LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

ಅಹಮದಾಬಾದ್: ಶ್ರೇಯಸ್ ಗೋಪಾಲ್ ಅವರ ಸ್ಪಿನ್ ಮೋಡಿ ಜತೆಗೆ ಮಯಂಕ್ ಅಗರ್ವಾಲ್ ಅವರ ಸೊಬಗಿನ ಶತಕದ ಬಲದಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ತನ್ನ ಅಂತಿಮ ಗುಂಪು ಪಂದ್ಯದಲ್ಲಿ ನಾಗಲ್ಯಾಂಡ್ ವಿರುದ್ಧ 9 ವಿಕೆಟ್‍ಗಳ ಭರ್ಜರಿ ಜಯ ಗಳಿಸಿದೆ.

ಇದರೊಂದಿಗೆ ಆಡಿದ 7 ಪಂದ್ಯಗಳಿಂದ ಒಟ್ಟು 24 ಅಂಕಗಳನ್ನು ಕಲೆ ಹಾಕಿದ ಕರ್ನಾಟಕ, ಸಿ ಗುಂಪಿನ ಅಗ್ರಸ್ಥಾನಿ ನೇರವಾಗಿ ನಾಕೌಟ್ ಹಂತ ಪ್ರವೇಶಿಸಿದೆ. ಜನವರಿ 12ರಂದು ಮಾಯಾಂಕ್ ಪಡೆ ವಡೋದರದಲ್ಲಿ ನಡೆಯುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ.ಗುಜರಾತ್ ಕಾಲೇಜು ಗ್ರೌಂಡ್‍ನಲ್ಲಿ ಭಾನುವಾರ ಪಂದ್ಯದಲ್ಲಿ ನಾಗಲ್ಯಾಂಡ್ ಒಡ್ಡಿದ 207 ರನ್ ಗುರಿ ಬೆನ್ನಟ್ಟಿದ ಕರ್ನಾಟಕ, 37.5 ಓವರ್‍ಗಳಲ್ಲಿ 1 ವಿಕೆಟ್‍ಗೆ 207 ರನ್ ಗಳಿಸಿ, ಟೂರ್ನಿಯಲ್ಲಿ ಆರನೇ ಜಯ ದಾಖಲಿಸಿತು.

ಮಾಯಾಂಕ್ ಆಕರ್ಷಕ ಶತಕಕೇವಲ 9 ರನ್‍ಗೆ ನಿಕಿನ್ ಜೋಸ್ ಅವರನ್ನು ಕಳೆದುಕೊಂಡ ಕರ್ನಾಟಕ, ಮುರಿಯದ 2ನೇ ವಿಕೆಟ್‍ಗೆ ಮಾಯಾಂಕ್(116*; 119 ಎಸೆತ, 9 ಬೌಂಡರಿ, 4 ಸಿಕ್ಸರ್) ಮತ್ತು ಅನೀಶ್ (82; 95 ಎಸೆತ, 10 9 ಬೌಂಡರಿ) ಕಲೆಹಾಕಿದ 198 ರನ್‍ಗಳ ಜತೆಯಾಟದಿಂದ ಗೆದ್ದು ಬೀಗಿತು.ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನಾಗಲ್ಯಾಂಡ್ 48.3 ಓವರ್ ಗಳಲ್ಲಿ 206 ಗಳಿಸಿ ಸರ್ವಪತನ ಕಂಡಿತು. ಆರಂಭಿಕ ಆಟಗಾರ ರೂಪೇರೋ ಅವರನ್ನು ಪಂದ್ಯದ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಮಾಡಿದ ವೇಗದ ಬೌಲರ್ ವಾಸುಕಿ ಕೌಶಿಕ್ ಎದುರಾಳಿ ತಂಡಕ್ಕೆ ಮೊದಲ ಆಘಾತ ನೀಡಿದರು.6ನೇ ಓವರ್ ನ ಕೊನೆಯ ಎಸೆತದಲ್ಲಿ ಮತ್ತೊಬ್ಬ ಆರಂಭಿಕ ದಿಗಾ ನಿಶ್ಚಲ್ ಅವರನ್ನು ಪೆವಿಲಿಯನ್ ಗಟ್ಟಿದ ಎಡಗೇ ಮಧ್ಯಮ ವೇಗಿ ಅಭಿಷೇಕ್ ಶೆಟ್ಟಿ ಮತ್ತೊಂದು ಹೊಡೆತ ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು