LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಲೋಕ ಕಲ್ಯಾಣಾರ್ಥವಾಗಿ ರಾಮಣ್ಣ ಕುಟುಂಬದಿಂದ 3 ದಿನ ಶ್ರೀನವಚಂಡಿ ಮಹಾಯಾಗ

ನೆಲಮಂಗಲ : ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯಂಟಗಾನಹಳ್ಳಿ ಶ್ರೀ ಗೂಬೆ ಕಲ್ಲಮ್ಮ ದೇವಾಲಯದ ಆವರಣದಲ್ಲಿ ನಗರದ ಶ್ರೀಲಕ್ಷ್ಮೀಚನ್ನಕೇಶವ ಎಂಟರ್ ಪ್ರೈಸಸ್ ಮಾಲೀಕರಾದ ಉಮಾದೇವಿ ರಾಮಣ್ಣ ದಂಪತಿಗಳಿಂದ ಲೋಕಕಲ್ಯಾಣಾರ್ಥವಾಗಿ ಮಂಡಿಗೇರೆ ಶ್ರೀಜಯರಾಮ್ ಶಾಸೀಗಳ ನೇತೃತ್ವದಲ್ಲಿ ಮೂರುದಿನಗಳ ಕಾಲ ಶ್ರೀನವ ಚಂಡಿಮಹಾಯಾಗವನ್ನು ಹಮ್ಮಿಕೊಳ್ಳಲಾಗಿದ್ದು ಶುಕ್ರವಾರ ಮಧ್ಯಾಹ್ನ ಮಹಾಯಾಗದ ಪೂರ್ಣಾಹುತಿಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನೆರವೇರಿಸಲಾಯಿತು.

ಶ್ರೀನವಚಂಡಿ ಮಹಾಯಾಗದ ಸೇವಾಕರ್ತ ಶ್ರೀಲಕ್ಷ್ಮೀಚನ್ನಕೇಶವ ಎಂಟರ್ ಪ್ರೈಸಸ್ಮಾಲೀಕ ರಾಮಣ್ಣ ಮಾತನಾಡಿ ಕಳೆದ
ಮೂರುನಾಲ್ಕು ವರ್ಷಗಳಿಂದ ಸಮಾಜದಲ್ಲಿಅನಾರೋಗ್ಯ ಹೆಚ್ಚಾಗಿದ್ದು ಕೋವಿಡ್ ಕೊರೋನಾ ಮಹಾಮಾರಿ ನಮ್ಮ ದೇಶವನ್ನಷ್ಟೇ ಅಲ್ಲದೆ ಇಡೀ ಪ್ರಪಂಚವನ್ನು ತಲ್ಲಣಗೊಳಿಸಿತ್ತು, ಪ್ರಸ್ತುತ ಸಮಾಜ ಅನಾರೋಗ್ಯದಿಂದ ಚೇತರಿಕೆಯನ್ನು ಕಾಣುತ್ತಿದೆ,

ಆದ್ದರಿಂದ ಸಮಾಜದ ಯಾವುದೇ ಜೀವರಾಶಿಗೂ ಯಾವುದೇ ರೀತಿಯ ಸಮಸ್ಯೆಗಳು ಎದುರಾಗಬಾರದು, ಸಮಾಜದಲ್ಲಿ ಸದಾ ಶಾಂತಿ ನೆಲಸಬೇಕು ಎಂಬ ಸಂಕಲ್ಪದಿಂದ ಲೋಕಕಲ್ಯಾರ್ಣಾರ್ಥವಾಗಿ ಪ್ರತಿವರ್ಷ ನಮ್ಮ ಕುಟುಂಬದವತಿಯಿಂದ ನವಚಂಡಿ ಮಹಾಯಾಗವನ್ನು ನೆರವೇರಿಸಿಕೊಂಡು ಬರುತಿದ್ದೇವೆ ಎಂದರು.

ಪ್ರದಾನ ಅರ್ಚಕ ಮಂಡಿಗೆರೆ ಜಯರಾಮ್ ಶಾಸೀ ಮಾತನಾಡಿ ನವಚಂಡಿ ಮಹಾತಾಯಿ ಸಕಲ ಜೀವರಾಶಿಗೂ ಒಳಿತನ್ನುಮಾಡಲಿ, ಮಹಾಯಗ ಅಪರಿಮಿತವಾದದ್ದು, 9 ಪಾರಾಯಣ 700 ಶ್ಲೋಕಗಳನ್ನು ಪಠಣಮಾಡುವ ಮೂಲಕ ಮಹಾಚಂಡಿಯನ್ನು ಸಂಪನ್ನಗೊಳಿಸಲಾಗಿದೆ, ಲೋಕದ ಒಳಿಗಾಗಿ ಮೂರುದಿನಗಳಕಾಲ ವಿಶೇಷವಾದ ಪೂಜೆಯನ್ನು ಆಯೋಜಿಸಲಾಗಿತ್ತು, ಸಪ್ತಶತಿ ಆರಾಧನೆ ಮಾಡಲಾಗಿದೆ , ಎಲ್ಲಾ ಹೋಮ ಹವನಗಳಿಗಿಂತ ನವಚಂಡಿ ಹೋಮ ವಿಶೇಷ ಮತ್ತು ಶ್ರೇಷ್ಟವಾದದ್ದು, ಮಾರ್ಕಂಡೇಯ ಪುರಾಣದಲ್ಲಿ ದೇವಿ ಆರಾಧನೆ ಒಂದು ಭಾಗವಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಶ್ರೀಗೂಬೆಕಲ್ಲಮ್ಮ ದೇವಿಗೆ ಶ್ರೀಚಾಮುಂಡೇಶ್ವರಿ ಸ್ವರೂಪದ ಅಲಂಕಾರಮಾಡಲಾಗಿದ್ದು ವಿವಿಧ ನಗೆಯ ಪುಷ್ಪಗಳು ಮತ್ತು ದೇವಿಯ ವಾಹನ ಸಿಂಹದ ರೂಪ ಭಕ್ತರನ್ನು ಆಕರ್ಷಿಸಿದ್ದು ಭಕ್ತಾಧಿಗಳು ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದಿದ್ದು ವಿಶೇಷವಾಗಿತ್ತು, ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತಾ„ಗಳಿಗೆ ಮಾದೇವಿ ರಾಮಣ್ಣ ಕುಟುಂಬದವರಿಂದ ಅನ್ನಸಂಥರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು