LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಬಜರಂಗ್ ಅಮಾನತು

ನವದೆಹಲಿ: ಉದ್ದೀಪನ ಮದ್ದು ಸೇವನೆ ಪರೀಕ್ಷೆಗಾಗಿ ತಮ್ಮ ಮೂತ್ರದ ಮಾದರಿ ನೀಡಲು ನಿರಾಕರಿಸಿದ ಒಲಿಂಪಿಯನ್ ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.

ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ತೆಗೆದುಕೊಂಡಿರುವ ಈ ಕ್ರಮಕ್ಕೆ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‍ಐ) ಅಸಮಾಧಾನ ವ್ಯಕ್ತಪಡಿಸಿದೆ. ಏಪ್ರಿಲ್ 23ರಂದು ಬಜರಂಗ್ ಅವರನ್ನು ಅಮಾನತು ಗೊಳಿಸಿದ್ದರೂ ನಾಡಾದಿಂದ ತಮಗೆ ಯಾವುದೇ ಮಾಹಿತಿ ಬಂದಿಲ್ಲವೆಂದು ಡಬ್ಲ್ಯುಎಫ್‍ಐ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು’ಎಕ್ಸ್’ನಲ್ಲಿ ಪ್ರತಿಕ್ರಿಯಿ ಸಿರುವ ಬಜರಂಗ್, `ಮಾದರಿ ನೀಡಲು ನಾನು ನಿರಾಕರಿಸಿಲ್ಲ. ಆದರೆ ಮಾದರಿ ಸಂಗ್ರಹಿಸಲು ಸಿಬ್ಬಂದಿಯು ಅವಧಿ ಮೀರಿದ ಕಿಟ್ ತಂದಿದ್ದರು. ಆ ಕುರಿತು ಮೊದಲು ಸ್ಪಷ್ಟನೆ ನೀಡಿ ನಂತರ ಮಾದರಿ ತೆಗೆದು ಕೊಳ್ಳುವಂತೆ ಕೋರಿದ್ದೆ’ ಎಂದು ಬರೆದಿದ್ದಾರೆ.ಮಾದರಿ ಸಂಗ್ರಹಕ್ಕಾಗಿ ತಂದಿದ್ದ ಅವಧಿ ಮೀರಿದ ಕಿಟ್‍ಗಳ ವಿಡಿಯೊವನ್ನೂ ಬಜರಂಗ್ ಅವರು ಪೋಸ್ಟ್ ಮಾಡಿದ್ದಾರೆ. `ನಾಡಾದ ಕ್ರಮಕ್ಕೆ ನಮ್ಮ ವಕೀಲರಾದ ವಿದುಷ್ ಸಿಂಘಾನಿಯಾ ಉತ್ತರಿಸುತ್ತಾರೆ’ ಎಂದೂ ಬಜರಂಗ್ ಸ್ಪಷ್ಟಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST