LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಪ್ರೇಕ್ಷಕರ ಮನಸೂರೆಗೊಂಡ ವೈಟ್‍ಫೀಲ್ಡ್ ಸಂಗೀತೋತ್ಸವ

ಬೆಂಗಳೂರು: ಆನಂದ ಧ್ವನಿ ಸಂಗೀತ ಟ್ರಸ್ಟ್ ಇತ್ತೀಚೆಗೆ ಆಯೋಜಿಸಿದ್ದ ವೈಟ್‍ಫೀಲ್ಡ್ ಸಂಗೀತೋತ್ಸವ 2023 ರ ಏಳನೇ ಆವೃತ್ತಿ ಪ್ರೇಕ್ಷಕರ ಮನಸೂರೆಗೊಂಡಿತು. ಮಹದೇವಪುರ ಕ್ಷೇತ್ರದ ಶಾಸಕಿ ಶ್ರೀಮತಿ ಮಂಜುಳಾ ಲಿಂಬಾವಳಿಯವರು ವೈಟ್ ಫೀಲ್ಡ್ ನ ಇನ್ನರ್ ಸರ್ಕಲ್ ಮೈದಾನದಲ್ಲಿ ಎರಡು ದಿನಗಳ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೊದಲ ಗೋಷ್ಠಿಯಲ್ಲಿನ ವಿದುಷಿ ಬಿಂಬಾವತಿ ದೇವಿ ಮತ್ತು ಸುಶ್ರೀ ಮಧುಲಿತಾ ಮಹಾಪಾತ್ರ ಮತ್ತು ಅವರ ತಂಡದಿಂದ ಮಣಿಪುರಿ-ಒಡಿಸ್ಸಿ ನೃತ್ಯ ಪ್ರದರ್ಶನ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.ಯುವ ಸಂಗೀತಗಾರರಾದ ವಿನೋದ್ ಅನೂರ್ ಮೃದಂಗ, ವೀಣೆಯಲ್ಲಿ ರಕ್ಷಿತಾ ರಮೇಶ್, ಹಿಂದೂಸ್ತಾನಿ ಕೊಳಲುವಾದನಲ್ಲಿ ಆಕಾಶ್ ಮತ್ತು ತಬಲಾದಲ್ಲಿ ಇಶಾನ್ ಘೋಷ್ ಅವರೊಂದಿಗೆ ವೀಣೆ-ವೇಣು ಜುಗಲ್ಬಂದಿಯ ಆನಂದ ಧ್ವನಿಯು ವೀಕ್ಷಕರ ಚಪ್ಪಾಳೆ ಗಿಟ್ಟಿಸಿತು.

ವಿದುಷಿಗಳಾದ ರಂಜನಿ ಮತ್ತು ಗಾಯತ್ರಿ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ `ರಾಗ' ನಡೆಯಿತು. ರಾಗ ಹಂಸಧ್ವನಿಗೆ ಪಿಟೀಲಿನಲ್ಲಿ ಎಲ್ ರಾಮಕೃಷ್ಣನ್, ಮೃದಂಗದಲ್ಲಿ ದೆಹಲಿ ಸಾಯಿರಾಂ ಮತ್ತು ಘಟಂನಲ್ಲಿ ಎಸ್ ಕೃಷ್ಣ ಅವರು ಜೊತೆಯಾದರು.
ದಿನ 2ರ ಸಂಜೆ ಸಂಗೀತ ರತ್ನ ಪ್ರಬೀರ್ ಭಟ್ಟಾಚಾರ್ಯ ಅವರ ಸುಂದರವಾದ ಸಿತಾರ್ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು, ಜೊತೆಗೆ ತಬಲಾದಲ್ಲಿ ಪಂ.ಅನಿಂದೋ ಚಟರ್ಜಿ ಜೊತೆಯಾದರು.

ಪೌರಾಣಿಕ ತಬಲಾ ಮಾಂತ್ರಿಕ ಮತ್ತು ಮೈಹಾರ್ ಘರಾನಾದ ಭರವಸೆಯ ಯುವ ಸಿತಾರ್ ಮಾಂತ್ರಿಕನ ಪರಿಪೂರ್ಣ ಸಂಯೋಜನೆಯು ಪ್ರೇಕ್ಷಕರಿಗೆ ಒಂದು ರಸದೌತಣವಾಗಿತ್ತು.ಹೆಸರಾಂತ ವಿದುಷಿ ಕೌಶಿಕಿ ಚಕ್ರವರ್ತಿಯವರ ಹಿಂದೂಸ್ತಾನಿ ಗಾಯನದೊಂದಿಗೆ ಎರಡು ದಿನಗಳ ಸಂಗೀತ ಸಂಭ್ರಮವು ಸಂಪನ್ನಗೊಂಡಿತು.

ಅವರ ಮಗ ರಿಷಿತ್ ಅವರ ಜೊತೆಯಲ್ಲಿ ಪ್ರದರ್ಶನ ನೀಡಿದ್ದು ಸಂಗೀತ ಪ್ರಿಯರಿಗೊಂದು ಅನನ್ಯ ಅನುಭವವಾಗಿತ್ತು. ಸಾರಂಗಿ, ಪಂ.ಉಸ್ತಾದ್ ಮುರಾದ್ ಅಲಿ ಖಾನ್, ಹಾರ್ಮೋನಿಯಂನಲ್ಲಿ ಅಜಯ್ ಜೋಗ್ಲೇಕರ್, ಮತ್ತು ಪಂ. ಓಜಸ್ ಅಧಿಯಾನ್ ತಬಲಾದೊಂದಿಗೆ ಸಾಥ್ ನೀಡಿದರು. ಆನಂದ್ ಧ್ವನಿ ಮ್ಯೂಸಿಕ್ ಟ್ರಸ್ಟ್ ಲಾಭರಹಿತ ಸಂಸ್ಥೆಯಾಗಿದೆ. www.anandadhwani.in.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು