LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಭರ್ತಿ 9 ಮುದ್ದೆ ತಿಂದು `ಟಗರು' ಗೆದ್ದ ಭೂಪ..!

ಯಲಹಂಕ: ಮಂಡ್ಯ ಭಾಗದಲ್ಲಿ ನಡೆಯುತ್ತಿದ್ದ ಗ್ರಾಮೀಣ ನಾಟಿ ಕೋಳಿ ಸಾರು, ಮುದ್ದೆ ಊಟದ ಸ್ಪರ್ಧೆ ಬೆಂಗಳೂರಿನ ಯಲಹಂಕ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಕಿತ್ತನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ. ಡಿ. ರವಿಕುಮಾರ್ ರವರ ಪರಿಶ್ರಮದಿಂದ ಯಶಸ್ವಿಯಾಗಿ ನಡೆಯಿತು.

ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಹೋಬಳಿ ವ್ಯಾಪ್ತಿಯ ಕಿತ್ತನಹಳ್ಳಿ, ಸೊಂಡೆಕೊಪ್ಪ,ಕಡಬಗೆರೆ,ಮಾಚೋಹಳ್ಳಿ, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಡುವ ಗ್ರಾಮಸ್ಥರಿಗಾಗಿ ಅವ್ವೆರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ನಾಟಿ ಕೋಳಿ ಸಾರು ಮುದ್ದೆ ಊಟದ ಸ್ಪರ್ಧೆಯಲ್ಲಿ 17 ಸ್ಪರ್ಧಿಗಳು ಭಾಗವಹಿಸಿದ್ದು 30 ನಿಮಿಷ ಕಾಲಾವಕಾಶದಲ್ಲಿ ಬರೋಬ್ಬರಿ 300 ಗ್ರಾಂ ತೂಕದ 9 ಮುದ್ದೆಗಳನ್ನು ತಿಂದ ಕಿತ್ತನಹಳ್ಳಿ ಗ್ರಾಮದ ದುಗ್ಗಲಯ್ಯ ಮೊದಲ ಬಹುಮಾನವಾಗಿ ಕುರಿ ಟಗರನ್ನು ಪಡೆದರು.

ದ್ವಿತೀಯ ಬಹುಮಾನ ಕ್ಕೆ ತಲಾ 8 ಮುದ್ದೇಗಳನ್ನು ತಿಂದು ಸಮಬಲದ ಹೋರಾಟ ನೀಡಿದ ನಾರಾಯಣಪ್ಪ ಮತ್ತು ಹನುಮಂತಯ್ಯ ಬಾಜನರಾದರೆ ತೃತೀಯ ಬಹುಮಾನ ಲಕ್ಕೆನಹಳ್ಳಿ ಉಮೇಶ್ ಪಾಲಾಯಿತು . ಇಬ್ಬರು ಮಹಿಳೆಯರು ಸಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು ಒಟ್ಟಾರೆ ಹಳ್ಳಿ ಸೊಗಡಿನ ಗ್ರಾಮೀಣ ಆಟವನ್ನು ಕಣ್ತುಂಬಿಕೊಂಡ ಗ್ರಾಮಸ್ಥರು ಸಂತಸ ಗೊಂಡರು.

ಬಳಿಕ ಮಾತನಾಡಿದ ಆಯೋಜಕರಾದ ಡಿ ರವಿಕುಮಾರ್ ಪ್ರಾಯೋಗಿಕವಾಗಿ ನಾಲ್ಕು ಪಂಚಾಯತಿಗಳ ವ್ಯಾಪ್ತಿಯಲ್ಲಿ ಈ ಆಟವನ್ನು ಆಯೋಜಿಸಿದ್ದ ಈ ಆಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮುಂದಿನ ದಿನಗಳಲ್ಲಿ ಯಲಹಂಕ ಕ್ಷೇತ್ರದ ಮಟ್ಟದಲ್ಲಿ ಶಾಸಕರದ ಎಸ್‍ಆರ್ ವಿಶ್ವನಾಥ್ ಸಾರಥ್ಯದಲ್ಲಿ ನಡೆಸಲಾಗುವುದು ಆಟದಲ್ಲಿ ಭಾಗಿಯಾದ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ. ಅವ್ವೆರಹಳ್ಳಿ ವೆಂಕಟೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಧಾ ರವಿಕುಮಾರ್,ಮಾಚೋಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಮಾಯಣ್ಣ, ನರಸಿಂಹಮೂರ್ತಿ, ಕೊಂಡೆಕೊಪ್ಪ ಗ್ರಾ. ಪಂ. ಅಧ್ಯಕ್ಷ ಎಂ. ಕುಸುಮ ಚಿಕ್ಕಣ್ಣ, ಉಪಾಧ್ಯಕ್ಷ ಎಸ್‍ಎನ್ ಜಗದೀಶ್, ಅವೆರಳ್ಳಿ ಅಪ್ಪಿ, ಭಾಗಿಯಾಗಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು