LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಯುವ ಸಂಚಲನ ತಂಡದಿಂದ ಗ್ರಾಹಕರಿಗೆ ಪಡಿತರ ವಿತರಣೆ ಜಾಗೃತಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ನ್ಯಾಯಬೆಲೆ ಅಂಗಡಿಗಳ ಅವ್ಯವಸ್ಥೆ ಕುರಿತಾಗಿ ಪ್ರತಿಭಟನೆ ನಡೆಸಿದ್ದ ಯುವ ಸಂಚಲನ ತಂಡದಿಂದ ಭಾನುವಾರ ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪಡಿತರ ಪಡೆಯುತ್ತಿದ್ದ ಗ್ರಾಹಕರಿಗೆ ಆಹಾರ ಇಲಾಖೆ ನಿಯಮಗಳ ಕುರಿತಾಗಿ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಮಾತನಾಡಿದ ಯುವ ಸಂಚಲನ ತಂಡದ ಅಧ್ಯಕ್ಷ ಚಿದಾನಂದ್, ಸರಕಾರ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಡಿತರ ವಿತರಣೆಗೆ ಸೂಕ್ತ ನಿಯಮಗಳನ್ನು ನೀಡಿದೆ. ಆದರೆ, ನ್ಯಾಯ ಬೆಲೆ ಅಂಗಡಿಗಳ ಮಾಲೀಕರು ತಮಗೆ ಬೇಕಾದಂತೆ ನಿಯಮಗಳನ್ನು ಬದಲಾಯಿಸಿಕೊಂಡು ಮಾಸಿಕ ಕೇವಲ 2 ಅಥವಾ 3 ದಿನಕ್ಕೆ ಪಡಿತರ ವಿತರಣೆ ಮುಗಿಸುತ್ತಿದ್ದಾರೆ.

ಹೀಗಾಗಿ, ಪ್ರತಿ ತಿಂಗಳು ಗ್ರಾಹಕರು ಅನಿವಾರ್ಯವಾಗಿ ಉದ್ಯೋಗಗಳನ್ನು ಬಿಟ್ಟು ಪಡಿತರ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲಬೇಕಿದೆ. ಸರಕಾರ ನೀಡುವ ಪಡಿತರ ಪಡೆಯುವುದು ಗ್ರಾಹಕರ ಹಕ್ಕು. ಈ ಹಕ್ಕನ್ನು ಪಡೆಯಲು ಗ್ರಾಹಕರು ತೀವ್ರ ಪರದಾಡಬೇಕಾದ ಅವ್ಯವಸ್ಥೆ ಸೃಷ್ಟಿಯಾಗಿದೆ. ಆಹಾರ ಇಲಾಖೆಯ ನಿಯಮಗಳ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಕರಪತ್ರಗಳನ್ನು ಹಂಚಿ ಮನವಿ ಮಾಡಿಕೊಂಡರು.

ಇದೇ ವೇಳೆ ಕೆಲ ಗ್ರಾಹಕರು ತಮಗಾಗುತ್ತಿದ್ದ ಅನ್ಯಾಯದ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ತಿಂಗಳು ಪಡಿತರ ಪಡೆಯಲು ಸರದಿ ಸಾಲು ಸಾಮಾನ್ಯವೆಂಬಂತಾಗಿದೆ. ಜತೆಗೆ, ಬೇಸಿಗೆ ಸುಡುವಬಿಸಿಲ ನಡುವೆ ಬೆಳಗ್ಗೆ 10ಗಂಟೆಗೆ ನ್ಯಾಯ ಬೆಲೆ ಅಂಗಡಿಗಳು ಬಾಗಿಲು ತೆರೆಯುತ್ತಿದ್ದು, ಪಡಿತರ ವಿತರಕರು ಮಾಡಿದ್ದೇ ನಿಯಮವೆಂಬಂತಾಗಿದೆ.

ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಪಡಿತರದಲ್ಲಿ ತೂಕದ ವ್ಯತ್ಯಾಸಗಳಿವೆ. ಈ ಬಗ್ಗೆ ಆಹಾರ ಇಲಾಖೆಗೆ ದೂರು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ತಿಳಿಸಿದರು.ನಗರದಲ್ಲಿ ಜಾಗೃತಿ ಸಂಚಾರ; ದೊಡ್ಡಬಳ್ಳಾಪುರ ನಗರದ ಕೆಲ ನ್ಯಾಯ ಬೆಲೆ ಅಂಗಡಿಗಳಿಗೆ ತೆರಳಿದ ಯುವಸಂಚಲನ ತಂಡದ ಸದಸ್ಯರು ಸರದಿ ಸಾಲಿನಲ್ಲಿ ನಿಂತಿದ್ದ ಗ್ರಾಹಕರಿಗೆ ಕರಪತ್ರ ನೀಡುವ ಮೂಲಕ ಆಹಾರ ಇಲಾಖೆಯ ನಿಯಮಗಳನ್ನು ತಿಳಿಸಿದರು.

ಜತೆಗೆ, ಅವ್ಯವಸ್ಥೆಗಳ ಕುರಿತಾಗಿ ಗ್ರಾಹಕರ ಸಹಿ ಸಂಗ್ರಹಿಸಿಕೊಳ್ಳಲಾಯಿತು.ನೀತಿ ಸಂಹಿತೆ ನೆಪ; ಅವ್ಯವಸ್ಥೆ ಕುರಿತಾಗಿ ಸರಣಿ ದೂರುಗಳು ಸಲ್ಲಿಕೆಯಾದ ಬೆನ್ನಲ್ಲೇ ಎಚ್ಚೆತ್ತಿದ್ದ ಜಿಲ್ಲಾ ಆಹಾರ ಇಲಾಖೆ ಉಪ ನಿರ್ದೇಶಕ ಪ್ರವೀಣ್ ತಾಲೂಕಿನ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದರು.

ಭೇಟಿ ವೇಳೆ ಅವ್ಯವಸ್ಥೆ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು. ಆದರೆ, ಪಡಿತರ ವಿತರಣೆ ಮೂರೇ ದಿನಕ್ಕೆ ಮುಕ್ತಾಯವಾಗುತ್ತಿದ್ದರೂ ಸಹ ಚುನಾವಣಾ ನೀತಿ ಸಂಹಿತೆ ನೆಪವನ್ನೊಡ್ಡಿ ಪರಿಶೀಲನೆಗೆ ಮುಂದಾಗದಿರುವ ನಡೆಗೆ ತಂಡದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಜಾಗೃತಿ ಅಭಿಯಾನದಲ್ಲಿ ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್, ಯುವ ಸಂಚಲನ ತಂಡದ ಭರತ್, ಹನುಮಂತರಾಜು, ದಿವಾಕರ್, ನವೀನ್, ಕಾನೂನು ಹೋರಾಟಗಾರ ಗಿರೀಶ್, ರವಿಕಿರಣ್ ಪಾಲ್ಗೊಂಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು