LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಓಟಿಟಿಗೆ ಬಂತು ವಿವಾದಾತ್ಮಕ `ದಿ ಕೇರಳ ಸ್ಟೋರಿ 2'

ಕನ್ನಡ ಚಿತ್ರರಂಗವನ್ನು ಹೊರತು ಪಡಿಸಿದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ಚಿತ್ರರಂಗದವರಿಗೆ ಸದ್ಯ ಸಿಕ್ವೆಲ್ ಜ್ವರ ಹಿಡಿದಿದೆ. ನಿಜಾ.. ನಮ್ಮಲ್ಲಿ ಕೂಡ ಈ ಟ್ರೆಂಡ್ ಇದೆ. ಆದರೆ.. ಅನ್ಯ ಭಾಷೆಯವರಿಗೆ ಹೋಲಿಸಿದರೆ ಪ್ರಯತ್ನಗಳು ನಡೆಯುತ್ತಿರುವುದು ಕಡಿಮೆ.ಬೇರೆ ಭಾಷೆಗಳಲ್ಲಿ ಹಳೆಯ ಗೆಲುವನ್ನೇ ಟ್ರಂಪ್ ಕಾರ್ಡ್ ಆಗಿ ಉಪಯೋಗಿಸಿಕೊಂಡು ಹಲವರು ಇಲ್ಲಿ ದುಡ್ಡು ಬಾಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಯಾರನ್ನೇ ಕೇಳಿ ಎಲ್ಲರಲ್ಲಿಯೂ ತಮ್ಮದೇ ಆದ ಯೂನಿವರ್ಸ್ ರೆಡಿಯಾಗಿರುತ್ತೆ. ಆ ಪೈಕಿ ''ದಿ ಕೇರಳ ಸ್ಟೋರಿ'' ಕೂಡ ಒಂದು.ಹೌದು, 2023ರಲ್ಲಿ ಬಂದ ''ದಿ ಕೇರಳ ಸ್ಟೋರಿ'' ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಬಾಕ್ಸಾಫೀಸ್‌ನ ಅಂಕಿ ಅಂಶ ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 300 ಕೋಟಿ + ಹಣ ದೋಚಿತ್ತು. ಚಿತ್ರಕ್ಕೆ ಸಿಕ್ಕ ಈ ಅಭೂತಪೂರ್ವ ಪ್ರತಿಕ್ರಿಯೆ `ದಿ ಕೇರಳ ಸ್ಟೋರಿ' ಫ್ರಾಂಚೈಸಿಯ ಉಗಮಕ್ಕೂ ಕಾರಣವಾಯ್ತು. ಆ ನಂತರ ಬಂದಿದ್ದೇ '' ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್''. ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 27ರಂದು ತೆರೆಗೆ ಬಂದ '' ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್'' ಚಿತ್ರದ ಮೇಲೆಯೂ ಕೂಡ ವಿವಾದದ ನೆರಳು ಬಿದ್ದಿತ್ತು. ಪ್ರೊಪಗಂಡಾ ಸಿನಿಮಾ ಎಂದು ಒಂದು ವರ್ಗ ಕರೆಯಿತು. ಆದರೆ, ಬಾಕ್ಸಾಫೀಸ್‌ನಲ್ಲಿ ಇದರ ಪರಿಣಾಮವೇನು ಆಗಲಿಲ್ಲ. ಬದಲಿಗೆ ಚಿತ್ರಕ್ಕೆ ಇನ್ನೂ ಹೆಚ್ಚಿನ ಪ್ರಚಾರ ಸಿಕ್ಕಿತ್ತು. ಇದರ ಪರಿಣಾಮ ರೂ.25-30 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ '' ದಿ ಕೇರಳ ಸ್ಟೋರಿ 2- ಗೋಸ್ ಬಿಯಾಂಡ್'' 60 ಕೋಟಿಯನ್ನು ಗಳಿಸಿತು. ಸದ್ಯ ಈ ಚಿತ್ರ ಬಿಡುಗಡೆಯಾಗಿ 57 ದಿನಗಳಾಗಿವೆ. ಓಟಿಟಿಯಲ್ಲಿ ಈ ಚಿತ್ರದ ಪ್ರಸಾರಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.ಹೌದು, ಸಾಮಾನ್ಯವಾಗಿ ಬದಲಾದ ಈ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರಕ್ಕೆ ಬಂದು ನಾಲ್ಕು ವಾರ ಕಳೆದಿರುವುದಿಲ್ಲ. ಆದರೆ ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದು ಬಿಡುತ್ತೆ. '' ದಿ ಕೇರಳ ಸ್ಟೋರಿ 2 -ಗೋಸ್ ಬಿಯಾಂಡ್'' ಕೂಡ ಬಂದಿದೆ. ಆದರೆ ನಾಲ್ಕು ವಾರಕ್ಕೆ ಅಲ್ಲ ಬದಲಿಗೆ 62 ದಿನಗಳ ನಂತರ ಅನ್ನೋದು ವಿಶೇಷ. ಚಿತ್ರ ಇದೇ ಮೇ 1ರಿಂದ ಓಟಿಟಿಯಲ್ಲಿ ಪ್ರಸಾರವಾಗಲಿದೆ.ಎಲ್ಲಿ ನೋಡಬಹುದು ?
ಬಾಕ್ಸಾಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ''ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್'' ಇದೇ ಮೇ 1ರಿಂದ ಜೀ5ನಲ್ಲಿ ಪ್ರಸಾರವಾಗಲಿದೆ. ಚಿತ್ರದ ಅವಧಿ 2 ಗಂಟೆ 11 ನಿಮಿಷಗಳಿದ್ದು ಹಿಂದಿ ಭಾಷೆಯಲ್ಲಿ ನೋಡುವ ಅವಕಾಶ ಇದೆ. ಬೇರೆ ಭಾಷೆಗಳಿಗೆ ಡಬ್ ಮಾಡಲಾಗಿದೆಯಾ.. ಎನ್ನುವುದಕ್ಕೆ ಉತ್ತರ ಸದ್ಯಕ್ಕಿಲ್ಲ. ಒಟ್ನಲ್ಲಿ ಸದ್ಯ ''ದಿ ಕೇರಳ ಸ್ಟೋರಿ 2-ಗೋಸ್ ಬಿಯಾಂಡ್'' ಓಟಿಟಿ ಅಂಗಳಕ್ಕೆ ಬರುತ್ತಿದ್ದು, ಚಿತ್ರಮಂದಿರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದ ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಈಗ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಲಿದೆ. ಓಟಿಟಿಯಲ್ಲಿ ಈ ಚಿತ್ರವನ್ನು ನೋಡಿದವರ ಪ್ರತಿಕ್ರಿಯೆ ಹೇಗಿರುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು