LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ವೈಭವದಿಂದ ಜರುಗಿದ ಕೊಪ್ಪಳ ಗವಿಮಠದ ತೆಪ್ಪೋತ್ಸವ, ಗಂಗಾರತಿ

ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಗವಿಮಠ, ತನ್ನ ವೈಚಾರಿಕ, ಜನಪರ ಕೆಲಸಗಳು, ದಾಸೋಹದಿಂದ ನಾಡಿನಲ್ಲಿ ದೊಡ್ಡ ಹೆಸರು ಮಾಡಿದೆ. ಗವಿಮಠದ 11 ಪೀಠಾದಿಪತಿಯಾಗಿದ್ದ ಗವಿಸಿದ್ದೇಶ್ವರರ ಸ್ಮರಣಾರ್ಥ ಪ್ರತಿವರ್ಷ ಅದ್ದೂರಿಯಾಗಿ ಜಾತ್ರೆಯನ್ನು ನಡೆಸಲಾಗುತ್ತದೆ.

ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಅಂತಲೇ ಕರೆಯುತ್ತಾರೆ. ಈ ಜಾತ್ರೆಗೆ ಲಕ್ಷ ಲಕ್ಷ ಜನ ಬರುತ್ತಾರೆ. ಈ ವರ್ಷ ಜನವರಿ 15 ರಂದು ಮಹಾರಥೋತ್ಸವ ನಡೆಯಲಿದೆ. ಅದರ ಮೊದಲ ಭಾಗವಾಗಿ ಮಠದ ಆವರಣದಲ್ಲಿರುವ ಕೆರೆಯಲ್ಲಿ ಅದ್ಧೂರಿ ತೆಪ್ಪೊತ್ಸವ ಮತ್ತು ಗಂಗಾರತಿ ನಡೆಯಿತು.

2017 ರಿಂದ ಮಠದಲ್ಲಿ ತೆಪ್ಪೋತ್ಸವ ನಡೆಯುತ್ತಿದ್ದರೆ, ಕಳೆದ ಮೂರು ವರ್ಷಗಳಿಂದ ಕಾಶಿ ಮಾದರಿಯಲ್ಲಿ ಗಂಗಾರತಿ ನಡೆಯುತ್ತಿದೆ. ಈ ವರ್ಷವೂ ಅದ್ದೂರಿಯಾಗಿ ಗಂಗಾರತಿ ನಡೆಯಿತು. ಮಠದ ಅರ್ಚಕರ ತಂಡ, ಸರಿಸುಮಾರು ಅರ್ಧಗಂಟೆ ಕಾಲ, ಕೆರೆಯ ದಡದಲ್ಲಿ ವಾದ್ಯಘೋಷಗಳ ಜೊತೆ ಗಂಗಾರತಿ ಮಾಡುತ್ತಿದ್ದರೆ, ಕಾಶಿಯಲ್ಲಿ ಗಂಗಾರತಿ ನೋಡಿದ ಅನುಭವ ಭಕ್ತರು ಪಡೆದರು.

ಗಂಗಾರತಿ ನಂತರ ತೆಪ್ಪೋತ್ಸವ ಜರುಗಿತು. ಮಠದ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ಅದ್ದೂರಿಯಾಗಿ ಪಲ್ಲಕ್ಕಿಯಲ್ಲಿ ತೆಗದುಕೊಂಡು ಬಂದು, ತೆಪ್ಪದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಉತ್ಸವ ಮೂರ್ತಿಯ ತೆಪ್ಪೋತ್ಸವ ನಡೆಯಿತು. ಅಲಂಕೃತ ತೆಪ್ಪದಲ್ಲಿ ಗವಿಸಿದ್ದೇಶ್ವರರ ಉತ್ಸವ ಮೂರ್ತಿ ಸಾಗುತ್ತಿದ್ದರೆ, ಭಕ್ತರು ಗವಿಸಿದ್ದೇಶ್ವರ ಮಹರಾಜ್ ಕಿ ಜೈ, ಗವಿಸಿದ್ದೇಶ್ವರ ಪಾಹಿಮಾಮ್ ಅಂತ ಘೋಷಣೆ ಕೂಗಿ, ಭಕ್ತಿಯಿಂದ ನಮಿಸಿದರು.

ತಿರುಪತಿಯಲ್ಲಿ ನಡೆಯುವ ಬ್ರಹ್ಮೋತ್ಸವದಂತೆ ತಿರುಪತಿಯ ತೆಪ್ಪೋತ್ಸವ ನೋಡುವದೆ ಕಣ್ಣಿಗೆ ಹಬ್ಬ, ಮನಸಿಗೆ ಆನಂದ ಅನ್ನೋದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಹೀಗಾಗಿ ಗವಿಮಠದ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡರು.

ಗವಿಮಠದ ಇಂದಿನ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆದ ತೆಪ್ಪೋತ್ಸವವನ್ನು ನೋಡಲು ಕೊಪ್ಪಳ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಂಜೆ ಐದು ಗಂಟೆಯಿಂದಲೇ ಮಠಕ್ಕೆ ಭಕ್ತರ ದಂಡೆ ಆಗಮಿಸಲು ಆರಂಭವಾಗಿತ್ತು.

ಆರಂಭದಲ್ಲಿ ಜಾನಪದ ಹಾಡುಗಳು, ಭಕ್ತರ ಮನಸೊರೆಗೊಳಿಸಿದರೇ, ನಂತರ ರಾತ್ರಿ ಸಮಯದಲ್ಲಿ ಅದ್ದೂರಿಯಾಗಿ ನಡೆದ ತೆಪ್ಪೋತ್ಸವ ಮತ್ತು ಗಂಗಾರತಿ, ಭಕ್ತರ ಸಂಭ್ರಮ ಹೆಚ್ಚಿಸಿತು. ಗವಿಸಿದ್ದೇಶ್ವರಲ್ಲಿ ಭಕ್ತಿಯಿಂದ ಬೇಡಿಕೊಂಡರೆ, ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಸಾವಿರಾರು ಭಕ್ತರು, ತೆಪ್ಪೋತ್ಸವ ನೋಡಿ, ಗವಿಸಿದ್ದೇಶ್ವರರ ದರ್ಶನ ಪಡೆದು ಕೃತಾರ್ಥರಾದರು.

ಮಠದಲ್ಲಿ ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ತೆಪ್ಪೋತ್ಸವ ಮತ್ತು ಗಂಗಾರತಿ ಅದ್ದೂರಿಯಾಗಿ ನಡೆದರೆ, ಇಂದಿನಿಂದ ಮಠದ ಆವರಣದಲ್ಲಿ ಮುತ್ತೈದಯರಿಗೆ ಉಡಿ ತುಂಬವ ಕಾರ್ಯಕ್ರಮದಿಂದ ಹಿಡಿದು ವಿವಿಧ ಕಾರ್ಯಕ್ರಮ ನಡೆಯುತ್ತವೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರುವ ಈ ಜಾತ್ರೆಗೆ ಈ ವರ್ಷ ಇನ್ನೂ ಹೆಚ್ಚು ಭಕ್ತರು ಭಾಗವಹಿಸುವ ನೀರಿಕ್ಷೆ ಇದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು