LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ತಿಲಕ್ ಶತಕಕ್ಕೆ ದಿಕ್ಕು ತಪ್ಪಿದ ಗುಜರಾತ್ ಕಟ್ಟಿಹಾಕಿದ ಅಶ್ವನಿ

ಸಂಕಷ್ಟದ ಸಮಯದಲ್ಲಿ ತಿಲಕ್ ವರ್ಮಾ ಅತ್ಯುದ್ಭುತ ಶತಕ, ಬಳಿಕ ಅಶ್ವನಿ ಕುಮಾರ್ ನೀಡಿದ ಬಲವಾದ ಹೊಡೆತ! ಇದರಿಂದ ಕಂಗೆಟ್ಟ ಗುಜರಾತ್ ಟೈಟಾನ್ಸ್ ತಂಡ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ 99 ರನ್ ಗಳ ಹೀನಾಯ ಸೋಲು ಕಂಡಿದೆ. ಈ ಮೂಲಕ ಆಡಿರುವ 6 ಪಂದ್ಯಗಳಿಂದ 2ನೇ ಗೆಲುವು ದಾಖಲಿಸಿದ ಹಾರ್ದಿಕ್ ಪಾಂಡ್ಯ ಬಳಗ ಇದೀಗ ಒಟ್ಟು 4 ಅಂಕಗಳೊAದಿಗೆ ಐಪಿಎಲ್ ಅಂಕಪಟ್ಟಿ ಯಲ್ಲಿ ಕೊನೇ ಸ್ಥಾನದಿಂದ 7ನೇ ಸ್ಥಾನಕ್ಕೇರಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಪ್ರಿಲ್ 20 ಸೋಮವಾರದಂದು ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಟೈಟಾನ್ಸ್ ತಂಡ ಕೇವಲ 15.5 ಓವರ್ ಗಳಲ್ಲಿ 100 ರನ್ ಗಳಿಗೆ ಆಲೌಟ್ ಆಯಿತು. ಶತಕವೀರ ತಿಲಕ್ ವರ್ಮಾ ಅವರು ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.ಅಶ್ವನಿ ಕುಮಾರ್ 4 ವಿಕೆಟ್
ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿ ಹೊರಟ ಗುಜರಾತ್ ತಂಡಕ್ಕೆ ವೇಗಿ ಬುಮ್ರಾ ಅವರು ಮೊದಲ ಎಸೆತದಲ್ಲೇ ಆಘಾತ ನೀಡಿದರು. ಫಾರ್ಮ್ ನಲ್ಲಿರುವ ಸಾಯಿ ಸುದರ್ಶನ್ ಅವರನ್ನು ಕೃಷ್ ಭಗತ್ ಅವರಿಗೆ ಕ್ಯಾಚ್ ಕೊಡ್ಸಿದರು. ಜಾಸ್ ಬಟ್ಲರ್(5), ನಾಯಕ ಗಿಲ್(14) ಗ್ಲೆನ್ ಫಿಲಿಪ್ಸ್ ಸೇರಿದಂತೆ ಅಗ್ರ ಕ್ರಮಾಂಕದ ಯಾವ ಘಟಾನುಘಟಿಗಳೆಲ್ಲರೂ ಮುಂಬೈ ದಾಳಿಯನ್ನು ಎದುರಿಸಲಾಗಲಿಲ್ಲ ವಾಶಿಂಗ್ಟನ್ ಸುಂದರ್ ಮಾತ್ರ ಕೊಂಚ ಹೊತ್ತು ಪ್ರತಿರೋಧ ತೋರಿದರು. ಮಧ್ಯಮ ವೇಗಿ ಅಶ್ವನಿ ಕುಮಾರ್ ಅವರು ಗುಜರಾತ್ ತಂಡದ 4 ವಿಕೆಟ್ ಪಡೆದರು.ಇದಕ್ಕೂ ಮೊದಲು 44 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ತಿಲಕ್ ವರ್ಮಾ ಅವರು ಆಸರೆಯಾದರು. ಕೇವಲ 45 ಎಸೆತಗಳಲ್ಲಿ ಅವರು ಅಜೇಯ 101 ರನ್ ಬಾರಿಸಿದರು. ಅದರಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದವು. ನಮನ್ ಧಿರ್ (32 ಎಸೆತದಲ್ಲಿ 45) ಅವರು ತಿಲಕ್ ಅವರಿಗೆ ಉತ್ತಮ ಸಾಧ್ ನೀಡಿದರು. ಗುಜರಾತ್ ಪರ ಕಗಿಸೋ ರಬಾಡಾ 3 ವಿಕೆಟ್ ಪಡೆದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು