LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಚೆಸ್ ಸ್ಪರ್ಧೆ ಆಯೋಜನೆ

ಬೆಂಗಳೂರು: ಗ್ರಾಹಕರಲ್ಲಿ ಬಳಸಿದ ಕಾರುಗಳ ಕುರಿತು ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿರುವ ಬಳಸಿದ ಕಾರ್ ರಿಟೇಲರ್ ಆಗಿರುವ ಸ್ಪಿನ್ನಿ ಸಂಸ್ಥೆ ಇತ್ತೀಚೆಗೆ ಬೆಂಗಳೂರು ಚೆಸ್ ಕ್ಲಬ್ ಮತ್ತು ಚೆಸ್.ಕಾಮ್ ಸಹಯೋಗದಲ್ಲಿ ಚೆಕ್ಮೇಟ್ ಪಾರ್ಕ್ ಎಂಬ ಉತ್ಸಾಹದಾಯಕ ಚೆಸ್ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಯು ಬೆಂಗಳೂರಿನ ಸ್ಪಿನ್ನಿ ಪಾರ್ಕ್‍ನಲ್ಲಿ ನಡೆಯಿತು.

1000+ ಕಾರುಗಳು ಮತ್ತು ಪ್ರಶಾಂತವಾದ ಸರೋವರದ ಹಿನ್ನೆಲೆಯಲ್ಲಿ ನೆಲೆಗೊಂಡಿರುವ ಸ್ಪಿನ್ನಿ ಪಾರ್ಕ್ ಅಪೂರ್ವವಾದ ಚೆಸ್ ಪಂದ್ಯಾವಳಿಗೆ ಪರಿಪೂರ್ಣ ವೇದಿಕೆಯನ್ನು ಒದಗಿಸಿತ್ತು. ಹೆಸರಾಂತ ಚೆಸ್ ಹಬ್‍ಗಳ ಬೆಂಬಲದಲ್ಲಿ ನಡೆದ ಈ ಚೆಸ್ ಪಂದ್ಯಾವಳಿಯು ಕೌಶಲ್ಯ ಹೊಂದಿದ ಚೆಸ್ ಆಟಗಾರರಿಗೆ ಮರೆಯಲಾಗದ ಅನುಭವವನ್ನು ಒದಗಿಸಿತು.

ಅನುಭವಿ ಆಟಗಾರರಿಂದ ಹಿಡಿದು ಮಹತ್ವಾಕಾಂಕ್ಷಿ ಹೊಸ ಆಟಗಾರರವರೆಗೆ ಸರಿಸುಮಾರು 100 ಸ್ಪರ್ಧಿಗಳು ದಿನವಿಡೀ ನಡೆದ ಪಂದ್ಯಗಳಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮವು ಆಟಗಾರರಿಗೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುವುದರ ಜೊತೆಗೆ ಬೆಂಗಳೂರಿನ ಚೆಸ್ ಉತ್ಸಾಹಿಗಳಲ್ಲಿ ಸಮುದಾಯ ಪ್ರಜ್ಞೆ ಮತ್ತು ಸೌಹಾರ್ದತೆ ಪ್ರಜ್ಞೆಯನ್ನು ದೃಢಗೊಳಿಸುವಂತೆ ಮಾಡಿತು.

ಬೆಂಗಳೂರು ಸಿಟಿ ಹೆಡ್ ಅಂಶುಮಾನ ಕಾರಂಗಿ, “ಚೆಸ್.ಕಾಮ್ ಮತ್ತು ಬೆಂಗಳೂರು ಚೆಸ್ ಕ್ಲಬ್ ಸಹಯೋಗದಲ್ಲಿ ಇಂತಹ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾವು ಸಂತೋಷ ಪಡುತ್ತಿದ್ದೇವೆ.ಈ ಪಂದ್ಯಾವಳಿಯಲ್ಲಿ ಭಾಗವಹಿಸಿದವರ ಅಗಾಧ ಪ್ರತಿಕ್ರಿಯೆಯು ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಚೆಸ್ ಉತ್ಸಾಹವನ್ನು ತೋರಿಸುತ್ತದೆ. ಪ್ರತಿ ನಗರದಲ್ಲಿ ಸ್ಪಿನ್ನಿ ಪಾರ್ಕ್ಗಳನ್ನು ಸಾಂಸ್ಕೃತಿಕ ಕೇಂದ್ರಗಳಾಗಿ ಪೋಷಿಸಲು ನಾವು ಬದ್ಧರಾಗಿದ್ದೇವೆ ಮತ್ತು ನಾವು ಬೆಂಗಳೂರಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು