LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಅನನ್ಯ ವ್ಯಕ್ತಿತ್ವದ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಕೊತ್ತೂರಪ್ಪ ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರದ ಪುರಪಿತೃ ಎಂದೇ ಕರೆಯಲ್ಪಡುವ ಲೋಕಸೇವಾನಿರತ ಡಿ.ಕೊಂಗಾಡಿಯಪ್ಪ ಒಂದು ಸಮಾಜದ ಶಕ್ತಿಯಾಗಿ ಊರಿನ ಐಕಾನ್ ಆಗಿ ಗುರುತಿಸಿ ಕೊಂಡು ಮತ್ತು ನಿಸ್ವಾರ್ಥ ಸೇವೆಯ ಮೂಲಕ ಜನ ಮಾನಸದಲ್ಲಿ ಉಳಿದಿರುವ ಧೀಮಂತ ವ್ಯಕ್ತಿತ್ವ.

ಇಂತಹ ಪರಿಪೂರ್ಣವಾದ ವ್ಯಕ್ತಿತ್ವ ಒಟ್ಟಾರೆ ದೊಡ್ಡಬಳ್ಳಾಪುರವನ್ನು ಪ್ರಭಾವಿಸಿರುವುದು ಮಾತ್ರವಲ್ಲದೆ ಸರ್.ಎಂ.ವಿಶ್ವೇಶ್ವರಯ್ಯ, ಕುವೆಂಪು, ಡಾ.ಎಚ್.ನರಸಿಂಹಯ್ಯರಂತಹ ಧೀಮಂತರ ಸಂವೇದನೆಗಳನ್ನು ಪ್ರಭಾವಿಸುವ ಮಟ್ಟಕ್ಕೆ ಬೆಳೆದದ್ದು ಇತಿಹಾಸ. ಒಬ್ಬ ಸಾಮಾನ್ಯ ಸ್ಕೂಲ್ ಮೇಷ್ಟ್ರಾಗಿದ್ದ ಕೊಂಗಾಡಿಯಪ್ಪ ಬೆಳೆದ ರೀತಿ, ಇತರರನ್ನು ಪ್ರಭಾವಿಸಿದ ಪ್ರಖರತೆ ಮತ್ತು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಒಂದು ಊರನ್ನು ಸಮರ್ಥವಾಗಿ ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸಿದ ರೀತಿ ಅನನ್ಯ-ಅದ್ವಿತೀಯ.

*ಯಾರು ಈ ಕೊಂಗಾಡಿಯಪ್ಪ*:

ಇವರು ಬರೀ ವ್ಯಕ್ತಿಯಲ್ಲ, ದೊಡ್ಡಶಕ್ತಿ. ಅಕ್ಷರ ಸಾರ್ವತ್ರೀಕರಣದಿಂದ ಮಾತ್ರ ಸಾಮಾಜಿಕ ಅಭಿವೃದ್ಧಿ ಸಾಧ್ಯ ಎಂದು ಅರಿತಿದ್ದವರು. ಗಾಂಧಿ ಹರಿಜನೋದ್ಧಾರ ಮಾತನ್ನಾಡುವ ಮುಂಚೆಯೇ ಅದನ್ನು ವಸ್ತುನಿಷ್ಠವಾಗಿ ಜಾರಿಗೆ ತಂದಿದ್ದ ವ್ಯಕ್ತಿ. ಮಹಿಳಾ ಸಬಲೀಕರಣವನ್ನು   ಪ್ರೋತ್ಸಾಹಿಸಿ, ಮಕ್ಕಳ ಶ್ರೇಯೋಭಿಲಾಷಿಯಾಗಿದ್ದವರು. ಸ್ವಚ್ಛತೆ, ಪರಿಸರ ಸಂರಕ್ಷಣೆಗೆ ಒತ್ತು ನೀಡಿ ಪರಿಸರ ಸ್ನೇಹಿ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು.

ಸಾಂಪ್ರದಾಯಿಕ ಡಂಭಾಚಾರಗಳಿಗೆ ತಿಲಾಂಜಲಿ ನೀಡಿ ಆಧುನೀಕತೆಯ ಸವಲತ್ತುಗಳನ್ನು ಊರಿಗೆ ತರಬೇಕು ಎಂಬ ಉತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ. ತಮಗೆ ಬರುತ್ತಿದ್ದ ಸಂಬಳವನ್ನು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೇ ಕೊಟ್ಟುಬಿಡುತ್ತಿದ್ದ ಮಾದರಿ ಬಡಮೇಷ್ಟ್ರು. ಅಷ್ಟೇ ಅಲ್ಲ, ತಮ್ಮ ನಿಸ್ವಾರ್ಥ ಸೇವೆಗೆ ಪ್ರತಿಫಲ ಎಂಬಂತೆ ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರಿಂದ *ಲೋಕಸೇವಾನಿರತ’ ಬಿರುದು ಪಡೆದವರು*ವಾರಾನ್ನದ ಮೇಷ್ಟ್ರು, ಕಾಕಣ್ಣನಾಗಿ ಅಂದಿನ ವಿದ್ಯಾರ್ಥಿಗಳಿಗೆ ಸದಾ ಕಾಲ ಪ್ರೇರಣೆ-ಒತ್ತಾಸೆ. 100 ವರ್ಷಗಳ ಹಿಂದೆಯೇ ಬಾಲಕಿಯರ ಶಿಕ್ಷಣಕ್ಕೆ ಒತ್ತು ನೀಡಿದ ಶಿಕ್ಷಣ ತಜ್ಞ. ಹೀಗೆ ದಿ.ಕೊಂಗಾಡಿಯಪ್ಪನವರ ಕೊಡುಗೆಯ ಅನನ್ಯತೆ ಬೆಳೆಯುತ್ತಾ ಹೋಗುತ್ತದೆ.

ಜೀವನ ಸಾಧನೆಯ ಹಿನ್ನೋಟ:

ಕೊಂಗಾಡಿಯಪ್ಪರವರು ಹುಟ್ಟಿದ್ದು 1861 ಫೆ.22ರಂದು. ತಂದೆ ಕೊಂಗಾಡಿ ಶಿವಪ್ಪ, ತಾಯಿ ನರಸಮ್ಮ. 15ನೇ ವರ್ಷಕ್ಕೆ ಆಂಗ್ಲೋ ವರ್ನಾಕುಲರ್ ಶಾಲೆಯಲ್ಲಿ ಉಪಾಧ್ಯಾಯರಾಗಿ ಕಾರ್ಯ ಆರಂಭಿಸಿದ ಕೀರ್ತಿ. 1889ರಲ್ಲಿ ಶಾಲಾ ಮುಖ್ಯಶಿಕ್ಷಕರಾಗಿ ಬಡ್ತಿ, 1904ರಲ್ಲಿ ದಿ ದೊಡ್ಡಬಳ್ಳಾಪುರ ಇಂಡಸ್ಟ್ರೀಯಲ್ ಸ್ಕೂಲ್ ಸ್ಥಾಪನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 1916ರಲ್ಲಿ ಎಕಾನಾಮಿಸ್ಟ್ ಆಕ್ಟಿವಿಸ್ಟ್ ಪದಕ ಪ್ರಾಪ್ತಿ. 1917ರಲ್ಲಿ 40 ವರ್ಷದ ಸೇವೆ ನಂತರ ವಿದ್ಯಾ ಇಲಾಖೆಯಿಂದ ನಿವೃತ್ತರಾದರು.

ನಂತರ ಅವರು ಪುರಸಭೆಯ ಅಧ್ಯಕ್ಷರಾಗಿ, ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಂತರ ಬೆಂಚ್ ಕೋರ್ಟ್ ಗೆ ಅಧಿಕಾರೇತರ ಅಧ್ಯಕ್ಷರಾಗಿ ನೇಮಕ. 1931ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಂದ ಲೋಕಸೇವಾನಿರತ ಬಿರುದು ಪಡೆದರು. ಮಹಿಳಾ ಸಮಾಜ ಮತ್ತು ವೀವರ್ಸ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ, ದೇವಾಂಗ ಬ್ಯಾಂಕ್ ಸ್ಥಾಪನೆ, ಮುನಿಸಿಪಲ್ ಹೈಸ್ಕೂಲ್ ಕಟ್ಟಡದ ಶಂಕುಸ್ಥಾಪನೆ ಹೀಗೆ ಹತ್ತು ಹಲವು ಅವರ ಕೊಡುಗೆಗಳು ಮುಂದುವರೆಯುತ್ತಾ ಹೋಗುತ್ತವೆ.

ದೊಡ್ಡಬಳ್ಳಾಪುರದ ಐಕಾನ್ :

ದೊಡ್ಡಬಳ್ಳಾಪುರಕ್ಕೆ ರೈಲು ವ್ಯವಸ್ಥೆಯಾಗಲು ಕೊಂಗಾಡಿಯಪ್ಪ ಮುಖ್ಯ ಕಾರಣ. ಜೊತೆಗೆ ರಾಜ್ಯದಲ್ಲೇ ಪ್ರಪ್ರಥಮವಾಗಿ ವಿದ್ಯುತ್ ವ್ಯವಸ್ಥೆ ಪಡೆದ ದೊಡ್ಡಬಳ್ಳಾಪುರ 2ನೇ ತಾಲೂಕು ಎಂಬ ಹೆಗ್ಗಳಿಕೆಗೆ ಕಾರಣವಾಗಲು ಕೊಂಗಾಡಿಯಪ್ಪನವರೇ ನೇರ ಕಾರಣ. 1932ರಲ್ಲೇ ಅವರು ದೊಡ್ಡಬಳ್ಳಾಪುರಕ್ಕೆ ವಿದ್ಯುಚ್ಚಕ್ತಿ ಬರುವಂತೆ ಮೈಸೂರು ಮಹಾರಾಜರನ್ನು ಓಲೈಸಿ, ಇಲ್ಲಿ ವಿದ್ಯುತ್ ಮಗ್ಗಗಳು ನೆಲೆಯೂರಲು, ನೇಕಾರಿಕೆಯ ಆಧುನೀಕರಣಕ್ಕೆ ಕಾರಣರಾದವರು. ಮನೆಯಲ್ಲೇ ನೂರಾರು ವಿದ್ಯಾರ್ಥಿಗಳಿಗೆ ವಾರಾನ್ನ ಮಾಡಿಕೊಂಡು, ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು.

ಹೆಸರು ಚಿರಸ್ಥಾಯಿ:

ದೊಡ್ಡಬಳ್ಳಾಪುರದಲ್ಲಿ ಕೊಂಗಾಡಿಯಪ್ಪನವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ. ಅವರ ಹೆಸರಿನ ವಿದ್ಯಾ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ನಗರಸಭೆ ಬಸ್ ನಿಲ್ದಾಣಕ್ಕೆ ಕೊಂಗಾಡಿಯಪ್ಪ ಅವರ ಹೆಸರಿಟ್ಟಿದೆ. ಊರಿನ ಮುಖ್ಯರಸ್ತೆಯೂ ಅವರ ಹೆಸರಿನಲ್ಲೇ ಇದೆ. ಮಾರುಕಟ್ಟೆ ಶಾಲೆಯ ಮುಂದೆ ಅವರ ಪುತ್ಥಳಿ ಇದೆ. ಇತ್ತೀಚೆಗೆ ಅವರ ಸಮಾಧಿ ಸ್ಥಳವನ್ನು ಪುಣ್ಯಸ್ಥಳವನ್ನಾಗಿ ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಸಾಗಿವೆ. ನಗರಸಭೆಯ ನೇತೃತ್ವದಲ್ಲಿ ಜನ್ಮದಿನಾಚರಣೆ ಯನ್ನು ಈ ವರ್ಷದಿಂದ *ದೊಡ್ಡಬಳ್ಳಾಪುರದ ಹಬ್ಬ* ವಾಗಿ ಆಚರಿಸಲಾಗುತ್ತಿದೆ.ಇಂತಹ ಅನನ್ಯ ವ್ಯಕ್ತಿತ್ವಕ್ಕೆ ಅನಂತ ನಮನ ಸಲ್ಲಿಸಬೇಕಾದ್ದು ನಮ್ಮ ಕರ್ತವ್ಯ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು