LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಕೋಟಿ :ಅದ್ದೂರಿ ಕಾರ್ಯಕ್ರಮ

ಕೋಟಿ ಸಿನಿಮಾದ ಪ್ರೀರಿಲೀಸ್ ವಿಶೇಷ ಟೀವಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮವನ್ನು 'ಕೋಟಿ ಮನರಂಜನೆ' ಎಂದು ಕರೆಯಲಾಗಿದ್ದು, ಕಾರ್ಯಕ್ರಮದಲ್ಲಿ ಸಿನಿಮಾದ ತಾರಾಬಳಗವೇ ತುಂಬಿತ್ತು. ಕೋಟಿಯ ನಾಯಕ ಡಾಲಿ ಧನಂಜಯ ಸೇರಿದಂತೆ ನಾಯಕಿ ಮೋಕ್ಷಾ ಕುಶಾಲ್ ಮತ್ತು ಹಿರಿಯ ತಾರೆಗಳಾದ ತಾರಾ ಅನುರಾಧ, ರಂಗಾಯಣ ರಘು, ರಮೇಶ್ ಇಂದಿರಾ, ಸರ್ದಾರ್ ಸತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅದ್ಭುತ ಲೈಟಿಂಗ್ ಮತ್ತು ಕೋರಿಯಾಗ್ರಫಿಯ ಮೂಲಕ ಆದ ಕಿಚ್ಚನ ಎಂಟ್ರಿಯ ನೋಡಿ ಜನರ ಕೇಕೆ ಮತ್ತು ಶಿಳ್ಳೆಗಳ ಸದ್ದು ಮುಗಿಲ ಮುಟ್ಟಿತ್ತು. ಸುದೀಪ್ ಅವರು ಸುಮಾರು ಒಂದು ತಾಸಿಗೂ ಹೆಚ್ಚಿನ ಕಾಲ ವೇದಿಕೆಯ ಮೇಲಿದ್ದು ನೆರೆದಿದ್ದ ಜನರನ್ನು ಹಾಸ್ಯಭರಿತ ಮಾತುಗಳಿಂದ ರಂಜಿಸಿದರು. ನಿರೂಪಕ ಅಕುಲ್ ಬಾಲಾಜಿ ಮತ್ತು ಸುದೀಪ್ ಮಾತುಕತೆ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುವಂತಿತ್ತು. ಸುದೀಪ್ ಕೋಟಿ ಚಿತ್ರದ ಹೊಸ ಪೋಸ್ಟರನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಕೋರಿದರು.

ಕೋಟಿಯ ನಾಯಕಿ 'ಮೋಕ್ಷಾ' ಅವರ ಡಾನ್ಸ್ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಕೋಟಿಯ ಇತರ ನಟ ನಟಿಯರಿಂದ ವಿಶೇಷ ಡಾನ್ಸ್ ಕಾರ್ಯಕ್ರಮಗಳು ಮತ್ತು ಗಿಚ್ಚಿ ಗಿಲಿಗಿಲಿ ತಂಡದಿಂದ ಹೊಟ್ಟೆ ಹುಣ್ಣಾಗಿಸುವ ಹಾಸ್ಯ ಕಾರ್ಯಕ್ರಮ ನಡೆದವು. ಧನಂಜಯ ಅವರಿಗಾಗಿ ಮಕ್ಕಳು ಮಾಡಿದ ವಿಶೇಷ ಡಾನ್ಸ್ ಕಾರ್ಯಕ್ರಮ 'ಕೋಟಿ ಮನರಂಜನೆ'ಯ ಪ್ರಮುಖ ಆಕರ್ಷಣೆಗಳಲ್ಲೊಂದಾಗಿತ್ತು. ಧನಂಜಯ ಅವರು ಮಕ್ಕಳ ನೃತ್ಯವನ್ನು ಮೆಚ್ಚಿ ವೇದಿಕೆಯ ಮೇಲೆ ಬಂದು ಮಕ್ಕಳ ಜತೆ ಸೆಲ್ಫಿ ತೆಗೆದುಕೊಂಡರು.

ಈ ಚಿತ್ರದ ರಾಗ ಸಂಯೋಜಕರಾದ ವಾಸುಕಿ ವೈಭವ್ 'ಕೋಟಿ' ಸಿನಿಮಾದ ಹಾಡುಗಳನ್ನು ಹಾಡಿದರು. ಕೋಟಿಯ ಹಾಡುಗಳಿಗೆ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ ``ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ'' ಎಂದು ಹೇಳಿದರು.
ದಶಕಗಳ ಕಾಲ ಕಲರ್ಸ್ ಕನ್ನಡ ಚಾನೆಲನ್ನು ಮುನ್ನಡೆಸಿದ್ದ ಪರಮ್ ಅವರಿಗೆ ಚಾನೆಲ್ಲಿನ ಸಿಬ್ಬಂದಿ ವಿಶೇಷ ವಿಡಿಯೋ ಮೂಲಕ ಶುಭ ಕೋರಿದರು.

ವಿಡಿಯೋದಲ್ಲಿ ತಮ್ಮ ಹಳ್ಳಿಮನೆಯ ಚಿತ್ರ ನೋಡಿದ ಪರಮ್ ಭಾವುಕರಾದರು. ಕಲರ್ಸ್ ಕನ್ನಡ ಮೂಲಕ ಯಶಸ್ಸು ಪಡೆದ ಚಂದನ್ ಶೆಟ್ಟಿ, ನಿವೇದಿತಾ ಗೌಡ, ವಿಜಯ್ ಸೂರ್ಯ, ರಕ್ಷಿತ್, ಶೈನ್ ಶೆಟ್ಟಿ, ಮಯೂರಿ, ಅಂಕಿತಾ ಅಮರ್, ನೇಹಾ ಗೌಡ ಹಾಗೂ ಅಕುಲ್ ಬಾಲಾಜಿ ತಮ್ಮ ಮೆಂಟರ್ 'ಪರಮ್' ಅವರ ಹೊಸ ಪಯಣಕ್ಕೆ ಶುಭ ಹಾರೈಸಿದರು.

ಈಗಾಗಲೇ ಪೋಸ್ಟರ್, ಟೀಸರ್, ಹಾಡುಗಳ ಮೂಲಕ ಸದ್ದು ಮಾಡುತ್ತಿರುವ 'ಕೋಟಿ' ಕನ್ನಡ ಇಂಡಸ್ಟ್ರಿಯ ದ್ವಿತೀಯಾರ್ಧದ ಯಶಸ್ಸಿಗೆ ಮೊದಲ ಗೆಲುವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.'ಕೋಟಿ ಮನರಂಜನೆ' ಕಾರ್ಯಕ್ರಮವು ಇದೇ ಜೂನ್ 2ರಂದು ಸಂಜೆ 7.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜಿಯೋ ಸ್ಟುಡಿಯೋಸ್ ನಿರ್ಮಾಣದ 'ಕೋಟಿ' ಸಿನಿಮಾ ಜೂನ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು