LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

"ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಸಿಎಂ ಸ್ಥಾನ ಕುತ್ತು"

ಬೆಂಗಳೂರು: `ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದರೆ ಸಿದ್ದರಾಮಯ್ಯ ಸಿಎಂ ಸ್ಥಾನ ಕಳೆದುಕೊಳ್ಳಲಿದ್ದಾರೆ. ಕೆಲವು ಸಚಿವರು ಆ ಕಡೆ, ಕೆಲವು ಸಚಿವರು ಈ ಕಡೆ ಇದ್ದಾರೆ. ನವಂಬರನಲ್ಲಿ ಇದರಿಂದಲೇ ಸಿಎಂ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ' ಎಂದು ಬಸವ ಸಂಸ್ಕöÈತಿ ಅಭಿಯಾನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ಹಿನ್ನೆಲೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಅಮರೇಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ ಹೇಳಿದ್ದಾರೆ.

ವೀರಶೈವ ಲಿಂಗಾಯತ ಮಠಾಧೀಶರ ಸೂಚನೆ ಮಧ್ಯೆಯೂ ಬಸವ ಸಂಸ್ಕöÈತಿ ಅಭಿಯಾನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ಹಿನ್ನೆಲೆ ಹೇಳಿಕೆ ನೀಡಿರುವ ಸ್ವಾಮೀಜಿ, `ಸಿಎಂ ಪ್ರತ್ಯೇಕ ಲಿಂಗಾಯತ ಧರ್ಮ ಸಮಾರಂಭಕ್ಕೆ ಹೋಗಿರುವುದು ಒಂದು ಕಡೆ ಸಂತೋಷ , ಒಂದು ಕಡೆಗೆ ದುಃಖ ಆಗಿದೆ. ಬಸವಣ್ಣನ ಹೆಸರು ನಮ್ಮ ಮೆಟ್ರೋಗೆ ಇಡುವುದು, ಬಸವ ಕಲ್ಯಾಣದಲ್ಲಿ ವಚನ ವಿವಿ ಸ್ಥಾಪನೆ ಸೇರಿ ಕೆಲವು ವಿಷಯ ಸ್ವಾಗತಾರ್ಹವಾಗಿದೆ.

ಈ ಹಿಂದೆ ಸಿದ್ದರಾಮಯ್ಯನವರು ಒಂದುಗೂಡಿದ ಧರ್ಮ ಇಬ್ಬಾಗ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದರು. ಈಗ ಜೇನು ಗೂಡಿಗೆ ಕೈ ಹಾಕಿ ಜೇನಿನಿಂದ ಕಚ್ಚಿಸಿಕೊಳ್ಳುವುದು ಬೇಡ ಎಂದು ಹೇಳಿದ್ದೆವು. ಆದರೂ ಆ ಸಭೆ (ಪ್ರತ್ಯೇಕ ಲಿಂಗಾಯತರ ಸ್ವಾಮೀಜಿಗಳ ಸಭೆ) ಗೆ ಹೋಗಿ ಪ್ರತ್ಯೇಕ ಧರ್ಮದ ಬಗ್ಗೆ ಹೇಳಿಕೆ ನೀಡದೇ ಜಾಣ ನಡೆ ಅನುಸರಿಸಿದ್ದಾರೆ. ಆದರೂ ಸಹ ಆ ಸಭೆಗೆ ಹೋಗಿದ್ದರಿಂದ ಸರ್ಕಾರಕ್ಕೆ ಸ್ವಲ್ಫ ಗೊಂದಲ ಉಂಟಾಗಿದೆ.

ಸರ್ಕಾರದ ಸಚಿವರು ಕೆಲವರು ಆ ಕಡೆ, ಕೆಲವರು ಈ ಕಡೆ ಮಾತನಾಡುವುದು ಕೇಳಿ ನವಂಬರನಲ್ಲಿ ಸಿದ್ದರಾಮಯ್ಯನವರಿಗೆ ಕುತ್ತು ಬರುತ್ತದೆಯೇನೋ ಎಂದು ನಮಗೆ ಎನಿಸುತ್ತಿದೆ.ಮೊನ್ನೆಯೇ ಸಿದ್ದರಾಮಯ್ಯನವರಿಗೆ ಆ ಸಭೆಗೆ ಹೋದರೆ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು ಅಂತ ಹೇಳಿದ್ದೆವು. ಸಿದ್ದರಾಮಯ್ಯನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.ವೀರಶೈವ ಲಿಂಗಾಯತರೆಲ್ಲಾ ಒಂದು ಎನ್ನುವುದನ್ನು ಹೇಳುತ್ತಾ ಬಂದಿದ್ದೇವೆ. ಸಿದ್ದರಾಮಯ್ಯನವರು ಇಬ್ಭಾಗ ಮಾಡುವುದು ಬಿಟ್ಟು ಒಂದು ಮಾಡಿದರೆ ಒಳ್ಳೆಯದಾಗುತ್ತದೆ ಎಂದಿದ್ದಾರೆ.

ನಾವೆಲ್ಲಾ ಹಿಂದೂ ಧರ್ಮದ ಆಚರಣೆಯಲ್ಲಿರುವುದರಿಂದ ಒಟ್ಟುಗೂಡಿ ಹೋಗಬೇಕು.ಎರಡೂ ಕಡೆ ಇರುವ ಸಚಿವರೆಲ್ಲಾ ಒಂದೇ ಪಕ್ಷದವರೇ ಇರುವುದರಿಂದ ನೀವೆಲ್ಲಾ ಒಂದು ಕಡೆ ಕೂತು ನಿರ್ಧಾರ ಮಾಡಿದರೆ ಸಮಾಜಕ್ಕೆ ಒಂದು ಹೆಸರು ಬರಲಿದೆ. ನಿಮ್ಮ ಸಚಿವ ಸ್ಥಾನ, ಸಿಎಂ ಸ್ಥಾನ ಉಳಿಬೇಕಾದರೆ ಒಂದುಗೂಡಿಸುವ ಕೆಲಸ ಮಾಡಬೇಕು.ಮುಖ್ಯವಾಗಿ ಸಿದ್ದರಾಮಯ್ಯನವರಿಗೆ ಹೇಳುವುದಾದರೆ ಧರ್ಮ ಒಡೆಯುವುದು ಬಿಟ್ಟು ಎಲ್ಲರನ್ನು ಒಂದುಗೂಡಿಸುವ ಕೆಲಸ ಮಾಡಿದರೆ ನಿಮ್ಮ ಸ್ಥಾನ ಶಾಶ್ವತವಾಗಿ ಉಳಿಯುತ್ತದೆ ಎಂದಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು