LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ನಮ್ಮ ಬೆಂಗಳೂರಿನಲ್ಲಿ ಅಖಿಲ ಭಾರತ ಶ್ವಾನ ಪ್ರದರ್ಶನ

ಪ್ರತಿಯೊಬ್ಬ ನಾಗರಿಕರ ಅಚ್ಚುಮೆಚ್ಚಿನ ಪ್ರಾಣಿ ನಾಯಿ. ಇತಿಹಾಸ ಪೂರ್ವದಿಂದಲೂ ಮನುಷ್ಯರೊಂದಿಗೆ ಇದರ ಬಾಂಧವ್ಯ ಇದೆ. ಕೋರೆಹಲ್ಲು ತಳಿಯ ನಾಯಿಯ ಕುರಿತು ಇನ್ನಷ್ಟು `ಜ್ಞಾನ ವೃದ್ಧಿಸಿಕೊಳ್ಳುವ ಹಾಗೂ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಹಕಾರಿಯಾಗುವ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ನಗರದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರು ಮೂಲದ ಸಿಲಿಕಾನ್ ಸಿಟಿ ಕೆನಲ್‍ಕ್ಲಬ್ 127 ಹಾಗೂ 128 ಹಾಗೂ ಬೆಂಗಳೂರ್ ಕನೈನ್ ಕ್ಲಬ್ (55, 56ನೇ) ನಿಂದ ಅಖಿಲ ಭಾರತ ಶ್ವಾನ ಪ್ರದರ್ಶನದ ಸ್ಪರ್ಧೆ ಆಯೋಜಿಸಿದೆ. ಕೋರೆಹಲ್ಲು ನಾಯಿಗಳ ಕುರಿತು ಜನಪ್ರಿಯತೆ ಮೂಡಿಸುವ ಸಲುವಾಗಿಯೇ ಈ ಸ್ಪರ್ಧೆ ಆಯೋಜಿಸಲಾಗಿದೆ. ಮೈಸೂರು ಕೆನಲ್‍ಕ್ಲಬ್ ಹೆಸರಿನಲ್ಲಿ 1932ರಲ್ಲಿ ಕಾರ್ಯಾರಂಭ ಮಾಡಿದ ಹಾಗೂ ನಂತರ ಸಿಲಿಕಾನ್ ಸಿಟಿ ಕೆನಲ್‍ಕ್ಲಬ್ ಆಗಿ ಪರಿವರ್ತನೆಗೊಂಡ ಸಂಸ್ಥೆ ಮೈಸೂರು ಮಹಾರಾಜದ ಸಂಸ್ಥಾನದ ಪಾಲುದಾರಿಕೆಯನ್ನು ಹೊಂದಿದೆ.

       

ನಾನಾ ತಳಿಗಳ ನಾಯಿಯನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಕೆನಲ್ ಛಿಟub ವಿಶ್ವಕ್ಕೆಉತ್ತಮ ಸೇವೆ ಸಲ್ಲಿಸುವಗುರಿ ಹೊಂದಿದೆ.
ಪ್ರತಿ ವರ್ಷ ಸಂಸ್ಥೆ ಈ ಸ್ಪರ್ಧೆಆಯೋಜಿಸುತ್ತಾ ಬಂದಿದೆ. ಮುಧೋಳ ನಾಯಿಯನ್ನುಇದೇ ಸಂಸ್ಥೆ ತನ್ನ ಪ್ರದರ್ಶನದಲ್ಲಿ ಮೊದಲ ಬಾರಿಗೆ ಪರಿಚಯಿಸಿತ್ತು. ಇದು ನಂತರದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವಕ್ಕೆ ಪರಿಚಿತವಾಯಿತು. ಇನ್ನೊಂದು ಹೆಗ್ಗಳಿಕೆ ಅಂದರೆ ಇಂದು ಭಾರತೀಯ ಸೇನೆಯಲ್ಲಿ ಕೂಡ ಈ ತಳಿಯ ನಾಯಿಗಳು ಸೇವೆ ಸಲ್ಲಿಸುತ್ತಿವೆ.

ಸುಮಾರು 50 ತಳಿಯ 450ರಿಂದ 500 ಶ್ವಾನಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ವಿಶೇಷ ತಳಿಯಾದ ಅಕಿತಾ, ಮಾಲ್ಟೀಸ್, ಸ್ಕಾನಜರ್, ಸೈಬೀರಿಯನ್ ಹಸ್ಕಿ, ಬೆಲ್ಜಿಯನ್ ಶೆಪರ್ಡ್ ನಾಯಿ, ಅಫಘಾನ್‍ಹೌಂಡ್ ಇನ್ನೂ ಹಲವು ತಳಿಯ ನಾಯಿಗಳಾದ ಜರ್ಮನ್ ಶೆಪರ್ಡ್, ಡಾಬರ್‍ಮನ್, ಲ್ಯಾಬ್ರಡಾರ್‍ರಿಟ್ರೈವರ್, ಗೋಲ್ಡನ್‍ರಿಟ್ರೈವರ್, ಬಾಕ್ಸರ್, ಗ್ರೇಟ್‍ಡೇನ್,ಕಾಕರ್ ಸ್ಪೈನಿಯೆಲ್ ಮತ್ತಿತರ ತಳಿಯ ಶ್ವಾನಗಳು ಪಾಲ್ಗೊಂಡು ತಮ್ಮ ಸೌಂದರ್ಯ, ಬುದ್ದಿಮತ್ತೆಯನ್ನು ಪ್ರದರ್ಶಿಸಲಿವೆ. ಉತ್ತರ ಕರ್ನಾಟಕದ ಅತ್ಯಂತಜನಪ್ರಿಯ ತಳಿಯಾಗಿರುವ ಮುಧೋಳ ನಾಯಿಗಳು ಇಲ್ಲಿ ಗಮನ ಸೆಳೆಯಲಿವೆ.

ಪ್ರದರ್ಶನದ ತೀರ್ಪುಗಾರರಾಗಿ ಪೆಟ್ರು ಮುಂಟೀನ್ ರೊಮೇನಿಯಾ, ಡಾ.ವೈವೋನ್ನೇ ಮೇಯಿನ್ಟ್ಜ್ಸ್, ಆಸ್ಟ್ರೇಲಿಯಾ, ಎಡವಿನ ಜಾಯ್ ಥಾಮಸ್ , ಆಸ್ಟ್ರೇಲಿಯಾ , ಟಿ, ಪ್ರೀತಂ, ಭಾರತ, ಮೊಹಮ್ಮದ್ ಮುನೀರ್ ಬಿನ್ ಜುಂಗ್, ಭಾರತ ಮಂಜುನಾಥ್ ಎಂ, ಭಾರತದಿಂದ ಭಾಗವಹಿಸುವರು. ಈ ಶ್ವಾನ ಪ್ರದರ್ಶನ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗದ ಫಾರ್ಮಾ ಕಂಪನಿಗಳು, ಅಂತಾರಾಷ್ಟ್ರೀಯ ಸೆಗ್ಮೆಂಟ್‍ಗಳನ್ನು ಉತ್ಪಾದಕರು ಹಾಗೂ ಇತರೆ ಉತ್ಪನ್ನಗಳನ್ನು ವಿನ್ಯಾಸಪಡಿಸುವವರು ಕೂಡ ಈ ಸಂದರ್ಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಶ್ವಾನ ಹಾಗೂ ಇತರೆ ಸಾಕುಪ್ರಾಣಿಗಳ ಜೀವನಗುಣಮಟ್ಟ ವೃದ್ಧಿಸುವ ಉತ್ಪನ್ನಗಳು ಇಲ್ಲಿ ಸಾರ್ವಜನಿಕರ ಗಮನ ಸೆಳೆಯಲಿವೆ. ಹೆಚ್ಚಿನ ವಿವರಣೆಗಳಿಗೆ ಡಾ ನರೇಂದ್ರ 9972096168 ಸಂಪರ್ಕಿಸಿ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು