LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಕೋಟ್ಯಂತರ ರೂ. ಮೌಲ್ಯದ ಶೂ ತುಂಬಿದ್ದ ವಾಹನಗಳ್ಳರ ಬಂಧನ

ಬೆಂಗಳೂರು: ಕೋಟ್ಯಂತರ ರೂ. ಮೌಲ್ಯದ ಬ್ರಾಂಡೆಡ್ ಶೂಗಳನ್ನು ತುಂಬಿದ್ದ ಈಚರ್ ವಾಹನವನ್ನು ಸಿನಿಮೀಯ ಮಾದರಿಯಲ್ಲಿ ಕಳವು ಮಾಡಿದ್ದ ಮೂವರು ಖದೀಮರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಸುಭಾನ್ ಪಾಷಾ, ಮನ್ಸರ್ ಅಲಿ ಮತ್ತು ಶಹಿದ್ದುಲ್ ರೆಹಮಾನ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಡಿ. 21 ರಂದು ಆನೇಕಲ್‍ನ ಸಮೀಪದ ಶೆಟ್ಟಿಹಳ್ಳಿ ಬಳಿಯ ನೈಕಿ ಗೋದಾಮಿನಿಂದ ಹೊಸಕೋಟೆ ಬಳಿಯ ಮಿಂತ್ರ ಗೋದಾಮಿಗೆ ಹೊರಟಿದ್ದ ಶೂ ಹೊತ್ತ ಈಚರ್ ವಾಹನ ಕಾಣೆಯಾಗಿತ್ತು. ಸುಮಾರು ಒಂದು ಕೋಟಿ ಹತ್ತು ಲಕ್ಷ ರೂ. ಮೌಲ್ಯದ 1,558 ಜೊತೆ ಶೂ ಸಹಿತ ಈಚರ್ ವಾಹನ ಕಳುವಾದ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ನಾಪತ್ತೆಯಾದ ಈಚರ್ ವಾಹನ ಚಾಲಕನ ಹಿನ್ನೆಲೆ ಪರಿಶೀಲನೆ ಮಾಡಿದ್ದಾರೆ. ಆತ ಈ ಹಿಂದೆ ದುಬಾರಿ ಬೆಲೆಯ ಬ್ರಾಂಡೆಡ್ ಬಟ್ಟೆಗಳನ್ನು ಇದೇ ರೀತಿ ವಾಹನ ಸಮೇತ ಕದ್ದು, ಜೈಲು ಸೇರಿದ್ದ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಶೂಗಳ ಜೊತೆ ಅಸ್ಸಾಂ ಮೂಲದ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಆನೇಕಲ್ ಗೋದಾಮಿನಿಂದ ಶೂಗಳನ್ನು ತುಂಬಿಕೊಂಡ ಹೊರಟ ವಾಹನವನ್ನು ಹೊಸಕೋಟೆ ಬದಲು ನಗರದ ರಜಾಕ್
ಪಾಳ್ಯಕ್ಕೆ ಕದ್ದೊಯ್ದಿದ್ದಾರೆ. ಅಲ್ಲಿನ ಮನೆಯೊಂದರಲ್ಲಿ ಅನ್ ಲೋಡ್ ಮಾಡಿದ ಅಸಾಮಿಗಳು ಈಚರ್ ವಾಹನವನ್ನು ಚಿಕ್ಕಜಾಲದ ಬಳಿ ಬಿಟ್ಟು ಪರಾರಿಯಾಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ.

ಈ ನಡುವೆ ಅತ್ತಿಬೆಲೆ ಪೊಲೀಸರ ಹೊಸೂರು ಮುಖ್ಯರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಸಾಗುತ್ತಿದ್ದ 407 ವಾಹನವನ್ನು ಅಡ್ಡಗಟ್ಟಿದಾಗ ನಿಲ್ಲಿಸದೇ ಮುಂದೆ ಸಾಗಿದ್ದಾರೆ. ಪೊಲೀಸರು ಚೇಸ್ ಮಾಡುತ್ತಿದ್ದಂತೆ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಪರಿಶೀಲನೆ ವೇಳೆ ಕಂಚಿನ ದೇವರ ವಿಗ್ರಹ, ಕಳಶ ದೀಪದ ಕಂಬಗಳು ಪತ್ತೆಯಾಗಿದ್ದು, ತನಿಖೆ ವೇಳೆ ತಮಿಳುನಾಡಿನ ಹೊಸೂರಿನ ಅಂಗಡಿಯೊಂದರಲ್ಲಿ ಕದ್ದ ವಸ್ತುಗಳು ಎಂದು ತಿಳಿದು ಬಂದಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಒಟ್ಟಿನಲ್ಲಿ ಸಣ್ಣ ಸುಳಿವು ನೀಡದೇ ಪಕ್ಕಾ ಸಿನಿಮಾ ಸ್ಟೈಲ್ ನಲ್ಲಿ ಬ್ರಾಂಡೆಡ್ ನೈಕಿ ಶೂಗಳನ್ನು ಎಗರಿಸಿದ್ದವರಲ್ಲಿ ಪ್ರಮುಖ ಆರೋಪಿ ಸಲೇ ಮಹಮದ್ ಲಷ್ಕರ್ ತಲೆ ಮರೆಸಿಕೊಂಡಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಅತ್ತಿಬೆಲೆ ಪೊಲೀಸರು ಬಲೆ ಬೀಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು