LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಬಹು ನಿರೀಕ್ಷಿತ ಕರಾವಳಿ ಸಿನಿಮಾಗೆ ಅದ್ಧೂರಿ ಮಹೂರ್ತ

ಸೆಟ್ಟೇರಿತು ಪ್ರಜ್ವಲ್ ಕರಾವಳಿ ಸಿನಿಮಾ: ಮುಹೂರ್ತದ ಸ್ಪೆಷಲ್ ಅಟ್ರ್ಯಾಕ್ಷನ್ ಗಜಗಾತ್ರದ ಕೋಣಕರಾವಳಿ ಈಗಾಗಲೇ ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಗುರುದತ್ ಗಾಣಿಗ ನಿರ್ದೇಶನದ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗಿರೋ ಚಿತ್ರ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ ಸಿನಿಮಾ.

ಈಗಾಗಲೇ ಕರಾವಳಿ ಸಿನಿಮಾ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದೀಗ ಚಿತ್ರತಂಡ ಅಧಿಕೃತವಾಗಿ ಮೂಹೂರ್ತ ಮಾಡುವ ಮೂಲಕ ಶೂಟಿಂಗ್ ಗೆ ಹೊರಡಲು ಸಿದ್ಧವಾಗಿದೆ. ಬೆಂಗಳೂರಿನ ಪ್ರಸಿದ್ಧ ಬುಲ್ ಟೆಂಪಲ್ ನಲ್ಲಿ ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ.

ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾ ತಂಡ ಹಾಜರಾಗಿತ್ತು. ಜೊತೆಗೆ ಹಿರಿಯ ನಟ ದೇವರಾಜ್ ದಂಪತಿ ಸೇರಿದಂತೆ ಪ್ರಜ್ವಲ್ ದೇವರಾಜ್ ಅವರ ಫ್ಯಾಮಿಲಿ ಕೂಡ ಭಾಗಿಯಾಗಿತ್ತು. ಇನ್ನು ವಿಶೇಷ ಎಂದರೆ ಎಡಿಜಿಪಿ ಅನುಚಿತ್ ಅವರು ಭಾಗಿಯಾಗಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ನಿರ್ಮಾಪಕ ಜಾಕ್ ಮಂಜು ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಡೈನಾಮಿಕ್ ದೇವರಾಜ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದ್ರು.

ಮುಹೂರ್ತದ ಹೈಲೈಟ್ಸ್ ಎಂದರೆ ಕೋಣ. ಕರಾವಳಿ ಚಿತ್ರದ ಫಸ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕೋಣ ಪತ್ರಿಕಾಗೋಷ್ಠಿಗೂ ಹಾಜರಾಗಿದ್ದು ವಿಶೇಷವಾಗಿತ್ತು. ಗಜಗಾತ್ರದ ಕೋಣವನ್ನ ನೋಡಿದವರೆಲ್ಲಾ ಆಶ್ಚರ್ಯ ಪಟ್ಟಿದ್ದೆ ಹೆಚ್ಚು. ಇನ್ನು ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಂಡರು. ನಿರ್ದೇಶಕ ಮತ್ತು ನಿರ್ಮಾಪಕ ಗುರುದತ್ ಗಾಣಿಗ ಮಾತನಾಡಿ, ಇದು ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ.

ಇದು ಹಳ್ಳಿಯ ಕಥೆ. ಕಂಬಳ ಪ್ರಪಂಚದಲ್ಲಿನೋಡಯುತ್ತಿರುವವ ಕಥೆ. ಕಂಬಳದ ಬಗ್ಗೆ ಇರಲಿದೆ ಎಂದು ಹೇಳಿದರು. ಮತ್ತು ಪ್ರಾಣಿಗಳ ಜೊತೆ ಕೆಲಸ ಮಾಡುವುದು ಎಷ್ಟು ಕಷ್ಟ, ಹೇಗೆ ಕೆಲಸ ಮಾಡಬೇಕು, ಚಿತ್ರೀಕರಣಕ್ಕೆ ಏನೆಲ್ಲಾ ತಯಾರಿ ಮಾಡಿಕೊಂಡಿದ್ದೇವೆ ಎನ್ನುವುದನ್ನು ಸಹ ತಿಳಿಸಿದರು .

ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಕೋಣದ ಜೊತೆಗಿನ ಶೂಟಿಂಗ್ ಅನುಭವ ಬಿಚ್ಚಿಟ್ಟರು. ?ನೋಡೋಕೆ ಮಾತ್ರ ಭಯ ಆದರೆ ತುಂಬಾ ಸಾಫ್ಟ್ ಆಗಿದೆ. ಕನ್ನಡ ಸಿನಿಮಾರಂಗ ಬೆಳೆಯುತ್ತಿದೆ. ಕರಾವಳಿ ಸಿನಿಮಾದ ಟೀಸರ್ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕಥೆ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಗಿದೆ. ನನ್ನ ಫ್ಯಾನ್ಸ್‍ಗೆ ಖುಷಿಯಾಗುವ ಹಾಗೆ ನಾನು ಸಿನಿಮಾಗಳನ್ನ ಮಾಡುತ್ತೇನೆ.

ಕರಾವಳಿ ಸಿನಿಮಾ ಕೂಡ ನನ್ನ ಫ್ಯಾನ್ಸಿಗೆ ತುಂಬಾ ಇಷ್ಟ ಆಗುತ್ತೆ. ಇದು ನನ್ನ 40 ನೇ ಸಿನಿಮಾ ಎನ್ನುವುದು ವಿಶೇಷ' ಎಂದರು. ಇನ್ನು ಕರಾವಳಿ ಸಿನಿಮಾಗೆ ನಾಯಕಿಯಾಗಿ ಸಂಪದಾ ಆಯ್ಕೆ ಆಗಿದ್ದಾರೆ. ಈಗಾಗಲೇ ಬೆಂಕಿ ಹಾಗೂ ರೈಡರ್ ಸಿನಿಮಾಗಳಲ್ಲಿ ಕಾಣಿಸೊಂಡಿದ್ದ ಸಂಪದಾ ಇದೀಗ ಕರಾವಳಿ ಸಿನಿಮಾದಲ್ಲಿಮಿಂಚಲಿದ್ದಾರೆ. ಚಿತ್ರದ ಬಗ್ಗೆಸ ಸಖತ್ ಎಕ್ಸಾಯಿಟ್ ಆಗಿರುವ ಸಂಪದಾ ಪಶುವೈದ್ಯೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಕರಾವಳಿ ಸಿನಿಮಾಗೆ ಅಭಿಮನ್ಯು ಸದಾನಂದ್ ಕ್ಯಾರೆಮಾ ವರ್ಕ್ ಇದೆ, ಸಚಿನ್ ಬಸ್ರೂರು ಸಂಗೀತ ಚಿತ್ರಕ್ಕಿದೆ. ವಿಶೇಷ ಎಂದರೆ ನಟ ಮಿತ್ರ ಕರಾವಳಿ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಟಿವಿ ಶ್ರೀಧರ್, ಜಿ ಜಿ, ನಿರಂಜನ್ ಇನ್ನು ಹಲವು ಪ್ರಖ್ಯಾತ ಕಲಾವಿದರು ಕರಾವಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಮುಹೂರ್ತ ಮುಗಿಸಿರೋ ಸಿನಿಮಾತಂಡ ಇದೇ ತಿಂಗಳು 23 ರಿಂದ ಕರಾವಳಿ ಭಾಗದಲ್ಲಿ ಚಿತ್ರೀಕರಣ ಶುರು ಮಾಡಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು