LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಸಿಟಿಲೈಟ್ಸ್ ಸಿನಿಮಾದ ಸಾಂಗ್ ರಿಲೀಸ್

ದುನಿಯಾ ವಿಜಯ್ ನಿರ್ದೇಶನದ ಸಿಟಿಲೈಟ್ಸ್ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದೆ.. ಬಾವ ಬಾವ ಹಾಡಿನ ಮೂಲಕ ದುನಿಯಾ ವಿಜಯ್ ಮತ್ತೆ ಟ್ರೆಂಡಿ ಸಾಂಗ್ ಅನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಈ ಹಾಡನ್ನು ಅಂಕಿತ್ ಕುಮಾರ್ ಬಾವ ಅವರೇ ಬರೆದು ಹಾಡಿದ್ದಾರೆ. ಚರಣ್ ರಾಜ್ ಹಾಡಿಗೆ ಸಂಗೀತ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಣ್ ರಾಜ್, `ದುನಿಯಾ ವಿಜಯ್ ಅವರು ಪ್ರತಿ ಬಾರಿ ಹಾಡು ಇದೇ ರೀತಿ ಬೇಕು ಅನ್ನೋ ಒಂದಷ್ಟು ವಿಚಾರಗಳನ್ನ ಇಟ್ಟುಕೊಂಡೆ ಬಂದಿರುತ್ತಾರೆ ಅದು ನನಗೆ ಸಹಾಯವಾಗುತ್ತೆ' ಎಂದರು.ಅಂಕಿತ್ ಕುಮಾರ್ ಬಾವ ಮಾತನಾಡಿ, ನನ್ನ ಹಳೆ ಹಾಡುಗಳನ್ನ ನೋಡಿ ನಮ್ಮ ತಂಡವನ್ನ ಕರೆಸಿ ಅವಕಾಶ ಕೊಟ್ರು.. ಎಂದರು. ನಟ ವಿನಯ್ ರಾಜ್ ಕುಮಾರ್ ಮಾತನಾಡಿ, ಚರಣ್ ಸರ್ ಗೆ ಒಂದು ಒಳ್ಳೆ ಸಾಂಗ್ ಕೊಡಿ ಅಂತ ಕೇಳಿದ್ದೆ ಆದರೆ ಅವರು ಐದು ಹಾಡುಗಳನ್ನ ಕೊಟ್ಟಿದ್ದಾರೆ ಖುಷಿ ಆಗ್ತಿದೆ' ಎಂದರು. ನಟಿ ಮೋನಿಷಾ ವಿಜಯ್ ಕುಮಾರ್ ಮಾತನಾಡಿ ವಿನಯ್ ರಾಜ್ ಕುಮಾರ್ ಜೊತೆ ಅಭಿನಯ ಮಾಡಿದ್ದು ಖುಷಿ ಕೊಟ್ಟಿದೆ. ತುಂಬಾ ವಿಚಾರಗಳನ್ನ ಕಲಿತಿದ್ದೇನೆ ಎಂದರು.
ನಟ ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ, ರ್ಯಾಪ್ ಹಾಡು ಯಾವಾಗಲು ಕಷ್ಟಗಳನ್ನ ಹೇಳಿಕೊಳ್ಳಲು ಬಳಸುವ ಹಾಡಾಗಿದೆ. ಸಿಟಿಲೈಟ್ಸ್ ನಲ್ಲಿ ನೋವು ಎನ್ನಿಸೋ ವಿಚಾರವನ್ನ ಹೇಳಲು ಹೊರಟಿದ್ದೇನೆ, ಈ ಕಥೆಗೆ ವಿನಯ್ ಅವ್ರೇ ಬೇಕಿತ್ತು ಪರ್ಸನಲಿ ನನಗೆ ವಿನಯ್ ಇಷ್ಟ' ಎಂದರು. ಈ ಸಿನಿಮಾ ಮೂಲಕ ಪುತ್ರಿ ಮೋನಿಷಾ ಚಿತ್ರರಂಗಕ್ಕೆ ಪರಿಚಯ ಆಗುತ್ತಿದ್ದಾಳೆ. ಹಳ್ಳಿಯಿಂದ ಬೆಂಗಳೂರಿಗೆ ಬಂದ ಇಬ್ಬರು ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ ಎನ್ನುವ ಕಥೆ ಚಿತ್ರದಲ್ಲಿದೆ. ಚಿತ್ರಕ್ಕೆ ಶಿವಸೇನಾ ಛಾಯಾಚಿತ್ರಗ್ರಹಣ, ದೀಪು ಎಸ್.ಕುಮಾರ್ ಸಂಕಲನ, ಮಾಸ್ತಿ ಅವರ ಸಂಭಾಷಣೆ ಮತ್ತು ಚರಣ್ ರಾಜ್ ಸಂಗೀತವಿದೆ. ದುನಿಯಾ ಟಾಕೀಸ್ ಹಾಗೂ ಯಂತ್ರೋದ್ದಾರಕ ಬ್ಯಾನರ್ ಅಡಿಯಲ್ಲಿ ವಿಜಯ್ ಕುಮಾರ್ ಹಾಗೂ ವಿಕ್ರಂ ಆರ್ಯಾ ನಿರ್ಮಾಣ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು