LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ತಂದೆ ಜೊತೆ ಆಟೋ ಓಡಿಸು ಎಂದು ಜನ ಜರೆದಾಗ ಧೈರ್ಯ ತುಂಬಿದ ಧೋನಿ

ಅವರು ಟೀಕೆಗಳಿಗೆ ಬೇಸತ್ತು ಬೇಸರದಿಂದ ಕುಳಿತಿದ್ದಾಗ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಿಳಿಸಿದ್ದ ಮಾತುಗಳು. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಈ ಮಾತನ್ನು ನೆನಪಿಸಿಕೊಂಡರು. ವಿAಡೀಸ್ ವಿರುದ್ಧ ಪ್ರಥಮ ಟೆಸ್ಟ್ ಗೆಲುವಿನಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಕ್ರಿಕೆಟಿಗರ ಬಗ್ಗೆ ಬರುವ ಹೊಗಳುವಿಕೆ ಮತ್ತು ತೆಗಳುವಿಕೆಯ ವಿಚಾರವಾಗಿ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, "ನೀವು ಚೆನ್ನಾಗಿ ಆಡಿದಾಗ, ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತು ನಿಮ್ಮೊಂದಿಗೆ ಇರುತ್ತದೆ. 'ಮೊಹಮ್ಮದ್ ಸಿರಾಜ್‌ನಂತಹ ಬೌಲರ್ ಇಲ್ಲ' ಎಂದೇ ಹೇಳುತ್ತಾರೆ. ಅದೇ ಮುಂದಿನ ಪAದ್ಯದಲ್ಲಿ ನೀವು ಚೆನ್ನಾಗಿ ಆಡದಿದ್ದರೆ, ಅವರು 'ಅಯ್ಯೋ, ಈತ ಎಂತಹ ಬೌಲರ್. ಹೋಗಿ ನಿಮ್ಮ ಅಪ್ಪನ ಜೊತೆ ಆಟೋ
ಓಡಿಸಿ' ಎಂದು ಹೇಳುತ್ತಾರೆ. ಇದರಲ್ಲಿ ಏನು ಅರ್ಥವಿದೆ ನೀವು ಒಂದು ಪಂದ್ಯದಲ್ಲಿ ಹೀರೋ, ಇನ್ನೊಂದರಲ್ಲಿ ಜೀರೋ. ಜನರು ಅಷ್ಟು ಬೇಗ ಬದಲಾಗುತ್ತಾರೆಯೇ?" ಎಂದು ಸಿರಾಜ್ ಪ್ರಶ್ನಿಸಿದರು.

``ಮೊದಲು ಬಹಳ ಚಿಂತಿಸುತ್ತಿದ್ದೆ. ನಾನು ಹೊರಗಿನ ಅಭಿಪ್ರಾಯ ಮತ್ತು ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ನಿರ್ಧರಿಸಿದೆ. ನನ್ನ ತಂಡದ ಸದಸ್ಯರು ಮತ್ತು
ಕುಟುಂಬದವರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದಷ್ಟೇ ನನಗೆ ಮುಖ್ಯ. ನನಗೆ ಇತರರು ಏನು ಯೋಚಿಸುತ್ತಾರೆ ಎಂಬುದೆಲ್ಲಾ ನಗಣ್ಯ" ಎಂದು
ಸಿರಾಜ್ ಸ್ಪಷ್ಟಪಡಿಸಿದರು. ಇದೇ ವೇಳೆ ಅವರು ಎಂಎಸ್ ಧೋನಿ ಅವರ ಸಲಹೆಯನ್ನು ನೆನಪಿಸಿಕೊಂಡರು. "ನಾನು ಭಾರತ ತಂಡಕ್ಕೆ ಸೇರಿದಾಗ, ಎಂಎಸ್
ಧೋನಿ ಅವರು ನನಗೆ ಹೀಗೆ ಹೇಳಿದ್ದರು: 'ಯಾರ ಮಾತನ್ನೂ ಕೇಳಬೇಡ. ನೀನು ಚೆನ್ನಾಗಿ ಆಡಿದಾಗ, ಇಡೀ ಜಗತ್ತು ನಿನ್ನ ಜೊತೆ ಇರುತ್ತದೆ. ನೀನು ಕೆಟ್ಟದಾಗಿ ಆಡಿದಾಗ, ಇದೇ ಜಗತ್ತು ನಿನ್ನನ್ನು ನಿಂದಿಸುತ್ತದೆ.'" ಎAದು ತಿಳಿಸಿದರು.

ಸಿರಾಜ್ ಅವರು ಬಡ ಕುಟುಂಬದಿAದ ಬAದವರ. ಆಟೋ ಚಾಲಕರಾಗಿ ಜೀವನ ನಡೆಸುತ್ತಿದ್ದ ಅವರ ತಂದೆ ೨೦೨೦-೨೧ರ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ನಿಧನರಾದರ. ಇದು ಸಿರಾಜ್‌ಗೆ ಬಹಳ ನೋವು ತಂದಿತ್ತು. ಆದರೆ ಅವರು ಅವರು ಧೈರ್ಯದಿಂದ ಆಡಿದರು. ಅದೇ ಸರಣಿಯಲ್ಲಿ ಟೆಸ್ಟ್ ಪದಾರ್ಪಣೆಯನ್ನೂ ಮಾಡಿದರು. ಆ ಸಮಯದಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ದುರ್ಬಲಗೊಂಡಿತ್ತು. ಮೊಹಮ್ಮದ್ ಸಿರಾಜ್ ಆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು