್ 16 ರಂದು ಬೆಂಗಳೂರಿಗೆ ವಾಪಸ್ ಆಗಿ
ಜೂನ್ 16 ರಿಂದ ಬೆಂಗಳೂರು ತಿರುಪತಿ ಕೋಲಾರ ಗೋವಾ ಹುಬ್ಬಳ್ಳಿಯಲ್ಲಿ ಭಯಭೀತನಾಗಿ ವಾಸ್ತವ್ಯ ಹೂಡಿದ್ದ. ಇಷ್ಟೊತ್ತಿಗೆ ಪಟ್ಟಣಗೆರೆ ಶೆಡ್ ನಲ್ಲಿ ಕೆಲಸಗಾರನಾಗಿದ್ದ ಪ್ರಮುಖ ಸಾಕ್ಷಿಯನ್ನ ಸಂಪರ್ಕಿಸಿದ್ದ ಪೆÇಲೀಸರು. ಆ ಸಂದರ್ಭದಲ್ಲಿ ಎಲ್ಲಾ ವಿಷಯವನ್ನು ಪೊಲೀಸರೆದುರು ಸಾಕ್ಷಿದಾರ ವಿವರಿಸಿ ಸಂಪೂರ್ಣ ಮಾಹಿತಿ ನೀಡಿದ್ದ ವಿಚಾರವನ್ನು ಸಂಗ್ರಹಿಸಿದ ಪೊಲೀಸರು ಆತನನ್ನು ಪ್ರಮುಖ ಸಾಕ್ಷಿ ಎಂದು ಪರಿಗಣಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

 

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು