LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ಕೋಲಾರದಲ್ಲಿ "ಚನ್ನಪ್ಪ ಚನ್ನಗೌಡ" ನಾಟಕ ಪ್ರದರ್ಶನ

ಕೋಲಾರ: ಬಂಗಾರಪೇಟೆ ತಾಲ್ಲೂಕಿನ ಬ್ಯಾಡಬಲೆಯ ಶ್ರೀ ವಿಜಯ ಕೃಷ್ಣ ಕಲಾ ಸಂಘದಿAದ ಹೆಸರಾಂತ ಚಲನಚಿತ್ರ ನಟನಟಿ ಯರಿಂದ " ಚನ್ನಪ್ಪ ಚನ್ನಗೌಡ " ನಾಟಕ ಕಾರ್ಯಕ್ರಮವನ್ನು ನಗರದ ಟಿ. ಚನ್ನಯ್ಯ ರಂಗಮAದಿರದಲ್ಲಿ ಏರ್ಪಡಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಜನಪ್ರಿಯ ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಟಿವಿ, ಮೊಬೈಲ್ ತಂತ್ರಜ್ಞಾನ ಬಳಕೆ ಹೆಚ್ಚಾಗಿರುವುದರಿಂದ ಗ್ರಾಮೀಣ ಭಾಗದ ನೈಜ ಕಲೆಗಳು ನಶಿಸಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮ ಬ್ಯಾಡಬಲೆ ಕೆ ಮುರಳಿ ರವರು ಕಲೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿರಂತರವಾಗಿ ಪೋಷಣೆ ಮಾಡುತ್ತಾ ಬಂದಿದ್ದಾರೆ. ಇವರಿಗೆ 2025-26 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿರುವುದು ನಮ್ಮ ಕೋಲಾರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಇವರ ಮುಂದಿನ ಕಾರ್ಯಕ್ರಮಗಳಿಗೆ ನಾವೆಲ್ಲರೂ ಕೈ ಜೋಡಿಸೋಣ ಎನ್ನುತ್ತಾ ಇವರ ರಂಗಭೂಮಿ ಸೇವೆ ಉಲ್ಬಣಗೊಳಿಸಲೆಂದು ಹಾಗೂ ಇನ್ನೂ ಹೆಚ್ಚಿನ ಪ್ರಶಸ್ತಿ ಪುರಸ್ಕಾರಗಳು ದೊರೆಯಲೆಂದು ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಜಿಲ್ಲಾಧ್ಯಕ್ಷ ನಾಗಾನಂದ್ ಕೆಂಪರಾಜ್ ಮಾತನಾಡಿ, ಈ ಒಂದು ಆದುನಿಕ ಯುಗದಲ್ಲಿ ನಾವೆಲ್ಲ ಇಲ್ಲದಿದ್ದರೂ ನಾವಿದ್ದೇವೆ ಎನ್ನುವಂತ ಒಂದು (ಆರ್ಟಿಫಿಶಿಯಲ್ ಇಂಟೆಲಿಜೇAನ್ಸ್) ಕೃತಕ ಮತ್ತೆಗೆ ಕಾಲಿಟ್ಟಿದ್ದೇವೆ. ಇಂತಹ ಒಂದು ಸಂದರ್ಭದಲ್ಲಿ ನಮ್ಮ ಒಂದು ಪ್ರಾಚೀನ ಪರಂಪರೆ, ಸಂಸ್ಕೃತಿ, ನಮ್ಮದೇ ಆದಂತಹ ವಿಚಾರಧಾರೆಗಳನ್ನು ಉಳಿಸಿಕೊಂಡು ಹೋಗಬೇಕಾದ್ದು ನಮೆಲ್ಲರ ಆದ್ಯ ಕರ್ತವ್ಯ. ವಿಶೇಷವಾಗಿ ರಂಗಭೂಮಿ ಪ್ರಾಚೀನ ಕಾಲದಿಂದಲೂ ಸಹ ತನ್ನದೇ ಆದ ವೈಭವವನ್ನು ಕಂಡAತಹ ಕಾಲ, ಆದರೆ ಇವತ್ತಿನ ಒಂದು ಪರಿಸ್ಥಿತಿಯಲ್ಲಿ ನಾವು ರಂಗಭೂಮಿ ಇದ್ರೂ ಕೂಡ ಯಶಸ್ಸನ್ನು ಕಾಣದ ಒಂದು ಸಂದರ್ಭದಲ್ಲಿ ನಮ್ಮ ಬಂಗಾರಪೇಟೆ ತಾಲ್ಲೂಕಿನ ಒಂದು ಕುಗ್ರಾಮ ಬ್ಯಾಡಬಲೆಯಲ್ಲಿ ಹುಟ್ಟಿ ಬೆಳೆದು ರಂಗಭೂಮಿಗಾಗಿ ಇಡೀ ರಾಜ್ಯ ಹಾಗೂ ದೇಶಾದ್ಯತ ಹೋರಾಟ ಮಾಡಿ ರಂಗಭೂಮಿಯಲ್ಲಿ ತಮ್ಮದೇ ಆದಂಥಹ ಪ್ರತಿಭೆಯನ್ನು ತೋರಿಸುವ ಮೂಲಕ 2025-26 ನೇ ಸಾಲಿನ ರಾಜ್ಯ ಮಟ್ಟದ ನಾಟಕ ಅಕಾಡೆಮಿ ಪ್ರಶಸ್ತಿ ಬಂದಿರುವುದು ನಮ್ಮ ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವಾಗಿದೆ. ಮುರಳಿ ರವರು ಸ್ವಯಂ ಕೃಷಿ ಅಂತ ನಾವು ಕರೀತೇವೆ. ಬಹಳ ಕಷ್ಟದಿಂದ ರಂಗಭೂಮಿಯನ್ನು ಬೆಳೆಸಿಕೊಂಡು ಬಂದಿರುತ್ತಾರೆ, ಆದ್ರೂ ಎಷ್ಟೋ ಜನ ಎಷ್ಟೋ ಕೆಲಸಗಳನ್ನ ಮಾಡಬಹುದಾಗಿತ್ತು, ನಾನು ಸಾಹಿತ್ಯ ಪರಿಷತ್ ಅವಧಿಯಲ್ಲಿ ಸುಮಾರು ಇಪ್ಪತೈದು ಶ್ರೇಷ್ಟ ನಾಟಕಗಳನ್ನು ಮಾಡಿಸಿದ್ದೆ, ಅಂತ ಒಂದು ಕಾಲದಲ್ಲಿ ಕೂಡ ಮುರಳಿರವರು ನಮ್ಮ ಸಹಯೋಗದಲ್ಲಿ ಕಾರ್ಯಕ್ರಮಗಳನ್ನ ಮಾಡಿದ್ದಾರೆ, ಆದರ ಇವತ್ತಿನ ಪರಿಸ್ಥಿತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಮುರಳಿರವರು ರಂಗಭೂಮಿಯನ್ನ ಉಳಿಸಿ ಬೆಳೆಸುವಂತ ಕೆಲಸ ಮಾಡುತ್ತಿರುವುದು ಬಹಳ ಸಂತೋಷವಾಗಿದೆ, ಕಾರ್ಯಕ್ರಮಕ್ಕೆ ಆಗಮಿಸಿರುವ ನೀವೆಲ್ಲರೂ ಸಹ ನಿಜವಾದಂತಹ ರಂಗಭೂಮಿಯ ಕಲಾಭಿಮಾನಿಗಳು ಮಂದಿನ ದಿನಗಳಲ್ಲಿ ಇಂತಹ ರಂಗಭೂಮಿ ಕಲಾವಿದರನ್ನ ಬೆಳೆಸುವಂತ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದರು.ಕೋಲಾರ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯ ಬೆಳಮಾರನಹಳ್ಳಿ ಆನಂದ್ ಮಾತನಾಡಿ, ಶ್ರೀ ವಿಜಯಕೃಷ್ಣ ಕಲಾ ಸಂಘದ ಸ್ಥಾಪಕ ಬ್ಯಾಡಬಲೆ ಕೆ ಮುರಳಿ ರವರು ಕೋಲಾರ ಜಿಲ್ಲೆಗೆ ಅತ್ಯುತ್ತಮ ನಾಟಕಗಳು ಕೊಟ್ಟು ಜಿಲ್ಲೆಯ ಜನರ ಮನತಣಿಸುತ್ತಿದ್ದಾರೆ, ಇವರಿಗೆ ಮತ್ತಷ್ಟು ಕೋಲಾರ ಜಿಲ್ಲೆಯ ಜನತೆ ಶಕ್ತಿ ನೀಡಲೆಂದು ಹಾರೈಸಿದರು. ಎಲೆಮರೆ ಕಾಯಂತಿರುವ ನಮ್ಮ ಬ್ಯಾಡಬಲೆ ಕೆ ಮುರಳಿ ರವರಿಗೆ ಇನ್ನೂ ಹಚ್ಚಿನ ಪ್ರಶಸ್ತಿ, ಪುರಸ್ಕಾರಗಳು ಲಭಿಸಲೆಂದು ಹಾರೈಸಿದರು.ವೇದಿಕೆಯಲ್ಲಿ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ. ಮುನಿರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ವಿಜಯಲಕ್ಷ್ಮಿ, ವಿಟಪನಹಳ್ಳಿ ಕೋಟೆ ಸಿ.ಎಂ ನಾರಾಯಣಸ್ವಾಮಿ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಡಾ.ಬಿ ಶಂಕರಪ್ಪ, ನಿವೃತ್ತ ಬಿಇಒ ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ ವೆಂಕಟಪತಿ, ಅಡುಗೆ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್ ರಮೇಶ್ ಬಾಬು, ತರಕಾರಿ ದಲ್ಲಾಳಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಅಮರೇಶ್, ಸಂಪತ್ ಕುಮಾರ್, ಚೌಡಪ್ಪ, ವೀಣಾ ವೆಂಕಟೇಶ್ ಮುಂತಾದವರು ಭಾಗವಹಿಸಿದ್ದರು.ಕಲಾವಿದರಾದ ಚಿತ್ರನಟಿ ರೇಖಾದಾಸ್, ಮಂಡ್ಯ ಜಯರಾಮ್, ಹೆಚ್.ಓಬಳೇಶ್, ನಾಗೇಂದ್ರ, ಬ್ಯಾಡಬೆಲೆ ಕೆ.ಮುರಳಿ, ಮಂಜುಳ, ಮಹೇಶ್ವರಿ, ಭಾಗ್ಯಶ್ರೀ ನಟಿಸಿ ಜನರ ಮನಸೊರೆಗೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು