LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕಿಂಗ್ಸ್' ಕಾದಾಟಕ್ಕೆ ಚೆಪಾಕ್ ರೆಡಿ

ಗುಜರಾತ್ ಜೈಂಟ್ಸ್ ವಿರುದ್ದ ಗೆದ್ದ ಉತ್ಸಾಹದಲ್ಲಿರುವ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ವಿರುದ್ಧ ಪರಾಭವ ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎಂ ಎಂ ಚಿದಂಬAರ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಏಪ್ರಿಲ್ 3 ಶುಕ್ರವಾರದಂದು ನಡೆಯಲಿರುವ ಸೀಸನ್ ನ ಏಳನೇ ಪಂದ್ಯದಲ್ಲಿ ಚೆನ್ನೈ ಗೆಲುವಿನ ಖಾತೆ ತೆರೆಯಲಿದೆಯೇ ಅಥವಾ ಬಿಲಿಷ್ಟ ಪಂಜಾಬ್ ತನ್ನ ವಿಜಯಯಾತ್ರೆ ಮುಂದುವರಿಸಲಿದೆಯೇ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕಳೆದ ಸೀಸನ್‌ನಿಂದಲೂ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡಕ್ಕೆ ಈ ಬಾರಿಯ ಆರಂಭವೂ ಆಶಾದಾಯಕವಾಗಿಲ್ಲ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಭಾರಿ ಸೋಲು ಅನುಭವಿಸಿರುವುದು ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟು ನೀಡಿದೆ. ಧೋನಿ ಅನುಪಸ್ಥಿತಿಯೂ ತಂಡವನ್ನು ಕಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಪಂದ್ಯದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್, ಸ್ಟಾರ ಬ್ಯಾಟರ್ ಸಂಜು ಸ್ಯಾಮ್ಸನ್ ಸೇರಿದಂತೆ ಚೆನ್ನೈನ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಜಾಮಿ ಓವರ್ಟನ್ ಹೋರಾಟಯುತ 43 ರನ್ ಗಳಿಸಿದ್ದರಿಂದ ತಂಡ 127 ರನ್‌ಗಳ ಸಾಧಾರಣ ಮೊತ್ತವನ್ನಾದರೂ ತಲುಪಲು ಸಾಧ್ಯವಾಯಿತು. ಇನ್ನು ಮೊನಚಿಲ್ಲದ ಚೆನ್ನೈ ಬೌಲಿಂಗ್ ಅನ್ನು ವೈಭವ್ ಸೂರ್ಯವಂಶಿ ಮನಸೋ ಇಚ್ಛೆ ದಂಡಿಸಿದ್ದರಿAದ ರಾಜಸ್ಥಾನ ರಾಯಲ್ಸ್ ಕೇವಲ 12.1 ಓವರ್‌ಗಳಲ್ಲಿ ಗುರಿ ತಲುಪಿತ್ತು. ಮುಂದಿನ ಪಂದ್ಯದಲ್ಲೂ ಬ್ಯಾಟಿಂಗ್ ನಲ್ಲಿ ಸ್ಥಿರತೆ ಮತ್ತು ಬೌಲಿಂಗ್ ಶಿಸ್ತು ಕಾಪಾಡಿಕೊಳ್ಳದೇ ಹೋದರೆ ಪಂಜಾಬ್ ಕಿಂಗ್ಸ್ ಸಹ ಚೆನ್ನೈಗೆ ನೀರು ಕುಡಿಸುವುದು ಖಚಿತ.
ಚೆನ್ನೈ ಪಿಚ್ ವರದಿ
ಚೆನ್ನೈನ ಎಂ.ಎ. ಚಿದಂಬರA ಕ್ರೀಡಾಂಗಣವು ಯಾವತ್ತೂ ಸ್ಪಿನ್ ಸ್ನೇಹಿ ಪಿಚ್ ಎಂದೇ ಫೇಮಸ್. ಟಿ20 ಪಂದ್ಯಗಳಿಗೂ ಇದರ ಸ್ವರೂಪವನ್ನೇನು ಬದಲಾಯಿಸಲಾಗಿಲ್ಲ. ಇಲ್ಲಿನ ಟ್ರಾಕ್ ನ ನಿಧಾನಗತಿಯ ಮೇಲ್ಮೈಯು ಬ್ಯಾಟ್ಸ್ಮನ್‌ಗಳಿಗೆ ದೊಡ್ಡ ಸವಾಲು. ಹಾಗೆಂದು ವೇಗದ ಬೌಲರ್ ಗಳೇನು ಆಧಿಪತ್ಯ ಸಾಧಿಸುವುದೂ ಸುಲಭವಲ್ಲ. ಅದೇ ಸ್ಪಿನ್ನರ್ ಗಳು ಮಾತ್ರ ಇಲ್ಲಿ ಚೆನ್ನಾಗಿ ವಿಕೆಟ್ ಗಳನ್ನು ಎತ್ತಬಹುದು. ದೊಡ್ಡ ಸ್ಕೋರ್ ಮಾಡಲು ಬ್ಯಾಟ್ಸ್ಮನ್‌ಗಳು ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಐಪಿಎಲ್‌ನಲ್ಲಿ ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ ಇಲ್ಲಿ 160 ಎಂಬುದೇ ಪಿಚ್ ಯಾವ ರೀತಿ ಇರುತ್ತದೆ ಎಂಬುದಕ್ಕೆ ಸಾಕ್ಷಿ. ಇನ್ನು ಟಾಸ್ ಗೆದ್ದವರು ಇಲ್ಲಿ ಇಲ್ಲಿ ಮೊದಲು ಫೀಲ್ಡಿಂಗ್ ಮಾಡುವುದು ಉತ್ತಮ ಆಯ್ಕೆಯಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು