LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಸಭಿಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಹಾಸ್ಯ ನಾಟಕ `ಸನ್ಮಾನ ಸುಖ'

ಬೆಂಗಳೂರು: ನಗರದ ಉದಯಭಾನು ಕಲಾಸಂಘದಿAದ ನಡಿಯುತ್ತಿರುವ ಕನ್ನಡ ಹವ್ಯಾಸ ರಂಗೋತ್ಸವ ೨೦೨೪ ರಲ್ಲಿ ಭಾಗವಾಗಿ ನಾಲ್ಕನೇ ದಿನ ಗುರುವಾರ ರಾತ್ರಿ  ಚಿಕ್ಕಬಳ್ಳಾಪುರದ ಐಶ್ವರ್ಯ ಕಲಾನಿಕೇತನ್ ರವರ ಬೃಂಧ ಪ್ರದರ್ಶಿಸಿದ ನಗೆ ನಾಟಕ ಸಭಿಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿತು.ಪಾಪ ಪಾಂಡು,ಸಿಲ್ಲಿಲಿಲ್ಲಿ ಧಾರಾವಾಹಿ ಗಳನ್ನು ಬರದ ಎಂಎಸ್ ನರಸಿಂಹಮೂರ್ತಿ ಬರದ “ಸನ್ಮಾನ ಸುಖ” ನಾಟಕವನ್ನು ಪ್ರದರ್ಶಿಸಲಾಯಿತು.
ಸನ್ಮಾನಕ್ಕಾಗಿ ಒಬ್ಬ ಸಾಹಿತಿ ದಂಪತಿಗಳು ಹೇಗೆ ಮೋಸಹೋಗು ತ್ತಾರೆ ಎಂಬ ಹಾಸ್ಯ ಸನ್ನಿ ವೇಶಗಳಿಂದ ನಾಟಕ ಕೂಡಿತ್ತು.ಪ್ರಸನ್ನ ಕುಮಾರ್ ರವರ ನಿರ್ಧೇಶನದಲ್ಲಿ ಪಾತ್ರ ವರ್ಗ ಉತ್ತಮ ಅಭಿನಯವನ್ನು ಪ್ರದರ್ಶಿಸಿದರು. ಸಾಹಿತಿ ವಿಶ್ವ ಪಾತ್ರದಲ್ಲಿ ರಾಘವೇಂದ್ರ ನಾಡಿಗೆ ನಟನೆ, ಅವರೊಂದಿಗೆ ಧರ್ಮಪತ್ನಿ ವಿಶಾಲು ಪಾತ್ರದಲ್ಲಿ ರೋಹಿಣಿ ಅಭಿನಯ ಉತ್ತಮ ವಾಗಿತ್ತು. ಹೂವು ವ್ಯಾಪಾರ ಮಾಡುವ ಸನ್ನಿವೇಶದಲ್ಲಿ ವಿಶಾಲು ಹೂವಾಡಗಿತ್ತಿ ಸರೋಜ ಯೊಂದಿಗೆ ವ್ಯಾಪಾರದಲ್ಲಿ ತೊಡಗಿರುವುದು,ಟಿವಿ ವರದಿಗಾರರಾಗಿ ರಾಜೇಶ್ ಕಶ್ಯಪ್ ಬಂದಾಗ ರೋಹಿಣಿ ರವರ ನಟನೆ,ಅಭಿನಯಕ್ಕೆ ತಕ್ಕ ಸಂಭಾಷಣೆಯ ಉಚ್ಚಾರಣೆ ಸಭಿಕರ ಮನಮುಟ್ಟುವಂತೆ ಇತ್ತು. ಎಂಎಲ್‌ಎ ಆಗಿ ರಾಜೇಶ್ ಕಶ್ಯಪ್ ಗಂಭೀರವಾದ ನಟನೆ ಹಾಗು ಉಡುಗೆ ಪಸಂದಾಗಿತ್ತು. ಒಟ್ಟಾರೆ ಪಾತ್ರಗಳಲ್ಲಿ ಲೀನವಾದ ಪಾತ್ರವರ್ಗ,ಕಲಾವಿದರನ್ನು ಯಶಶ್ವಿಯಾಗಿ ಬಳಿಸಿಕೊಳ್ಳು ವಲ್ಲಿ ನಿರ್ದೇಶಕರಾದ ಪ್ರಸನ್ನ ಕುಮರ್ ಯಶಶ್ವಿ ಯಾದರು ಎನ್ನ ಬಹುದು. ರಾಮಾಶಾಸ್ತಿç ಪಾತ್ರದಲ್ಲಿ ಅನಂತಕೃಷ್ಣ ಉತ್ತಮವಾಗಿ ನಟಿಸಿದರು.
ಅತಿಥಿಯಾಗಿ ಭಾಗವಹಿಸಿದ ಹಿರಿಯ ಪತ್ರಕರ್ತ ಲೇಪಾಕ್ಷಿ ಸಂತೋಷರಾವ್ ಮಾತನಾಡಿ ಟಿವಿ,ಮೊಬೈಲ್ ಭರಾಟೆಯ ಕಾಲದಲ್ಲಿ ರಂಗಭೂಮಿಯನ್ನು ಆದರಣೆ ಮಾಡುತ್ತಿರುವ ಪ್ರೇಕ್ಷಕ ವರ್ಗದವರನ್ನು ಅಭಿನಂದಿಸಿದರು.
ಬಿಚಿ ರವರ ಮಾತುಗಳನ್ನು ಮೆಲಕು ಹಾಕುತ್ತಾ ನಗಿದರೇ ಹಾಪೀ,ನಗದಿದ್ದರೇ ಬಿಪಿ,ನಗಲಾರದವನು ಪಾಪಿ ಎನ್ನುವ ಮಾತಿನಂತೆ ಸಂಭಾಷಣೆ ಹಾಸ್ಯಮಯವಾಗಿತ್ತು.ರಮಾನಂದ ಪತ್ರದಲ್ಲಿ ಮಂಜುನಾಥ್,ರಾಜೀವ್ ರಜನೀಕುಮಾರ್,ರಾಜಣ್ಣ ನಾಗಿ ಶರತ್,ಗೋಪಿ ಪಾತ್ರದಲ್ಲಿ ಉಗ್ರಂಸುರೇಶ್,ಹೂವಾಡಗಿತ್ತಿ ಸರೋಜ ಪಾತ್ರದಲ್ಲಿ ಮಂಜುಳ, ಎಮ್ಮೆಲ್ಯೆ ಆಪ್ತಕಾರ್ಯಧರ್ಶಿ ಯಾಗಿ ವೆಂಕಟೇಶ್ ಅವರವರ ಪಾತ್ರದಲ್ಲಿ ಉತ್ತಮ ಅಭಿನಯ ಪ್ರದಶಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು