LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಸಂಗೀತ ಮಾಂತ್ರಿಕ Ilayarajaಗೆ ಅಪಮಾನ? ದೇಗುಲದ ಗರ್ಭಗುಡಿಗೆ ಪ್ರವೇಶಿಸದಂತೆ ತಡೆ

ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ ತಮಿಳುನಾಡಿನ ದೇಗುಲವೊಂದರಲ್ಲಿ ಅಪಮಾನವಾಗಿದೆ ಎಂದು ಹೇಳಲಾಗಿದ್ದು, ಅವರನ್ನು ದೇಗುಲದ ಗರ್ಭಗುಡಿ ಪ್ರವೇಶಿಸದಂತೆ ಅರ್ಚಕರು ತಡೆದಿದ್ದಾರೆ ಎನ್ನಲಾಗಿದೆ.

ಇಳಯರಾಜ ಇತ್ತೀಚೆಗೆ ತಮಿಳುನಾಡಿನ ಶ್ರೀವಲ್ಲಿಪುತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ದೇವಸ್ಥಾನದ ಒಳಗೆ ಗರ್ಭಗುಡಿಗೆ ಹೋದ ಇಳಯರಾಜ ಅವರನ್ನು ಅರ್ಚಕರು ತಡೆದಿದ್ದಾರೆ ಎನ್ನಲಾಗಿದೆ.

ಇಳಯರಾಜ ಸಂಯೋಜಿಸಿದ ದಿವ್ಯ ಪಾಶುರಾಮ್ ನಾಟ್ಯಾಂಜಲಿ ಪ್ರದರ್ಶನವನ್ನು ಈ ದೇವಾಲಯದ ಆದಿ ಪುರ ಶೆಡ್‌ನಲ್ಲಿ ಖಾಸಗಿ ಕಂಪನಿಯೊಂದು ನಡೆಸುತ್ತಿತ್ತು. ಹೀಗಾಗಿ ಇಳಯರಾಜ ತಮಿಳುನಾಡಿನ ಶ್ರೀವಿಲ್ಲಿಪುತೂರಿನ ಆಂಡಾಳ್ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಇಳಯರಾಜಾ ಅವರಿಗೆ ದೇಗುಲದ ಆಡಳಿತ ಮಂಡಳಿ ಸಿಬ್ಬಂದಿ ಆತ್ಮೀಯ ಸ್ವಾಗತ ಕೋರಿದ್ದರು.

ಬಳಿಕ ಆದಿ ತಿರುಪುರ್ ಪಂಥಲ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾಟ್ಯಾಂಜಲಿ ಕಾರ್ಯಕ್ರಮ ಮತ್ತು ಇಳಯರಾಜಾ ಸಂಯೋಜಿಸಿದ ದಿವ್ಯ ಪಾಶುರಂ ಹಾಡು ಬಿಡುಗಡೆ ಹಿನ್ನೆಲೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲು ಅವರು ದೇಗುಲದ ಒಳಗೆ ಹೋದರು.

ಸಂಗೀತ ಸಂಯೋಜಕ ಇಳಯರಾಜ ಅವರು ನಂದನವನಂ, ಆಂಡಾಳ್ ಕ್ಷೇತ್ರ ಹಾಗೂ ಪೆರಿಯ ಪೆರುಮಾಳ್ ದೇವಸ್ಥಾನಗಳಿಗೆ ತೆರಳಿ ಸ್ವಾಮಿಯ ದರ್ಶನ ಪಡೆದರು. ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪಕ್ಕೆ ಇಳಯರಾಜ ಆಂಡಾಳ್ ತೆರಳಲು ಯತ್ನಿಸಿದಾಗ ಅಲ್ಲಿದ್ದ ಅರ್ಚಕರು ಒಳ ಪ್ರವೇಶಿಸದಂತೆ ತಡೆದರು. ಆ ಬಳಿಕ ಇಳಯರಾಜ ಗರ್ಭಗುಡಿಯಿಂದ ಹೊರಟು ಹೋದರು ಎನ್ನಲಾಗಿದೆ.

ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದ ಅರ್ಥ ಮಂಟಪದಿಂದ ಇಳಯರಾಜ ನಿರ್ಗಮಿಸಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅರ್ಚಕರ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಟೀಕೆ ಮಾಡ್ತಿದ್ದಾರೆ.

ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ

ಇನ್ನು ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಈ ಬಗ್ಗೆ ದೇಗುಲ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಆಂಡಾಳ್ ದೇವಾಲಯದಲ್ಲಿ ಇಳಿಯರಾಜ ಅವರಿಗೆ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಹೇಳಿದೆ.

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಆಂಡಾಳ್ ದೇವಾಲಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸಕ್ಕರೆ ಅಮ್ಮಾಳ್, 'ಆಂಡಾಳ್ ದೇವಾಲಯದ ಅರ್ಥ ಮಂಟಪಕ್ಕೆ ಅರ್ಚಕರು, ಸ್ವಾಮೀಜಿಗಳನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವಿಲ್ಲ. ಈ ಪದ್ಧತಿ ಇಂದಿನದಲ್ಲ.. ಹಿಂದಿನಿಂದಲೂ ನಡೆದುಕೊಂಡ ಬಂದದ್ದಾಗಿದೆ. ದೇವಾಲಯದ ಉತ್ಸವದ ವಿಗ್ರಹಗಳನ್ನು ದೇವಾಲಯದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಥ ಮಂಟಪದಲ್ಲಿ ಶಾಶ್ವತವಾಗಿ ಇರಿಸಲಾಗಿರುವುದರಿಂದ, ಜೀಯರ್‌(ಅರ್ಚಕರು ಮತ್ತು ಶ್ರೀಗಳು)ಗಳನ್ನು ಹೊರತುಪಡಿಸಿ ಯಾರಿಗೂ ಪ್ರವೇಶವಿಲ್ಲ. ಇದೇ ಕಾರಣಕ್ಕೆ ಇಳಯರಾಜ ಹೊರಗೆ ನಿಂತು ದರ್ಶನ ಪಡೆದರು ಎಂದು ಅವರು ಹೇಳಿದರು.

ಅಂದಹಾಗೆ ಶ್ರೀವಿಲ್ಲಿಪುತೂರು ದೇವಾಲಯದ ರಾಜಗೋಪುರವು ತಮಿಳುನಾಡು ಸರ್ಕಾರದ ಅಧಿಕೃತ ಮುದ್ರೆಯಲ್ಲಿ ಕಾಣಿಸಿಕೊಂಡಿದೆ. ಅಂತೆಯೇ ಪದ್ಮಭೂಷಣ ಪ್ರಶಸ್ತಿ ವಿಜೇತ ಇಳಯರಾಜ ಕನ್ನಡ, ತೆಲುಗು, ತಮಿಳು, ಚಿತ್ರಗಳಿಗೆ ಸಂಗೀತಾ ಸಂಯೋಜಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು