LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಎಐ ಮೂಲಕ ಭೀಮ ಕೋರೆಗಾಂವ್ ಯಶೋಗಾಥೆ ಅನಾವರಣ

ಕೋಲಾರ: ಮಹಾರ್ ಸೈನಿಕರ ಶೌರ್ಯ ಪ್ರಸ್ತುತಪಡಿಸುವ ಭೀಮ ಕೋರೆಗಾಂವ್ ಎಐ ಚಿತ್ರವನ್ನು ಬುಧವಾರ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಬಿಡುಗಡೆ ಮಾಡಲಾಯಿತು. ಎ.ಐ. ಆಧಾರಿತ ಚಿತ್ರದಲ್ಲಿ ಕೋರೆಗಾಂವ್ ಚಳುವಳಿಯಲ್ಲಿ ದಲಿತರು ತೋರಿದ ಅಪ್ರತಿಮ ಶೌರ್ಯ ಮತ್ತು ಪರಾಕ್ರಮವನ್ನು ಬಿಂಬಿಸಲಾಗಿದೆ. ಇತಿಹಾಸವನ್ನು ಎ.ಐ. ಮೂಲಕ ಮರು ನಿರ್ಮಾಣ ಮಾಡಲಾಗಿದೆ. ಉದಯೋನ್ಮುಖ ಶೋಭನ್ ಬಾಬು ಭರವಸೆ ಮೂಡಿಸಿದ್ದಾರೆ. ಸಿನಿಮಾ ರಂಗದ ಸಿದ್ಧ ಮಾನದಂಡಗಳನ್ನು ಬದಿಗೆ ಸರಿಸಿ ಎ.ಐ. ಮೂಲಕ ಚಿತ್ರ ನಿರ್ಮಿಸುವುದು ಶೋಭನ್ ಬಾಬು ಯಶೋಗಾತೆಯಾಗಿದೆ. ಬೆರಳಣಿಕೆಯಷ್ಟು ಮಂದಿ ಮಹರ್ ಸೈನಿಕರು ಇಪ್ಪತ್ತೈದು ಸಾವಿರ ಬಲ ಹೊಂದಿದ್ದ ಪೇಶ್ವೆ ಬಾಜಿರಾಯ ಸೈನಿಕರನ್ನು ಹಿಮ್ಮೆಟ್ಟಿಸುವ ದಂತ ಕಥೆಯನ್ನು ಈ ಚಿತ್ರದ ಮೂಲಕ ಅನಾವರಣಗೊಳಿಸಲಾಗಿದೆ.ಮೊದಲ ಬಾರಿಗೆ ಕೋಲಾರದ ಉದಯೋನ್ಮುಖ ನಿರ್ದೇಶಕ ಶೋಭನ್ ಬಾಬು ಎ.ಐ. ಕಲ್ಪನೆಗೂ ಮೀರಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದ ಪ್ರಮುಖ ಅಂಶ ಏನೆಂದರೆ ಅಂಬೇಡ್ಕರ್ ಅಸಲೀ ಭಾವಚಿತ್ರದ ಮೂಲಕ ಎ.ಐ. ವೀಡಿಯೋ ಮೂಲಕ ಅನುಸಂದಾನ ಮಾಡಲಾಗಿದೆ. ಅಂಬೇಡ್ಕರ್ ಮಾತನಾಡಿದ ರೀತಿಯಲ್ಲಿ ಸಹಜವಾಗಿ ಮೂಡಿ ಬಂದಿದೆ.ಕೋಲಾರ ಟಿ.ಚನ್ನಯ್ಯ ರಂಗಮAದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಬಿಡುಗಡೆ ಮಾಡಿದರು. ಭೀಮಾ ನದಿ ತೀರದಲ್ಲಿ ನಡೆದಂಥ ಯುದ್ಧದ ಹಿನ್ನೆಲೆಯ ಮೇಲೆ ನಿರ್ಮಿತವಾದ ಎಐ ಆಧಾರಿತ ಚಿತ್ರ ಇದಾಗಿದೆ. ರುಜಾಕಿ ಸ್ಟುಡಿಯೋಸ್ ಆಶ್ರಯದಲ್ಲಿ ಶೋಭನ್ ಬಾಬು ನಿರ್ದೇಶನ, ಚಿತ್ರಕತೆ, ಸಂಕಲನ ಮಾಡಿದ್ದಾರೆ. ದಲಿತ ಮಹಾ ಸೇನೆಯ ರಾಜ್ಯಾಧ್ಯಕ್ಷ ಖಾದ್ರಿಪುರ ಬಾಬು ನಿರ್ಮಿಸಿದ್ದಾರೆ. ಸುಮಾರು 37 ನಿಮಿಷಗಳ ಈ ಸಿನಿಮಾವನ್ನು ಜನಪ್ರತಿನಿಧಿಗಳು ಹಾಗೂ ದಲಿತ ಮುಖಂಡರು ವೀಕ್ಷಿಸಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಳೆಯ ದಾಖಲೆ ಪತ್ರವೊಂದನ್ನು ವೀಕ್ಷಣೆ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮಹಾರ್ ಸೈನಿಕರ ಸಾಹಸ ಮೆಚ್ಚಿ ಬ್ರಿಟನ್‌ನ ಫ್ರಾನ್ಸಿಸ್ ಸ್ಟಂಟೌನ್ ಬರೆದಿದ್ದ ಪತ್ರವೊಂದನ್ನು ಅವರು ನೋಡುತ್ತಾರೆ. ಕೊನೆಯಲ್ಲಿ ಅಂಬೇಡ್ಕರ್ ಅವರ ಪ್ರೇರಣಾದಾಯಕ ಮಾತಿನೊಂದಿಗೆ ಸಿನಿಮಾ ಮುಗಿಯುತ್ತದೆ. ಮಹಾರ್ ಸೈನಿಕರ ಸ್ಮರಣಾರ್ಥ ನಿರ್ಮಿಸಿರುವ ವಿಜಯ ಸ್ತಂಭ ಬರೀ ಕಲ್ಲಲ್ಲ; ಮಾನವ ಗೌರವದ ಸಂಕೇತ ಎಂದು ಅಂಬೇಡ್ಕರ್ ಹೇಳುತ್ತಾರೆ. ಸ್ಮಾರಕದ ಮುಂದೆ ಬಾಲಕಿಗೆ ಪೆನ್ ನೀಡುತ್ತಾರೆ. ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್, ಮೈನವಿರೇಳಿಸುವ ಸಿನಿಮಾವಿದು. 37 ನಿಮಿಷಗಳಲ್ಲಿ ಇಡೀ ಭೀಮ ಕೋರೆಗಾಂವ್ ಇತಿಹಾಸ ತೋರಿಸಿದ್ದಾರೆ. ಅಂಬೇಡ್ಕರ್ ಅವರನ್ನು ಅದ್ಭುತವಾಗಿ ಚಿತ್ರಿಕರಿಸಿದ್ದಾರೆ. ಸಿದ್ಧನಾಯಕ ಪಾತ್ರವೂ ಚೆನ್ನಾಗಿ ಮೂಡಿಬಂದಿದೆ. ಅದ್ಭುತವಾಗಿ ಕಲ್ಪನೆಯಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ದೊಡ್ಡ ದೊಡ್ಡ ನಿರ್ದೇಶಕರು ಮಾಡದ ಕೆಲಸವನ್ನು ಶೋಭನ್ ಬಾಬು ಮಾಡಿದ್ದಾರೆ. ಯಾವುದೇ ದೊಡ್ಡ ನಿರ್ದೇಶಕರು, ನಿರ್ಮಾಪಕರಿಗೆ ಕಡಿಮೆ ಇಲ್ಲ. ಮುಂದೆ ಒಳ್ಳೆಯ ಅವಕಾಶಗಳು ಸಿಗಲಿವೆ. ಇದು ಪ್ರೀ ರಿಲೀಸ್ ಇವೆಂಟ್. ಈ ಚಿತ್ರವನ್ನು ಎಲ್ಲರಿಗೂ ತೋರಿಸಬೇಕು ಎಂದರು.ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರ ಆತ್ಮ ಖಂಡಿತ ಸಂತೃಪ್ತಿಗೊAಡಿರುತ್ತದೆ. ಅದಕ್ಕೆ ಕಾರಣ ನಿರ್ದೇಶಕ ಶೋಭನ್ ಬಾಬು ಕಥೆ ಕಟ್ಟಿಕೊಟ್ಟಿರುವ ರೀತಿ. ಇತಿಹಾಸದಲ್ಲಿ ಹೇಳಲಾಗದ ಹಲವಾರು ಕಥೆಗಳಿವೆ. ಅಂಬೇಡ್ಕರ್ ದಾಖಲೆ ಪರಿಶೀಲಿಸುವಾಗ ಅದರಲ್ಲಿ ಈ ಭೀಮ ಕೋರೆಗಾಂವ್ ವಿಚಾರ ಗೊತ್ತಾಗುತ್ತದೆ. ಇಂಥ ಸಿನಿಮಾ ಮಾಡಲು ಬಂದವರು ಕಡಿಮೆ. ಈಗ ಅದ್ಭುತವಾಗಿ ಎಐ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ. ರೋಮಾಂಚನ ಉಂಟು ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಿನಿಮಾ ತೋರಿಸಬೇಕು ಎಂದು ಹೇಳಿದರು.
ನಿರ್ಮಾಪಕ ಖಾದ್ರಿಪುರ ಬಾಬು ಮಾತನಾಡಿ, ಈಗ ಗಣ್ಯರಿಗೆ ಮಾತ್ರ ಈ ಚಿತ್ರ ತೋರಿಸಲಾಗಿದೆ. ಮುಂದೆ ಎಲ್ಲರಿಗೂ ತೋರಿಸುತ್ತೇವೆ, ಪ್ರಚಾರ ಕೂಡ ಮಾಡುತ್ತೇವೆ. ನಿಜವಾಗಿಯೂ ಇಂಥ ಸಿನಿಮಾ ಮಾಡಲು 300 ಕೋಟಿ ಬೇಕಾಗುತ್ತದೆ. ಆದರೆ, ಎಐ ಮೂಲಕ ಕೇವಲ 37 ನಿಮಿಷಗಳಲ್ಲಿ ಕಥೆ ಕಟ್ಟಿಕೊಡಲಾಗಿದೆ. ನಿರ್ದೇಶಕ ಶೋಭನ್ ಬಾಬು ಮಾತನಾಡಿ, ಅಂಬೇಡ್ಕರ್ ಕುರಿತು ಸಿನಿಮಾ ಮಾಡಬೇಕೆಂದು ತಂದೆ ಹೇಳಿದ್ದರು. ಈ ಸಂಬAಧ ನಾನು ಆಲೋಚನೆಯಲ್ಲಿ ತೊಡಗಿದ್ದೆ. ಅಂಬೇಡ್ಕರ್ ಅವರನ್ನು ಒಳಗೊಂಡ ಭೀಮ ಕೋರೆಗಾಂವ್ ಸಿನಿಮಾ ಮಾಡಿದೆ ಎಂದು ತಿಳಿಸಿದರು.
ಪೇಶ್ವೆಗಳು ಜಾತಿ ವ್ಯವಸ್ಥೆಯಡಿ ಆಡಳಿತ ನಡೆಸುತ್ತಿದ್ದರು. ಒಡೆದು ಆಳುವ ನೀತಿಯ ಭಾಗವಾಗಿ ಪೇಶ್ವೆ ಬಾಜಿರಾಯನನ್ನು ಸೋಲಿಸಲು ಬ್ರಿಟಿಷರು ಮಹಾರ್ ಸೈನಿಕರ ನೆರವು ಕೋರುತ್ತಾರೆ. ಆಗ ಮಹಾರ್ ಯೋಧರು ಪೇಶ್ವೆಗೆ ಷರತ್ತಿನ ಬೆಂಬಲ ನೀಡಲು ಬಾಜಿರಾಯನ ಬಳಿಗೆ ತಮ್ಮ ದಂಡನಾಯಕ ಸಿದ್ಧನಾಯಕನ್ನು ಕಳಿಸುತ್ತಾರೆ. ಆದರೆ, ತಾವು ಅಸ್ಪೃಶ್ಯರು, ಈ ಜಾಗದಲ್ಲಿ ತಮ್ಮ ಪಾದ ಸ್ಪರ್ಶವೂ ಆಗಬಾರದೆಂದು ಬಾಜಿರಾಯನ ಸಿದ್ಧನಾಯಕನನ್ನು ಅವಮಾನ ಮಾಡಿ ಕಳಿಸುತ್ತಾನೆ. ಇದರಿಂದ ಆಕ್ರೋಶಗೊಂಡ ಮಹಾರ್ ಸೈನಿಕರು ಬಾಜಿರಾಯನ ಬೆನ್ನುಮೂಳೆ ಮುರಿಯಲು ಬ್ರಿಟಿಷರ ಪರ ಯುದ್ಧ ಮಾಡಲು ಒಪ್ಪಿಕೊಳ್ಳುತ್ತಾರೆ. 1818ರ ಜನವರಿ 1ರಂದು ಪುಣೆ ಹತ್ತಿರದ ಭೀಮ ನದಿ ತೀರದಲ್ಲಿ 28 ಸಾವಿರ ಸೈನಿಕರಿದ್ದ ಪೇಶ್ವೆ ಹಾಗೂ 800 ಮಹಾರ್ ಸೈನಿಕರ ನಡುವೆ ಯುದ್ಧ ನಡೆಯುತ್ತದೆ. ಬ್ರಿಟಿಷರು ಗೆಲ್ಲುತ್ತಾರೆ, ಪೇಶ್ವೆ ಸೈನಿಕರು ಸೋಲುತ್ತಾರೆ. ಆದರೆ, ಸಿದ್ಧನಾಯಕ ಸೇರಿದಂತೆ ಹಲವಾರು ಮಹಾರ್ ಸೈನಿಕರು ವೀರಮರಣ ಅಪ್ಪುತ್ತಾರೆ. ಅವರ ಸ್ಮರಣಾರ್ಥ ಬ್ರಿಟಿಷ್ ಸರ್ಕಾರ ವಿಜಯ ಸ್ತಂಭ ಸ್ಥಾಪಿಸುತ್ತದೆ. 100 ವರ್ಷದ ಬಳಿಕ ಈ ವಿಚಾರ ಅಂಬೇಡ್ಕರ್ ಅವರಿಗೆ ದಾಖಲೆಗಳಿಂದ ಗೊತ್ತಾಗುತ್ತದೆ. ಈ ಜಾಗಕ್ಕೆ ಅವರು ಭೇಟಿ ಕೂಡ ನೀಡುತ್ತಾರೆ. ಈ ವಿಚಾರ ಇಟ್ಟುಕೊಂಡು ಎಐ ಆಧಾರಿತ ಸಿನಿಮಾ ನಿರ್ಮಿಸಲಾಗಿದೆ.
ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರ ಬ್ಲಾಕ್ ಅಧ್ಯಕ್ಷ ಸೈಯದ್ ಅಫ್ಸರ್, ಕೋಮುಲ್ ನಿರ್ದೇಶಕ ರಮೇಶ್ ಚಂಜಿಮಲೆ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶನ ಎಂ.ಶ್ರೀನಿವಾಸನ್, ಮುಖಂಡರಾದ ಸಂಪಂಗೆರೆ ಮುನಿರಾಜು, ರಾಜಕುಮಾರ್, ಮಾರ್ಜೇನಹಳ್ಳಿ ಬಾಬು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಡಿಪಿಎಸ್ ಮುನಿರಾಜು ಚಿತ್ರ ವೀಕ್ಷಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು