LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ದೇಶದ ಒಕ್ಕೂಟ ರಚನೆಗೆ ಒಡೆಯರ್ ಕೊಡುಗೆ ಅನನ್ಯ: ಎಸ್.ಕೇಶವಮೂರ್ತಿ

ಬೆಂಗಳೂರು: ಜಯಚಾಮರಾಜೇಂದ್ರ ಒಡೆಯರ್ ಅವರ ತ್ಯಾಗದ ಪರಿಣಾಮವಾಗಿ ಭಾರತದ ಒಕ್ಕೂಟ ರಚನೆಯಾಯಿತು. ಇದರ ಪರಿಣಾಮವಾಗಿ ಅಖಂಡ ಕರ್ನಾಟಕದ ಕನಸು ನನಸಾಯಿತು. ಎಂದು ಮಹಾಲಕ್ಷ್ಮೀ ಲೇಔಟ್ ವಾರ್ಡ್ ನ ಮಾಜಿ ಬಿ.ಬಿ.ಎಂ.ಪಿ ಸದಸ್ಯ, ಕಾಂಗ್ರೆಸ್ ಮುಖಂಡರಾದ ಎಸ್. ಕೇಶವಮೂರ್ತಿ ತಿಳಿಸಿದರು.ರಾಜು ಕ್ಷತ್ರಿಯ, ಅರಸು ಸಮಾಜದಿಂದ ಬೆಂಗಳೂರಿನ ಮಹಾಲಕ್ಷಿ÷್ಮ ಲೇಔಟ್ ಕುರುಬರಹಳ್ಳಿಯ ಜೆ.ಸಿ.ನಗರದಲ್ಲಿನ ಜಯಚಾಮರಾಜೇಂದ್ರ ಒಡೆಯರ್ ಅವರ 108ನೇ ಜನ್ಮ ಶತಮಾನೋತ್ಸವ ಆಚರಣೆಯಲ್ಲಿ ಒಡೆಯರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿ ತಿಳಿಸಿದರು. ಇಂದು ಮಹಾತ್ಮ ಗಾಂಧಿಯವರ ಸಾಲಿನಲ್ಲಿ ನಾಲ್ವಡಿ ಮತ್ತು ಜಯಚಾಮರಾಜೇಂದ್ರ ಒಡೆಯರ್ ಆವರ ತ್ಯಾಗವನ್ನು ನಾವುಗಳು ಸ್ಮರಿಸಿಕೊಳ್ಳಬೇಕು. ಇನ್ಸು÷್ಟçಮೆಂಟ್ ಆಫ್ ಅಸೆಶನ್ ಗೆ ಸಹಿ ಮಾಡಿದ ಒಡೆಯರ್ ತಮ್ಮ ರಾಜ ಪದವಿಯನ್ನು ತ್ಯಜಿಸಿ ಪ್ರಜಾಪ್ರಭುತ್ವಕ್ಕೆ ಮುನ್ನುಡಿ ಬರೆದರು. ಒಕ್ಕೂಟದ ವ್ಯವಸ್ಥೆಯ ವಿರೋಧಿಯಾದ ಇತರ ರಾಜರುಗಳನ್ನು ಮನವೊಲಿಸಿದ ಒಡೆಯರ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಬೆಂಬಲಿಸಿ ರಾಜ ಪದವಿಯನ್ನು ಪದತ್ಯಾಗ ಮಾಡಿದರು. ತಮ್ಮ ಚರಾಚರ ಆಸ್ತಿಗಳನ್ನ ನಿಸ್ಸಂಶಯವಾಗಿ ಕೇಂದ್ರ ಸರ್ಕಾರಕ್ಕೆ ಮತ್ತು ಜನಗಳಿಗೆ ದಾನ ಮಾಡಿ ತ್ಯಾಗವನ್ನ ಮೆರೆದಂತಾ ಮಹಾರಾಜರು. ಎಂದು ತಿಳಿಸಿದರು. ಒಡೆಯರ್ ತ್ಯಾಗವನ್ನು ಇಂದಿನ ಜನಪ್ರತಿನಿಧಿಗಳು ಸ್ಮರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಒಡೆಯರ್ ದೂರದೃಷ್ಟಿಯ ಫಲವಾಗಿ ನಿರ್ಮಾಣಗೊಂಡ ಎಚ್.ಎ.ಎಲ್. ಮತ್ತು ಡಿ.ಆರ್ .ಡಿ.ಓ. ಹಾಗೂ ಬಿ.ಎಚ್ .ಇ.ಎಲ್. ಬಿ.ಈ .ಎಲ್ . ನಂತಹ ಇನ್ನೂ ಅನೇಕ ಸಂಸ್ಥೆಗಳು ಇಂದು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದು ನಮ್ಮ ಮೈಸೂರು ಮಹಾರಾಜರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಮೆಯ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದಾಗಿ ಕೇಶವಮೂರ್ತಿ ಭರವಸೆ ನೀಡಿದರು. ಆಯೋಜಕರಾದ ವಿನಯ್ ರಾಜೇ ಅರಸ್ ಅವರು ಕೇಶವಮೂರ್ತಿ ಅವರನ್ನು ಸನ್ಮಾಸಿಸಿದರು,ಮಾಜಿ ಕಾರ್ಪೊರೇಟರ್ ಮತ್ತು ಹಣಕಾಸು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಎಂ. ಶಿವರಾಜು ಅವರು ಒಡೆಯರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕೊಡುಗೆಯನ್ನು ಶ್ಲಾಘಿಸಿದರು. ಅರಸು ಸಮಾಜದ ಮುಖಂಡರಾದ ಶಶಿಧರ್ ಅರಸ್ ಅವರು ಶಿವರಾಜು ಅವರನ್ನು ಸನ್ಮಾನಿದರು.
ಕಾರ್ಯಕ್ರಮದ ಆಯೋಜಕ ಎಸ್.ಆರ್.ಗೋವಿಂದರಾಜು ಮಾತನಾಡಿ ನಾಡಗೆ ಒಡೆಯರ್ ಕೊಡುಗೆ ಅಪಾರವಾದದ್ದು ಎಂದರು, ಕರ್ನಾಟಕದ ಭೋಜರಾಜ ಬಿರುದಾಂಕಿತ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನನ ಮಂಟಪ ಇಂದು ಅಳಿವಿನಂಚಿನಲ್ಲಿದೆ. ಮುಮ್ಮಡಿ ಜನನ ಮಂಟಪದ ಸ್ಥಳ ಇಂದು ಚಪ್ಪಲಿ ಬಿಡುವ ಸ್ಥಳವಾಗಿದೆ. ಪ್ರಜಾ ಪ್ರತಿನಿಧಿ ಸಭೆ, ರೈಲ್ವೆ ಸಂಪರ್ಕ ಮತ್ತು ಸಸ್ಯಕಾಶಿ ಲಾಲ್ ಬಾಗ್ ಸೇರಿದಂತೆ ಅನೇಕ ಅಭಿವೃದ್ಧಿ ಸಾಧಿಸಿದ ಹತ್ತನೆ ಚಾಮರಾಜ ಒಡೆಯರ್ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ನೀಡದಿರುವುದು ಆಡಳಿತದಲ್ಲಿನ ನಿರಾಸಕ್ತಿ ತೋರುತ್ತದೆ ಎಂದರು.ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮೈಸೂರು ಅರಸರ ಪ್ರತಿಮೆಗಳು ವಿರಳವಾಗಿದ್ದು ಇಂದಿಗೂ ನೂರಾರು ಕೋಟಿ ಆದಾಯ ಗಳಿಸಿ ಸಾವಿರಾರು ನೌಕರರು ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಸ್ಯಾಂಡಲ್ ಸೋಪ್ ವೃತ್ತದಲ್ಲಿ “ನಾಲ್ವಡಿ” ಪ್ರತಿಮೆ ಸ್ಥಾಪಿಸಬೇಕೆಂದು ಕೋರಿದರು.ಕನ್ನಡ ವಿಜಯ ಕುಮಾರ್ ಮಾತನಾಡಿ, ಜಯಚಾಮರಾಜೇಂದ್ರ ಒಡೆಯರ್ ಅವರು ಕೊಡುಗೈ ದಾನಿಯಾಗಿದ್ದರು, ತಮ್ಮ ಬೊಕ್ಕಸದ ಹಣವನ್ನು ವಯಕ್ತಿಕ ಬದುಕಿಗೆ ಬಳಸುತ್ತಿರಲಿಲ್ಲ. ಒಡೆಯರ್ ಅವರಿಗೆ ಸೇರಿದ ಸ್ವಂತ ಆಸ್ತಿ ಪಾಸ್ತಿ ಗಳನ್ನು ಸಹ ಬಡವರಿಗೆ ದಾನ ಮಾಡುತ್ತಿದ್ದರು ಎಂದು ಅಭಿಪ್ರಾಯ ಪಟ್ಟರು.ಸಮಾರಂಭದಲ್ಲಿ ಆಯೋಜಕ ವಿನಯ್ ರಾಜೇ ಅರಸ್ ಮತ್ತು ನಂದಿನಿ ಬಡಾವಣೆ ವಾರ್ಡ ಬಿಜೆಪಿ ಮುಖಂಡರಾದ ಸುಧಾಕರ ರಾಜು, ಶಶಿಧರ್ ಅರಸ್, ಭುವನ್, ಕುಟ್ಟಿ, ಅಂತ್ರಣಿರಾಜ್, ತಿಮ್ಮೆಗೌಡ್ರು, ಪ್ರಕಾಶಕ ಸಿದ್ದೇಶ್ವರಪ್ಪ, ಪತ್ರಕರ್ತ ದಂಡಿನ ಶಿವರ ಮಂಜುನಾಥ್, ಜನಮನ ಗೋವಿಂದರಾಜು, ರಾಜು ಮಲಿಯಪ್ಪ, ರಾಮಣ್ಣ, ವೀರಣ್ಣ , ರಘು ಮತ್ತು ಸ್ಥಳೀಯ ಮುಖಂಡರು ಸದಸ್ಯರು, ಲಭ್ಯವಿದ್ದರು.
- ದಂಡಿನ ಶಿವರ ಮಂಜುನಾಥ್

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು