LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Tumakuru

ಸಾಧಕ ಜೀವಿ ಕೃಷ್ಣ: ಡಿಕೆಶಿ

ಬೆಳಗಾವಿ: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರು ಸಾಧಕ ಜೀವಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.
ವಿಧಾನಸಭೆಯಲ್ಲಿಂದು ಜಯಣ್ಣ ಮತ್ತು ಆರ್. ನಾರಾಯಣ ಅವರ ಸಂತಾಪ ಸೂಚಕ ನಿರ್ಣಯದ ಮೇಲೆ ಮಾತನಾಡುತ್ತಿದ್ದ ಅವರು,ಕೃಷ್ಣ ಸಾಹೇಬರ ಬಗ್ಗೆ ಮಾತನಾಡಲು ನನಗೆ ಅವಕಾಶ ದೊರಕಲಿಲ್ಲ ಎಂದು ಭಾವದ್ವೇಗಗೊಂಡು ಮಾತು ಮುಂದುವರಿಸಿದ ಅವರ, ನನಗೆ ರಾಜಕೀಯದಲ್ಲೂ ಇದ್ದು, ಸಂಬಂಧಿಯೂ ಆಗಿದ್ದರು. ಒಂದು ರೀತಿಯಲ್ಲಿ ಕೃಷ್ಣ ಅವರ ಸಾವು ನನಗೆ ಸಂತೋಷವಾಗಿದೆ.

ಹೇಗೆಂದರೆ ಅವರ ಜೀವನ ಸಂಪೂರ್ಣ ಸಾರ್ಥಕವಾಗಿದ್ದು, ಸಾಧನೆಗಳನ್ನು ಮಾಡಿದ್ದಾರೆ. ಎಸ್.ಎಂ.ಕೃಷ್ಣ ಮತ್ತು ನನ್ನ ಸಂಬಂಧ ಎಲ್ಲರಿಗೂ ತಿಳಿದಿರುವುದೇ. ಅವರು ನನಗೆ ತಂದೆ ಸಮಾನರಾಗಿದ್ದರು. ರಾಜಕೀಯವಾಗಿ ಕೆಲವೊಂದು ಅವರ ನಡುವೆ ಭಿನ್ನಾಭಿಪ್ರಾಯಗಳಿದ್ದಿದ್ದು ನಿಜ. ಸಾಧನೆಯಿಲ್ಲದೆ ಸತ್ತರೆ ಸಾವಿಗೆ ಅವಮಾನ ಎನ್ನುವ ಹಾಗೆ ಹಲವಾರು ಸಾಧನೆಗಳನ್ನು ಮಾಡಿರುವ ಕೃಷ್ಣ ಅವರದ್ದು ಸಾಧಕ ಜೀವನ ಎಂದರು.

ರಾಜಕೀಯ ಜೀವನದಲ್ಲಿ ನನಗೂ ಅವರಿಗೂ ಭಿನ್ನಾಭಿ ಪ್ರಾಯಗಳು ಬರುತ್ತಿದ್ದವು.ಒಮ್ಮೆ ಅವರು ಮುಖ್ಯಮಂತ್ರಿಯಾದಾಗ ರಚಿಸಿದ ಮಂತ್ರಿಮಂಡಲದ ಪಟ್ಟಿಯಲ್ಲಿ ನನ್ನ ಮತ್ತು ಮೃತ ಜಯಣ್ಣ ಅವರ ಹೆಸರು ಇರಲಿಲ್ಲ. ಆ ಸಮಯದಲ್ಲಿ ಆಪ್ತ ಜ್ಯೋತಿಷಿ ಮಂತ್ರಿ ಪದವಿಯನ್ನು ಒದ್ದು ಪಡೆಯಿರಿ ಎಂದು ಸಲಹೆ ಮಾಡಿದ್ದರು. ಆಗ ನಾನು ಕೃಷ್ಣ ಅವರಿದ್ದ ಚೇಂಬರ್‍ಗೆ ಹೋಗಿ ಬಾಗಿಲು ತೆಗಿಸಿ ಮಂತ್ರಿಮಂಡಲ ಪಟ್ಟಿಗೆ ನನ್ನ ಹೆಸರು ಸೇರಿಸಲಾಯಿತು. ಆಗ ನನ್ನ ಜೊತೆಯಲ್ಲಿದ್ದ ಜಯಣ್ಣ ನಡುಗುತ್ತಿದ್ದರು ಎಂದಾಗ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್ ಈಗಲೂ ಸಿಎಂ ಪದವಿಯನ್ನು ಒದ್ದು ಪಡೆಯುತ್ತೀರಾ ಎಂದು ಶಿವಕುಮಾರ್ ಕಾಲೆಳೆದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು