LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಸ್ನೇಹಿತರಿಂದಲೇ ಯುವಕನ ಕೊಲೆ

ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಠಾಣ ವ್ಯಾಪ್ತಿಯ ಕಲಾ ವೈನ್ಸ್ ಬಳಿ ನಿನ್ನೆ ರಾತ್ರಿ ಯೋಗೇಂದ್ರ ಸಿಂಗ್ ಎಂಬಾತನನ್ನು ಆತನ ಸ್ನೇಹಿತರೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ವಿಶ್ವನಾಥ್ ಸಿಂಗ್ ಮತ್ತು ಪುಷ್ಪಾಭಾಯಿ ಮಗನಾಗಿರುವ ಯೋಗೇಂದ್ರ ಸಿಂಗ್‍ನನ್ನು ಆತನ ಸ್ನೇಹಿತರೆ ಮದ್ಯಪಾನ ಮಾಡಿಸಿ ಕೊಲೆ ಮಾಡಿರುತ್ತಾರೆ.
ಗಾಜಿನ ಬಾಟಲ್ ನಿಂದ ಚುಚ್ಚಿ ಹಳೆ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಗಲಾಟೆ ತೆಗೆದು ಕೊಲೆ ಮಾಡಿರುತ್ತಾರೆ.ರಾತ್ರಿ ಸುಮಾರು 11.20 ಗಂಟೆ ಸುಮಾರಿಗೆ ಘಟನೆ ನಡೆದಿರುತ್ತದೆ. ಎಸ್ ಎಸ್ ಎಲ್ ಸಿ ಓದಿರುವ ಯೋಗೇಂದ್ರ ಸಿಂಗ್ ಅರ್ಧಕ್ಕೆ ಮುಗಿಸಿ ನಾಲ್ಕೈದು ವರ್ಷಗಳಿಂದ ಡ್ರೈವರ್ ಕೆಲಸ ಮಾಡಿಕೊಂಡಿದ್ದನು.

ಕೋಲಾರ ಜಿಲ್ಲೆಯ ನರಸಾಪುರದ ಸಾಫ್ಟ್‍ವೇರ್ ಕಂಪನಿಯಲ್ಲಿ ಮಿನಿ ಬಸ್ ಡ್ರೈವರ್ ಆಗಿ ಕೇವಲ 20 ದಿನಗಳ ಹಿಂದೆ ಸೇರಿ ಕೆಲಸಕ್ಕೆ ಹೋಗುತ್ತಿದ್ದನು.
ದಸರಾ ಹಬ್ಬದ ಪ್ರಯುಕ್ತ ಕಂಪನಿಗೆ ರಜೆ ಇರುವುದರಿಂದ ಮನೆಯಲ್ಲಿದ್ದನು. ಆತನ ಪೋಷಕರು ನಾಳೆ ಬೆಳಿಗ್ಗೆ ಕೆಲಸಕ್ಕೆ ಹೋಗಬೇಕಾಗಿರುವುದರಿಂದ ನರಸಾಪುರಕ್ಕೆ ಹೋಗು ಎಂದು ಹೇಳಿರುತ್ತಾರೆ, ಆಗ ಮೃತ ಯೋಗೇಂದ್ರ ತಾನು ಓಡಿಸುತ್ತಿದ್ದ ಮಿನಿ ಬಸನ್ನು ಟಿಂಬರ್ ಯಾರ್ಡ್ ಲೇಔಟ್ ಬಳಿ ಬಸ್ ನಿಲ್ಲಿಸಿದ್ದೇನೆ, ಬಸ್ನಲ್ಲಿ ಮಲಗಿಕೊಂಡು ಬೆಳಿಗ್ಗೆ ಎದ್ದು ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿರುತ್ತಾನೆ.

ರಾತ್ರಿ ಸುಮಾರು 11:30ಕ್ಕೆ ಪಿರಿಯಾದುದಾರರ ಪಕ್ಕದ ಮನೆ ಬಳಿ ಇರುವ ಶಿವಣ್ಣ ಎಂಬುವವರು ಮನೆಯ ಬಳಿ ಬಂದು ನಿಮ್ಮ ಮಗ ಯೋಗೇಂದ್ರ ಸಿಂಗ್‍ನು ಗುಡ್ಡದಹಳ್ಳಿಯ ಬಾರ್ ಹತ್ತಿರ ಗಲಾಟೆ ಮಾಡಿಕೊಂಡು ಕೊಳ್ಳುತ್ತಿದ್ದಾನೆ ನೋಡಿ ಎಂದು ಹೇಳಿ ಹೋಗಿರುತ್ತಾರೆ. ಆಗ ಮೃತನ ತಾಯಿ ಕಲಾ ವೈನ್ಸ್ ಬಳಿ ಬಂದು ನೋಡಲಾಗಿ ಯೋಗೇಂದ್ರ ಸಿಂಗ್ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿರುತ್ತಾನೆ. ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಿರುತ್ತಾರೆ. ಕೊಲೆ ಮಾಡಿರೋ ಉಮೇಶ್ ನನ್ನು ಸಹ ಪೊಲೀಸರು ಬಂಧಿಸಿರುತ್ತಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು