LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಇಪ್ಪತ್ತೈದು ವರ್ಷ ಪೂರೈಸಿದ ಸ್ಟೀಲ್ ಕೇಸ್ ಕಂಪನಿಯಿಂದ ಸಮಾವೇಶ

ಕೆ.ಆರ್.ಪುರ: ಕಚೇರಿ ಪೀಠೋಪಕರಣಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಸ್ಟೀಲ್‍ಕೇಸ್ ಕಂಪನಿಯು ಭಾರತದಾದ್ಯಂತ ಇರುವ ಕಚೇರಿಗಳಿಗೆ ಹೊಸ ರೂಪ ಕೊಡುತ್ತಾ, ಆ ಕ್ಷೇತ್ರದಲ್ಲಿ ನಾಯಕತ್ವ ಸಾಧಿಸುತ್ತಾ 25 ವರ್ಷಗಳನ್ನು ಪೂರೈಸಿದೆ. ಆರಂಭಿಕ ಹಂತದಲ್ಲಿ ಜಂಟಿ ಉದ್ಯವಾಗಿ ಕೆಲಸ ಶುರು ಮಾಡಿದ ಸ್ಟೀಲ್‍ಕೇಸ್ ನಿಧಾನಕ್ಕೆ ತನ್ನ ಅಸ್ತಿತ್ವವನ್ನು ಸ್ಥಿರವಾಗಿ ವಿಸ್ತರಿಸುತ್ತಾ ಬಂದಿದೆ.

ಸ್ಥಳೀಯ ಅಗತ್ಯಗಳನ್ನು ಪೂರೈಸುವ ಮತ್ತು ಸ್ಥಳೀಯ ಉತ್ಪಾದನೆಯಲ್ಲಿ ಗಣನೀಯವಾಗಿ ಹೂಡಿಕೆ ಮಾಡುವ ಮೂಲಕ ಸೂಕ್ತವಾದ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಂಪನಿಯು ಭಾರತದ ಕಚೇರಿಗಳಲ್ಲಿ ಸ್ಫೂರ್ತಿದಾಯಕ ಉದ್ಯೋಗಿ ಕೇಂದ್ರಿತ ವಾತಾವರಣ ನಿರ್ಮಿಸಲು ನೆರವಾಗಿದೆ ಮತ್ತು ಅದರಿಂದ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ತೊಡಗಿಕೊಳ್ಳುವಿಕೆ ಮತ್ತು ಉತ್ಪಾದಕತೆ ಹೆಚ್ಚಿಸಲು ನೆರವಾಗಿದೆ.

ಈ ಮಹತ್ವದ ಮೈಲಿಗಲ್ಲು ಸಾಧಿಸಿರುವ ನೆನಪಿಗೆ ಸ್ಟೀಲ್‍ಕೇಸ್ ಏಷ್ಯಾದಲ್ಲಿ ತನ್ನ ಮೊಟ್ಟ ಮೊದಲ ವರ್ಕ್ ಬೆಟರ್ ಕಾನ್ಫರೆನ್ಸ್ ಆಯೋಜಿಸಿದ್ದು, ಈ ಸಮಾವೇಶವು ಭಾರತದ ಬೆಂಗಳೂರಿನಲ್ಲಿ ನಡೆಯಿತು. ಈ ಅದ್ದೂರಿ ಸಮಾವೇಶದಲ್ಲಿ ಉದ್ಯಮದ ಉನ್ನತ ಹಂತದ ವೃತ್ತಿಪರರು ಭಾಗವಹಿಸಿ ಇತ್ತೀಚಿನ ಟ್ರೆಂಡ್ ಗಳು ಮತ್ತು ಕಚೇರಿ ವಿನ್ಯಾಸ ಮತ್ತು ಕಾರ್ಯಚಟುವಟಿಕೆಗಳಲ್ಲಿ ಬಳಸಬಹುದಾದ ನವೀನ ಪರಿಹಾರೋತ್ಪನ್ನಗಳ ಕುರಿತು ಸಂವಾದ ನಡೆಸಿದರು.

ಲಲಿತ್ ಅಹುಜಾ, ಎಎನ್‍ಎಸ್‍ಆರ್, ಸಿಇಓ, ಡಾ. ಅರವಿಂದ್ ಸುಬ್ರಮಣಿಯನ್, ರಿಲಯನ್ಸ್‍ನ ಮಾನವ ಸಂಪನ್ಮೂಲ ವಿಭಾಗದ ವಿಪಿ, ಸಲೀಂ ಭಟ್ರಿ, ಸಿಇಪಿಟಿ ವಿಶ್ವವಿದ್ಯಾಲಯದ ಡಿಸೈನ್ ಫ್ಯಾಕಲ್ಟಿ ಡೀನ್, ಸುನಿಲ್ ಸುರೇಶ್, ಸ್ಟಾನ್ಲಿ ಲೈಫ್‍ಸ್ಟೈಲ್‍ನ ಸಿಇಓ ಈ ತಜ್ಞರ ತಂಡವು ಅಭಿವೃದ್ಧಿ ಹೊಂದುತ್ತಿರುವ ಕೆಲಸದ ಸ್ಥಳಗಳು, ಸಹಯೋಗ ಮತ್ತು ಹೆಚ್ಚು ಉತ್ಪಾದಕತೆ ಸಾಧಿಸುವಲ್ಲಿ ವಿನ್ಯಾಸದ ಪಾತ್ರದ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು