LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಸಿಂಗನಾಯಕನಹಳ್ಳಿಯಲ್ಲಿ ಸಿ.ರೈ.ಸೇ.ಸ.ಸಂಘದ ಚುನಾವಣೆ ಪ್ರಚಾರ

ಯಲಹಂಕ: ಯಲಹಂಕದ ಸಿಂಗನಾಯ ಕನಹಳ್ಳಿಯಲ್ಲಿ ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಪ್ರಚಾರ ಮಾಡಲಾಯಿತು.
ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಫೆಬ್ರವರಿ 15 ರಂದು ನಡೆಯಲಿದ್ದು, ಈ ಪ್ರಯುಕ್ತ ಯಲಹಂಕ ಕ್ಷೇತ್ರ ಜನಪ್ರಿಯ ಶಾಸಕ ಎಸ್.ಆರ್ ವಿಶ್ವನಾಥ್ ಅವರು ಸಿಂಗನಾಯಕನಹಳ್ಳಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿ ಸಿರುವ ಕೆಲವು ಸ್ಪರ್ಧಿಗಳೊಡನೆ ಭಾಗವಹಿಸಿದ್ದರು.

ಅಭ್ಯರ್ಥಿಗಳಾದ ಎ. ತಿಮ್ಮರಾಯ ಗೌಡ, ಕೆ.ಆರ್.ಪುಟ್ಟರಾಜು, ಎಂ.ಮಂಜುನಾಥ್, ಎನ್. ಶಿವಕುಮಾರ್, ಎಂ.ಪಿ. ಈಶ್ವರಾಚಾರ್, ಎಸ್ .ಎನ್ ರಾಮಚಂದ್ರರೆಡ್ಡಿ, ಡಾ. ವಾಣಿಶ್ರೀ ವಿಶ್ವನಾಥ್, ಪುಷ್ಪಲತಾ ಚಂದ್ರಶೇಖರ್,ಎನ್. ಮುನಿಯಪ್ಪ (ಕೂರ್ಲಪ್ಪ ), ಎನ್. ಎ ಚಂದ್ರು ಹಾಗೂ ಅಮರಾವತಿ, ಅವರವರನ್ನು ಗೆಲ್ಲಿಸಿ ಸಂಘದ ರೈತರ ಶ್ರಯೋಭಿವೃದ್ಧಿಗಾಗಿ , ಸ್ಪರ್ಧಿಗಳಿಗೆ ಮತ ಚಲಾಯಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು, ಬಿಜೆಪಿ ಮುಖಂಡರು ಆದ ಪ್ರಶಾಂತ್ ರೆಡ್ಡಿ ಅವರು ಸೇರಿದಂತೆ ಎಲ್ಲಾ ಬಿಜೆಪಿ ಮುಖಂಡರುಗಳು, ಸಿಂಗನಾಯಕನಹಳ್ಳಿ ಪಂಚಾಯಿತಿ ಪದಾಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಸ್ಥಳೀಯ ಜನತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.ಪ್ರಶಾಂತ್ ರೆಡ್ಡಿ ಮತ್ತಿತರರು ಜನಪ್ರಿಯ ಶಾಸಕರಾದ ಎಸ್‍ಆರ್ ವಿಶ್ವನಾಥ್ ರನ್ನು ಸನ್ಮಾನಿಸಿದರು. ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ಸಂಘದ ಉದ್ದೇಶ, ರೈತರಿಗೆ ಆಗುತ್ತಿರುವ ಅನುಕೂಲ, ರೈತರನ್ನು ಆರ್ಥಿಕ ಸಭಲರನ್ನಾಗಿ ಮಾಡುತ್ತಾ ಸಂಘವು ಬೆಳೆದು ಬಂದ ಹಾದಿಯನ್ನು ವಿವರಿಸಿ, ಇನ್ನೂ ಹೆಚ್ಚು ಶ್ರಮಿಸಲು ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿ , ಸೇವಾ ಸಹಕಾರ ಬ್ಯಾಂಕಿನ ಚುನಾವಣಾ ಪ್ರಚಾರ ಮಾಡಿ ಮತಯಾಚಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು