LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಕಾಮಸಮುದ್ರದಲ್ಲಿ ಅದ್ಧೂರಿ ಹಿಂದೂ ಸಮಾಜೋತ್ಸವ

ಬಂಗಾರಪೇಟೆ: ತಾಲೂಕಿನ ಕಾಮಸಮುದ್ರ ಹೋಬಳಿಯಲ್ಲಿ ಭಾನುವಾರ ಹಿಂದೂ ಸಮಾಜೋತ್ಸವ ಸಹಸ್ರಾರು ಹಿಂದೂ ಕಾರ್ಯ ಕರ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಜಾನುಗುಟ್ಟ ವೃತ್ತದಿಂದ ಆರಂಭವಾದ ಬೃಹತ್ ಶೋಭಾಯಾತ್ರೆ ಯಲ್ಲಿ ವಿವಿಧ ಕಲಾ
ತಂಡಗಳು ಮತ್ತಷ್ಟು ಮೆರಗು ನೀಡಿದವು.
ಮೆರವಣಿಗೆ ನಂತರ ಬಸ್ ನಿಲ್ದಾಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶ್ರೀ ದತ್ತ ಪಾದನಂದಸ್ವಾಮಿ ಮಾತನಾಡಿ, ಸಮಾಜದಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿರುವುದರಿAದ ಸಮಾಜ ಕುಲ ಗೆಟ್ಟು ಹೋಗಿದೆ, ಕನಕದಾಸರ ಜಯಂತಿಯನ್ನು ಪ್ರತಿ ವರ್ಷ ವಿಜೃಂಭಣೆಯಿAದ ಆಚರಣೆ ಮಾಡುವ ನಾವು ಅವರ ತತ್ವ- ಸಿದ್ಧಾಂತಗಳನ್ನು ಮಾತ್ರ ಪಾಲಿಸುತ್ತಿಲ್ಲ, ಕನಕದಾಸರು ಕುಲ ಕುಲವೆಂದು ಹೊಡೆದಾಡದಿರಿ ಎಂದು ಹೇಳಿದ್ದಾರೆ, ಆದರೆ ಇಂದು ಅದನ್ನು ಪಾಲಿಸಲು ಬಿಡುತ್ತಿಲ್ಲ. ಎಲ್ಲಾ ಕುಲಗಳನ್ನು ಹೊಡೆದು ಕೆಲವರು ತಮ್ಮ ಸ್ವಾರ್ಥ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ
ಬAಗಾರಪೇಟೆ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ಹಿಂದೂ ಸಮಾಜೋತ್ಸವದ ಅಂಗವಾಗಿ ನಡೆದ ಶೋಭಾ ಯಾತ್ರೆಯಲ್ಲಿ ಕಲಾ ತಂಡಗಳು ಮೆರಗು ನೀಡಿದವು.
ನಾವು ಎಚ್ಚೆತ್ತುಕೊಳ್ಳಬೇಕು. ಆಗಲೇ ಸಮಾಜೋತ್ಸವ ಮಾಡಿದ್ದಕ್ಕೆ ಸಾರ್ಥಕ ಎಂದರು. ಈ ಜಾತಿ ಎಂಬ ವಿಷ ಬೀಜ ಎಲ್ಲಿಯವರೆಗೂ ಹಬ್ಬಿದೆ ಎಂದರೆ ದೇಶ ಕಾಯುವ ಸೈನಿಕರವರೆಗೂ ಹೋಗಿದೆ. ಅಲ್ಲಿಯೂ ನೀನು ಯಾವ ಜಾತಿ ಎಂದು ಕೇಳುವಂತಾಗಿದೆ. ನಾವು ಗಾಂಧಿವಾದಿಗಳು
ಎನ್ನುವರು, ಆದರೆ ಗಾಂಧಿ ಪ್ರತಿಮೆ ಮುಂದೆಯೇ ಸಾರಾಯಿ ಅಂಗಡಿ ಇಡಲಾಗಿದೆ. ಇದುವರೆಗೂ ಅಂಗಡಿ ಯನ್ನು ತೆರವುಗೊಳಿಸಿಲ್ಲ. ಇವರು ಗಾಂಧಿವಾದಿಗಳೇ ಎಂದು ಪ್ರಶ್ನಿಸಿದರು. ನಮ್ಮಲ್ಲಿನ ಬಲ ಹೀನತೆಯನ್ನು ಬಳಸಿಕೊಂಡು ದಬ್ಬಾಳಿಕೆ ಮಾಡುವರು, ಎಣ್ಣೆ ಅಂಗಡಿ ತೆರವು ಮಾಡಿದರೆ ರಹೀಮರ ಮತ ಸಿಗುವುದಿಲ್ಲ ಎಂದು ಹಿಂದೂಗಳಿಗೆ ದ್ರೋಹ ಮಾಡಲಾಗುತ್ತಿದೆ. ಇದರ ಬಗ್ಗೆ ಸಹ ನಾವು ಜಾಗೃತಿಯಿಂದ ಇರಬೇಕು ಎಂದು ಕರೆ ನೀಡಿದರು. ಹಿಂದೂಗಳು ಹಣದಾಸೆಗೆ ಬೇರೆ ಸಮುದಾಯಕ್ಕೆ ಮಾರಿ ಹೋಗದಿರಿ. ನಮ್ಮ ಸಂಸ್ಕöÈತಿ-ಪರಂಪರೆಯನ್ನು ಉಳಿಸಿ ಬೆಳೆಸಲು ಹಿಂದೂಗಳೆಲ್ಲಾ ಸಂಘಟಿತರಾಗಬೇಕು. ಇಂದು ತೋರಿದ ಹುಮ್ಮಸ್ಸನ್ನು ಕೊನೆವರೆಗೂ ಮುಂದುವರಿಸಿಕೊAಡು ಹೋಗಬೇಕೆಂದು ಹೇಳಿದರು. ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ಪುರಸಭೆ ಮಾಜಿ ಸದಸ್ಯ ಕಪಾಲಿಶಂಕರ್, ಬತ್ತಲಹಳ್ಳಿ ಮಂಜುನಾಥ್, ಸುಬೇದಾರ್, ಡಾ.ಪಿ.ಎಂ.ಗಿರಿಧರ್, ಅಂಜನಪ್ಪ, ವೆಂಕಟಸ್ವಾಮಿ, ರಾಜಣ್ಣ ಇತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು