LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಜಯಲಲಿತಾ ಬಂಗಲೆ ಖರೀದಿಗೆ ಮುಂದಾದ ಸಿಎಂ ವಿಜಯ್

ಬೆಂಗಳೂರು: ಜಯಲಲಿತಾ ಬಂಗಲೆ ಖರೀದಿಗೆ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿರುವ ಜಯಲಲಿತಾ ಒಡೆತನದ "ವೇದಂ" ಬಂಗಲೆ ಖರೀದಿಸಲು ಜೋಸೆಫ್ ವಿಜಯ್ ಇರಾದೆ ಹೊರಹಾಕಿದ್ದಾರೆ ಎಂಬ ವಿಚಾರ ಮುನ್ನೆಲೆಗೆ ಬಂದಿದೆ.ಬರೋಬ್ಬರಿ 350 ಕೋಟಿ ರೂಪಾಯಿಗೆ ಮಾಜಿ ಸಿಎಂ ಜಯಲಲಿತಾ ಅವರ ವೇದಂ ಬಂಗಲೆ ಖರೀದಿಗೆ ಜೋಸೆಫ್ ವಿಜಯ್ ಆಸಕ್ತಿ ತೋರಿದ್ದು, ಸದ್ಯ ಜಯಲಲಿತಾ ನಿಧನದ ಬಳಿಕ "ವೇದಂ" ನಿವಾಸದಲ್ಲಿ ಅವರ ಸಂಬಂಧಿ ದೀಪಾ ವಾಸಿಸುತ್ತಿದ್ದಾರೆ. ದೀಪಾ ಜೊತೆಗೆ ಜೋಸೆಫ್ ವಿಜಯ್ ಖರೀದಿ ಬಗ್ಗೆ ಮಾತುಕತೆ ಆರಂಭಿಸಿದ್ದು, ಖರೀದಿಗೆ ಮುಂದಾಗಿರುವುದಕ್ಕೆ ಪ್ರಬಲ ಕಾರಣವೂ ಇದೆ ಎನ್ನಲಾಗಿದೆ.ಸದ್ಯ ಜೋಸೆಫ್ ವಿಜಯ್ ವಾಸವಿರುವುದು ಚೆನ್ನೈನ ನೀಲಂಕರೈ ಬಡಾವಣೆಯ ನಿವಾಸದಲ್ಲಿ. ಅಲ್ಲಿಗೂ ತಮಿಳುನಾಡಿನ ವಿಧಾನಸಭಾ ಕಾರ್ಯಾಲಯಕ್ಕೂ 17 ಕಿ.ಮೀ ಅಂತರವಿದೆ. ಪ್ರತಿನಿತ್ಯ ರಾಜ್ಯದ ಸಿಎಂ ಆಗಿ ಮನೆಯಿಂದ ಕಚೇರಿಗೆ, ಕಚೇರಿಯಿಂದ ಮನೆಗೆ ಓಡಾಟ ಮಾಡಲು ಸಮಯಾವಕಾಶ ಹೆಚ್ಚು ತಗುಲಲಿದೆ. ಜೊತೆಗೆ ಅಂತಾ ಟ್ರಾಫಿಕ್ ಕಿರಿಕಿರಿ ಜನಸಾಮಾನ್ಯರಿಗೆ ತಟ್ಟುತ್ತಿದೆ. ಪೋಯಸ್ ಗಾರ್ಡನ್‌ನ ಜಯಲಲಿತಾ ನಿವಾಸ ವಿಧಾನಸಭಾ ಕಾರ್ಯಾಲಯಕ್ಕೆ ಸಮೀಪವಿದೆ. ಈ ನಿಟ್ಟಿನಲ್ಲಿ ಜಯಲಲಿತಾ ಅವರ ಸಂಬAಧಿ ದೀಪಾ ಜೊತೆಗೆ ಜೋಸೆಫ್ ವಿಜಯ್ ಮಾತುಕತೆ ನಡೆಸಿದ್ದಾರೆ. ಈ ನಿವಾಸವನ್ನು ತಮಗೆ ಕೊಟ್ಟರೇ, ಜಯಲಲಿತಾ ಅವರ ನೆನಪು ಹಾಗೂ ವಿಧಾನಸಭಾ ಕಾರ್ಯಾಲಯಕ್ಕೂ ಸಮೀಪವಿರುವಂತೆ ಆಗುತ್ತದೆ ಎಂಬ ವಿಚಾರ ಮುಂದಿಟ್ಟುಕೊAಡು ಮಾತುಕತೆ ಮಾಡುತ್ತಿದ್ದು, ಇದು ಯಾವ ಹಂತಕ್ಕೆ ತಲುಪಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಹೊರ ಬೀಳಬೇಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು