LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

"ಪುರುಷರ ಎಲೈಟ್ ಸೈಕ್ಲಿಂಗ್‌ಗಾಗಿ ಆಯ್ಕೆ ಟ್ರಯಲ್ಸ್ ಘೋಷಣೆ"

ಬೆಂಗಳೂರು: ಭಾರತೀಯ ಸೈಕ್ಲಿಂಗ್ ಫೆಡರೇಶನ್ (CFI)  ಪುರುಷರ ಎಲೈಟ್ ರೈಡರ್‌ಗಳಿಗಾಗಿ ಆಯ್ಕೆ ಟ್ರಯಲ್ಸ್ ಅನ್ನು ಘೋಷಿಸಿದೆ. ೨೦೨೬ರ ಜನವರಿ ೧೯ರಿಂದ ೨೩ರವರೆಗೆ ನಡೆಯಲಿರುವ ದೇಶದ ಮೊದಲ UCI ೨.೨ ವರ್ಗದ ರಸ್ತೆ ರೇಸ್ ಬಜಾಜ್ ಪುಣೆ ಗ್ರ್ಯಾಂಡ್‌ ಟೂರ್‌ಗಾಗಿ ಇಂಡಿಯಾ ಎ ಮತ್ತು ಇಂಡಿಯಾ ಬಿ ಎಂಬ ಎರಡು ತಂಡಗಳನ್ನು ಕಣಕ್ಕಿಳಿಸುವ ಗುರಿ ಹೊಂದಿದೆ.

ರಾಷ್ಟ್ರೀಯ ರಸ್ತೆ ಸೈಕ್ಲಿಂಗ್ ಚಾಂಪಿಯನ್‌ಶಿಪ್- ಕಮ್- ಸೆಲೆಕ್ಷನ್ ಟ್ರಯಲ್ಸ್ಗಳು ೨೦೨೫ರ ಡಿಸೆಂಬರ್ ೨ರಿಂದ ೬ರವರೆಗೆ ಒಡಿಶಾದ ಸಂಬಲ್‌ಪುರದಲ್ಲಿ ನಡೆಯಲಿವೆ. ಆಯ್ಕೆ ಆದ ಕ್ರೀಡಾಪಟುಗಳನ್ನು ೨೦೨೫ರ ಡಿಸೆಂಬರ್ ೨೮ರಂದು ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ರಸ್ತೆ ಓಟದ ಮೂಲಕ ಅಂತಿಮವಾಗಿ ಮೌಲ್ಯಮಾಪನ ಮಾಡಲಾಗುತ್ತದೆ. ಇಂಡಿಯಾ ಎ ಮತ್ತು ಇಂಡಿಯಾ ಬಿ ತಂಡಗಳ ಉಪಸ್ಥಿತಿಯು ಉದಯೋನ್ಮುಖ ಮತ್ತು ಅನುಭವಿ ಸೈಕ್ಲಿಸ್ಟ್ಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲುವಿಶಾಲ ಅವಕಾಶ ನೀಡಲಿದೆ.

ಅಂತಾರಾಷ್ಟ್ರೀಯ ಸೈಕ್ಲಿಸ್ಟ್ ಗಳು ಭಾಗಿ ಬಜಾಜ್ ಪುಣೆ ಗ್ರ್ಯಾಂಡ್‌ ಟೂರ್ ೨೦೨೬ ಪುಣೆ ಮತ್ತು ಭಾರತದ ಹೆಸರನ್ನು ಯೂನಿಯನ್ ಸೈಕ್ಲಿಸ್ಟ್ ಇಂಟರ್‌ನ್ಯಾಷನಲ್ (UCI) ಜಾಗತಿಕ
ಕ್ಯಾಲೆಂಡರ್‌ನಲ್ಲಿ ಶಾಶ್ವತವಾಗಿ ಸ್ಥಾನಗೊಳ್ಳುವಂತೆ ಮಾಡುವ ಉದ್ದೇಶ ಹೊಂದಿರುವ ದೇಶದ ಫ್ಲಾಗ್ ಶಿಪ್ ಈವೆಂಟ್. ಉದ್ಘಾಟನಾ ಆವೃತ್ತಿಯು ಗಣ್ಯ ಅಂತಾರಾಷ್ಟ್ರೀಯ ಸೈಕ್ಲಿಸ್ಟ್ಗಳನ್ನು ಆಕರ್ಷಿಸಲಿದೆ. ನಾಲ್ಕು ಹಂತಗಳ ಮೂಲಕ ಒಟ್ಟು ೪೩೭ ಕಿಮೀ ಮಾರ್ಗವನ್ನು ಒಳಗೊಂಡಿರುವ ಈ ಟೂರ್ ಪುಣೆ ಜಿಲ್ಲೆಯ ಸೊಬಗು ತುಂಬಿದ ಪ್ರದೇಶಗಳನ್ನು
ಹಾದುಹೋಗಲಿದೆ.

ಮುಂಬರುವ ಆಯ್ಕೆ ಟ್ರಯಲ್ಸ್ ಕುರಿತು ಮಾತನಾಡಿದ ಭಾರತೀಯ ಸೈಕ್ಲಿಂಗ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಶ್ರೀ ಮಣೀಂದರ್ ಪಾಲ್ ಸಿಂಗ್ ಅವರು ಬಜಾಜ್ ಪುಣೆ ಗ್ರ್ಯಾಂಡ್‌ ಟೂರ್ ೨೦೨೬ಗಾಗಿ ಬಲಿಷ್ಠ ತಂಡಗಳನ್ನು ರಚಿಸುವತ್ತ ರಾಷ್ಟ್ರೀಯ ಚಾಂಪಿಯನ್‌ಶಿಪ್-ಕಮ್-ಸೆಲೆಕ್ಷನ್ ಟ್ರಯಲ್ಸ್ ಒಂದು ಪ್ರಮುಖ ಹಂತ. ಇಂಡಿಯಾ ಎ ಮತ್ತು ಇಂಡಿಯಾ ಬಿ ತಂಡಗಳ ಪರಿಚಯವು ಹೆಚ್ಚಿನ ಪ್ರತಿಭೆಯನ್ನು ಬೆಳೆಸುವುದರೊಂದಿಗೆ ಭಾರತೀಯ ಸೈಕ್ಲಿಂಗ್‌ನ ಗುಣಮಟ್ಟವನ್ನು ಹೆಚ್ಚಿಸಲಿದೆ ಎಂದರು. ಸೈಕ್ಲಿಂಗ್ ಫೆಡರೇಶನ್ ಇತಿಹಾಸ
ಭಾರತದಲ್ಲಿ ಸೈಕಲ್ ರೇಸಿಂಗ್‌ನ ರಾಷ್ಟ್ರೀಯ ಆಡಳಿತ ಮಂಡಳಿ ಭಾರತೀಯ ಸೈಕ್ಲಿಂಗ್ ಫೆಡರೇಶನ್. ಇದು ಯೂನಿಯನ್ ಸೈಕ್ಲಿಸ್ಟ್ ಇಂಟರ್ನಾ್ಯಷನಲ್ ಮತ್ತು ಏಷ್ಯನ್ ಸೈಕ್ಲಿಂಗ್
ಕಾನ್ಫೆಡರೇಶನ್‌ನ ಸದಸ್ಯ.

ನಟ ಮತ್ತು ಕ್ರೀಡಾಪಟು ಜಾಂಕಿದಾಸ್ ಅವರ ಪ್ರಯತ್ನದಿಂದಾಗಿ ೧೯೩೦ರ ದಶಕದ ಮಧ್ಯಭಾಗದಲ್ಲಿ ಭಾರತದಲ್ಲಿ ಸೈಕ್ಲಿಂಗ್ ಕ್ರೀಡೆಯಾಗಿ ಪರಿಚಯವಾಯಿತು. ೧೯೩೮ರಲ್ಲಿ ಸಿಡ್ನಿಯಲ್ಲಿ ನಡೆದ ಬ್ರಿಟಿಷ್ ಎಂಪೈರ್ ಕ್ರೀಡಾಕೂಟದಲ್ಲಿ ಜಾಂಕಿದಾಸ್ ಮತ್ತು ಅವರ ವ್ಯವಸ್ಥಾಪಕ ಸ್ವಾಮಿ ಜಗನ್ನಾಥ್ ಭಾಗವಹಿಸಿದ್ದರಿಂದ ಭಾರತೀಯ ಸೈಕ್ಲಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿತು. ಈ ಇಬ್ಬರ ನಿರಂತರ ಪ್ರಯತ್ನದಿಂದಾಗಿ ಭಾರತೀಯ ಸೈಕ್ಲಿಂಗ್ ರಾಷ್ಟ್ರೀಯ ಸೈಕ್ಲಿಸ್ಟ್ಗಳ ಒಕ್ಕೂಟಕ್ಕೆ ಸದಸ್ಯತ್ವ ಪಡೆಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು