LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

"BAD" ಕನ್ನಡ ಚಿತ್ರದಲ್ಲೊಂದು ಇಂಗ್ಲೀಷ್ ಹಾಡು"

ಅರ್ಜುನ್ ಜನ್ಯ ಸಂಗೀತ ನೀಡಿ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಹಾಡು ಫೆಬ್ರವರಿ 5 ರಂದು ಬಿಡುಗಡೆ
ಪಿ.ಸಿ.ಶೇಖರ್ ನಿರ್ದೇಶನದ, ಎಸ್ ಆರ್ ವೆಂಕಟೇಶ್ ಗೌಡ ನಿರ್ಮಿಸಿರುವ ಹಾಗೂ ನಕುಲ್ ಗೌಡ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ "BAD" ಚಿತ್ರ ಆರಂಭದಿಂದಲೂ ಸುದ್ದಿ ಮಾಡುತ್ತಿದೆ.

ಟೀಸರ್ ಹಾಗೂ ಟ್ರೇಲರ್ ಮೂಲಕ "BAD" ಈಗಾಗಲೇ ಎಲ್ಲರ ಮನ ಗೆದ್ದಿದೆ. ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಭಿನ್ನವಾಗಿ ಹಾಡೊಂದನ್ನು ಸಂಯೋಜಿಸಿದ್ದಾರೆ. ನಿಶಾನ್ ರೈ ಬರೆದು ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಹಾಡಿರುವ ಈ ಇಂಗ್ಲೀಷ್ ಹಾಡಿನ ಲಿರಿಕಲ್ ವಿಡಿಯೋ ಫೆಬ್ರವರಿ 5 ರಂದು ಬಿಡುಗಡೆಯಾಗುತ್ತಿದೆ.

"ನಾನು ಚಿತ್ರದ ಸನ್ನಿವೇಶವೊಂದನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ವಿವರಿಸಿ, ಈ ಸನ್ನಿವೇಶಕ್ಕೆ ಒಂದು ಹಾಡು ಬೇಕು ಎಂದು ಕೇಳಿದೆ. ಅವರು ಮೊದಲು ನೀವು ಚಿತ್ರೀಕರಣ ಮಾಡಿಕೊಂಡು ಬನ್ನಿ. ಆಮೇಲೆ ಸನ್ನಿವೇಶಕ್ಕೆ ತಕ್ಕ ಹಾಗೆ ಹಾಡನ್ನು ಸಂಯೋಜಿಸುತ್ತೇನೆ ಎಂದರು.

ಆನಂತರ ನಿಶಾನ್ ರೈ ಬರೆದಿರುವ "ರೈಸ್ ಫ್ರಮ್ ದ ಮೂನ್" ಎಂಬ ಇಂಗ್ಲೀಷ್ ಹಾಡಿಗೆ ಸಂಗೀತ ಸಂಯೋಜಿಸಿದರು. ಈ ಹಾಡಿನಲ್ಲಿ ಚಿತ್ರದ ಕಥೆಯಿದೆ. ನಾವು ಈ ಸನ್ನಿವೇಶಕ್ಕೆ ಕನ್ನಡ ಹಾಡನ್ನು ಬಳಸಿಕೊಂಡಿದ್ದರೆ. ಜನರು ಹಾಡನ್ನು ಎಂಜಾಯ್ ಮಾಡುತ್ತಿದ್ದರು. ಕಥೆಯ ಕಡೆ ಗಮನ ಕೊಡುತ್ತಿರಲಿಲ್ಲ. ಹಾಗಾಗಿ ಹಾಡು ಇಷ್ಟವಾಗಬೇಕು ಹಾಗೂ ಚಿತ್ರದ ಕಥೆಯೂ ಗೊತ್ತಾಗಬೇಕು ಅದಕ್ಕಾಗಿ ಇಂಗ್ಲಿಷ್ ಭಾಷೆಯ ಹಾಡನ್ನೇ ಬಳಸಿಕೊಳ್ಳಲಾಗಿದೆ. ಇನ್ನು ಈ ಹಾಡು ಬ್ಲ್ಯಾಕ್ & ವೈಟ್ ನಲ್ಲಿ ಮೂಡಿಬಂದಿದೆ.

ಸಿನಿಮಾ ರಾ ಕಂಟೆಂಟ್ ನಲ್ಲಿ ಇರುವುದರಿಂದ ಈ ಹಾಡು ಬ್ಲ್ಯಾಕ್ & ವೈಟ್ ನಲ್ಲಿ ಮೂಡಿ ಬಂದರೆ ಹೆಚ್ಚು ಸೂಕ್ತವೆನಿಸಿತು. ಅರ್ಜುನ್ ಜನ್ಯ, ಐಶ್ವರ್ಯ ರಂಗರಾಜನ್ ಹಾಗೂ ನಿಶಾನ್ ರೈ ಪ್ರಮೋಶನ್ ಗಾಗಿ ಬಳಸಿಕೊಳ್ಳಲಾಗುತ್ತಿರುವ ಈ ವಿಡಿಯೋ ಸಾಂಗ್ ನಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 5 ರಂದು ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರದ ಪ್ರಚಾರಕ್ಕಾಗಿ ಈ ವಿಡಿಯೋ ಸಾಂಗ್ ಬಳಸಿಕೊಳ್ಳಲಾಗುವುದು. ಆದರೆ ಮೂಲ ಗೀತೆ ಚಿತ್ರದಲ್ಲೂ ಇರುತ್ತದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹಾಡಿನ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ "BAD" ಚಿತ್ರಕ್ಕೆ ಪಿ.ಸಿ.ಶೇಖರ್ ಸಂಕಲನ, ಜಿ.ರಾಜಶೇಖರ್ ಕಲಾ ನಿರ್ದೇಶನ ಹಾಗೂ ಶಕ್ತಿ ಶೇಖರ್ ಛಾಯಾಗ್ರಹಣವಿದೆ. ಈ ಚಿತ್ರಕ್ಕೆ ಸಚಿನ್ ಜಡೇಶ್ವರ ಎಸ್ ಬಿ ಸಂಭಾಷಣೆ ಬರೆದಿದ್ದಾರೆ."ಪ್ರೀತಿಯ ರಾಯಭಾರಿ" ಚಿತ್ರದ ಮೂಲಕ ಜನರ ಮನಗೆದ್ದಿರುವ ನಕುಲ್ ಗೌಡ"BAD"ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್ , ಅಶ್ವಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಕಾಮ, ಕ್ರೋಧ ಮೊದಲಾದ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಲ್ಲಿ ಆರು ಜನ ಕಲಾವಿದರು ಅಭಿನಯಿಸಿರುವುದು ಈ ಚಿತ್ರದ ವಿಶೇಷ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು