LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಹೆಂಡತಿ ಮತ್ಮತು ಗು ಕೊಂದು ಉದ್ಯಮಿ ಆತ್ಮಹತ್ಯೆಗೆ ಶರಣು

ಮಂಗಳೂರು: ಪತ್ನಿ ಹಾಗೂ ತನ್ನ 4 ವರ್ಷಗ ಮಗುವನ್ನು ಹತ್ಯೆಗೈದ ವ್ಯಕ್ತಿಯೊಬ್ಬ ತಾನೂ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಮಂಗಳೂರು ಸಮೀಪದ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಆತ್ಮಹತ್ಯೆ ಶರಣಾದ ವ್ಯಕ್ತಿಯನ್ನು ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರ್ತಿಸಲಾಗಿದೆ. ಇನ್ನು ಹತ್ಯೆಯಾದವರನ್ನು ಶಿವಮೊಗ್ಗ ಮೂಲದ ಪ್ರಿಯಾಂಕಾ (28), ಗಂಡು ಮಗು ಹೃದಯ (4) ಎಂದು ಗುರ್ತಿಸಲಾಗಿದೆ.

ಆತ್ಮಹತ್ಯೆಗೆ ಶರಣಾದ ಕಾರ್ತಿಕ್ ಭಟ್ ಪಕ್ಷಿಕೆರೆ ಮುಖ್ಯ ಜಂಕ್ಷನ್ ನಲ್ಲಿರುವ ಹೋಟೆಲ್ ಅನ್ನು ತನ್ನ ತಂದೆ ತಾಯಿಯೊಂದಿಗೆ ನಡೆಸುತ್ತಿದ್ದರು. ಹತ್ತಿರದ ಫ್ಲ್ಯಾಟ್ ಒಂದರಲ್ಲಿ ವಾಸವಾಗಿದ್ದರು.

ನವೆಂಬರ್ 8 ರಂದು ಮಧ್ಯಾಹ್ನ 12:40 ರ ಸುಮಾರಿಗೆ ಕಾರ್ತಿಕ್ ಭಟ್ ಅವರು ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಳಾಪುರ ರೈಲು ನಿಲ್ದಾಣದ ಬಳಿ ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಟ್ರಾಕ್ ಮಾಸ್ಟರ್ ನವೀನ್ ಅವರು ರೈಲ್ವೇ ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಶವ ಬಿದ್ದಿರುವುದನ್ನು ಪತ್ತೆ ಮಾಡಿದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರಿಗೆ ಮೃತದೇಹ ವಿರೂಪಗೊಂಡಿದ್ದರಿಂದ ಗುರುತು ಪತ್ತೆ ಮಾಡುವುದು ಕಷ್ಟವಾಗಿತ್ತು. ಆದರೆ, ಸ್ಥಳ ಪರಿಶೀಲನೆ ವೇಳೆ ಗಾಡಿಯೊಂದರ ಕೀಲಿಕೈ ಪತ್ತೆಯಾಗಿತ್ತು. ಇದೇ ವೇಳೆ ದ್ವಿಚಕ್ರ ವಾಹನವೊಂದನ್ನು ಹಲವು ಗಂಟೆಗಳಾದರೂ ಯಾರೂ ತೆಗೆದುಕೊಂಡು ಹೋಗದೇ ಇರುವುದು ತಿಳಿದುಬಂದಿದೆ.

ಈ ವೇಳೆ ಪೊಲೀಸರು ವಾಹನ ಪರಿಶೀಲಿಸಿದಾಗ ದಾಖಲೆಗಳು ಪತ್ತೆಯಾಗಿವೆ. ಅದರಲ್ಲಿದ್ದ ಫೋಟೋ ಮೃತ ವ್ಯಕ್ತಿಯನ್ನು ಹೋಲುವಂತಿರುವುದು ಕಂಡು ಬಂದಿದೆ. ಬಳಿಕ ವಿಳಾಸ ಹಿಡಿದು ಕುಟುಂಬವನ್ನು ಸಂಪರ್ಕಿಸಿದಾಗ ಕುಟುಂಬದಲ್ಲಿ ಕಾರ್ತಿಕ್ ಅವರ ಪತ್ನಿ ಹಾಗೂ ಮಗುವಿನ ಹತ್ಯೆಯಾಗಿರುವುದು ತಿಳಿದುಬಂದಿದೆ.

ಕಾರ್ತಿಕ್ ಅವರು ಶಿವಮೊಗ್ಗ ಮೂಲದ ಪ್ರಿಯಾಂಕ ಅವರನ್ನು 6 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗಳಿಗೆ ನಾಲ್ಕು ವರ್ಷದ ಮಗುವಿತ್ತು. ಕಾರ್ತಿಕ್ ಅವರು ತಮ್ಮ ಪೋಷಕರೊಂದಿಗೆ ಒಂದೇ ಸೂರಿನಲ್ಲಿ ವಾಸವಿದ್ದರೂ, ಪೋಷಕರು ಹಾಗೂ ಕಾರ್ತಿಕ್ ಕುಟುಂಬ ಎರಡು ರೂಮಿನಲ್ಲಿ ಪ್ರತ್ಯೇಕ ವಾಸವಿತ್ತು. ಕಾರ್ತಿಕ್ ಅವರು ಪೋಷಕರೊಂದಿಗೆ ಹೋಟೆಲ್ ನಡೆಸುತ್ತಿದ್ದರು. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹೋಟೆಲ್ ನಿಂದ ಕಾರ್ತಿಕ್ ಪೋಷಕರು ಮನೆಗೆ ವಾಪಸ್ಸಾಗಿದ್ದು, ರೂಮ್ ಬೀಗ ಹಾಕಿರುವುದು ಕಂಡು ಬಂದಿದೆ. ಹೊರಗೆ ಹೋಗಿರಬಹುದು ಎಂದು ತಿಳಿದು ಸುಮ್ಮನಾಗಿದ್ದಾರೆ. ಆದರೆ, ಮರು ದಿನ ಪ್ರಿಯಾಂಕಾ ಫೋನ್ ಸ್ವಿಚ್ ಆಪ್ ಬಂದಿದ್ದು, ಕಾರ್ತಿಕ್ ಕೂಡ ಫೋನ್ ತೆಗೆದಿಲ್ಲ.

ಈ ವೇಳೆ ಅನುಮಾನಗೊಂಡು ರೂಮ್ ಕೊಠಡಿ ತೆಗೆದಾಗ ಪ್ರಿಯಾಂಕಾ ಹಾಗೂ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಲ್ಲದೆ, ಸೀಲಿಂಗ್ ಫ್ಯಾನ್‌ಗೆ ಸೀರೆ ಕಟ್ಟಿರುವುದೂ ಕಂಡು ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾರ್ತಿಕ್ ಅವರು ಮನೆಯ ಕಿಟಕಿ ಗಾಜಿನ ಚೂರುಗಳಿಂಗ ಹೆಂಡತಿ ಹಾಗೂ ಮಗುವನ್ನು ಹತ್ಯೆ ಮಾಡಿದ್ದು, ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಶಂಕಿಸಲಾಗಿದೆ. ಕಾರ್ತಿಕ್ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಕಾರ್ತಿಕ್ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ತಾನೇ ಪತ್ನಿ ಹಾಗೂ ಮಗುವನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿರುವುದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಅಪರಾಧ ತನಿಖಾ ದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು