LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಲ್ಯಾಪ್‍ಟಾಪ್, ದ್ವಿಚಕ್ರ ವಾಹನ, ಸರಗಳ್ಳರ ಸೆರೆ ಅಪಾರ ಮೊತ್ತದ ವಸ್ತು ವಶ

ಬೆಂಗಳೂರು: ಜೆಪಿ ನಗರ ಪೊಲೀಸರು ಲ್ಯಾಪ್‍ಟಾಪ್‍ಗಳನ್ನು ಕಳವು ಮಾಡಿದ್ದ ಐದು ಜನ ಆರೋಪಿಗಳನ್ನು ಬಂಧಿಸಿ ಎರಡುವರೆ ಲಕ್ಷ ರೂ. ಬೆಲೆಬಾಳುವ 5 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿಗಳು ನವೆಂಬರ್ 13ರಂದು ಜೆಪಿ ನಗರ ಮೂರನೇ ಹಂತದ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಸೆಂಟರ್‍ನ ಹಿಂಭಾಗದ ಚಿಲಕ ಮುರಿದು 5 ಲ್ಯಾಪ್‍ಟಾಪ್‍ಗಳನ್ನು ಕಳವು ಮಾಡಿದ್ದರು.

ಈ ಸಂಬಂಧ ಜೆಪಿ ನಗರ ಪೊಲೀಸ್ ರಿಗೆ ದೂರು ನೀಡಿದ್ದರು. ಜೆಪಿ ನಗರ ಪೊಲೀಸರು ಭರತ್(25), ವಿಶ್ವನಾಥ್(23), ಯಶ್ವಂತ್(23) ಸಂದೀಪ್ (21) ನಾಗೇಂದ್ರ ಪ್ರಸಾದ್(21) ರವರುಗಳನ್ನು ಬಂಧಿಸಿ ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಂಡಿರುತ್ತಾರೆ. ಇವುಗಳ ಮೌಲ್ಯ ಎರಡುವರೆ ಲಕ್ಷ ರೂಗಳಾಗಿರುತ್ತದೆ. ಯಲಹಂಕ ಪೊಲೀಸರು ಸರ ಅಪಹರಣ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನಾಲ್ಕು ಲಕ್ಷ ರೂ ಬೆಲೆ ಬಾಳುವ 60 ಗ್ರಾಂ ತೂಕದ ಚಿನ್ನದ ಸರ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಆರೋಪಿಗಳು ವಾಯುಹಾರ ಮಾಡುತ್ತಿದ್ದ ಸಮಯದಲ್ಲಿ ಮಹಿಳೆಯರ ಕುತ್ತಿಗೆಯಲ್ಲಿದ್ದ ಸರಗಳನ್ನು ಅಪಹರಿಸುತ್ತಿದ್ದರು ಎಂದು ತಿಳಿಸಿರುತ್ತಾರೆ. ಆರೋಪಿಗಳು ಯಲಹಂಕ ಕೆಆರ್ ಪುರ ಮತ್ತು ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರ ಅಪಹರಣ ಮಾಡಿದ್ದರು.ಈ ಸರಗಳನ್ನು ಇವರು ಮುತ್ತೂಟ್ ಫೈನಾನ್ಸ್ ಹಾಗೂ ದೊಡ್ಡಬಳ್ಳಾಪುರದ ಜ್ಯುವೆಲರಿ ಶಾಪ್‍ನಲ್ಲಿ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿರುತ್ತಾರೆ.

ಮತ್ತೊಂದು ಪ್ರಕರಣದಲಿ ಮಹದೇವಪುರ ಪೊಲೀಸರು ದೇವಾ ಸಿಸ್ ದಾಸ್(35) ಮತ್ತು ಮಧುಸೂದನ್(20) ಐದು ಲಕ್ಷ ರೂ ಬೆಲೆ ಬಾಳುವ ಚಿನ್ನದ ಸರ ಹಾಗೂ ಒಂದು ಮೋಟರ್ ಸೈಕಲ್ ವಶಪಡಿಸಿಕೊಂಡಿರುತ್ತಾರೆ.ಈ ಆರೋಪಿಗಳು ನವಂಬರ್ 21ರಂದು ಬಿಬಿಎಂಪಿ ಕಚೇರಿಯ ಮುಂಬಾಗವಿರುವ ಕೊಡಿಗೆಹಳ್ಳಿ ಅಪಾಟ್ರ್ಮೆಂಟ್ ಅಲ್ಲಿ ಕಳವು ಮಾಡಿದ್ದರು.

ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಆರುವರೆ ಲಕ್ಷ ಬೆಲೆಬಾಳುವ 21 ಮೋಟರ್ ಸೈಕಲ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.  ಈ ಆರೋಪಿಗಳು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಸ್ಟೇಷನ್, ಮಾಗಡಿ ರೋಡ್ ಪೊಲೀಸ್ ಸ್ಟೇಷನ್, ಮಾದನಾಯಕನಹಳ್ಳಿ ಪೊಲೀಸ್ ಸ್ಟೇಷನ್, ಪೀಣ್ಯ ಪೊಲೀಸ್ ಸ್ಟೇಷನ್, ರಾಜಗೋಪಾಲ್ ನಗರ ಪೊಲೀಸ್ ಸ್ಟೇಷನ್, ದಾಬಸ್ಪೇಟೆ ಪೊಲೀಸ್ ಸ್ಟೇಷನ್, ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ಮತ್ತು ಗೋವಿಂದರಾಜ ನಗರ ಪೊಲೀಸ್ ಠಾಣ ವ್ಯಾಪ್ತಿಗಳಲ್ಲಿ ಮೋಟರ್ ಸೈಕಲ್ ಕಳವು ಮಾಡಿದ್ದರೂ ಎಂದು ತಿಳಿಸಿರುತ್ತಾರೆ.

ಪಿರ್ಯಾದುದಾರರು 22 ಸೆಪ್ಟೆಂಬರ್ ರಂದು ಗಣೇಶನ ಮೆರವಣಿಗೆ ನೋಡಲು ಮಹಾಲಿಯಾಲ್ ಮಹಾಲಕ್ಷ್ಮಿ ಲೇಔಟ್ 15ನೇ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿ ಗಣೇಶನ ಮೆರವಣಿಗೆ ನೋಡಿ ಹಿಂತಿರುಗಿದ ಸಮಯದಲ್ಲಿ ಗಾಡಿ ಕಳವಾಗಿತ್ತು ಎಂದು ದೂರು ನೀಡಿದ್ದರು. ಮತ್ತು ಪಿರಿಯಾದುದಾರರು ಕುರುಬರಹಳ್ಳಿ ನಿವಾಸಿಯಾಗಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು