LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ರೋಟರಿ ಸಂಸ್ಥೆಯಿಂದ ಶಾಲೆಗಳಿಗೆ ಉಚಿತ ಏಪ್ರನ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

ನೆಲಮಂಗಲ: ಶಾಲಾ ವಿದ್ಯಾರ್ಥಿಗಳ ಮತ್ತು ಬಿಸಿಯೂಟ ತಯಾರಿಕಾ ನಿರ್ವಹಣೆ ಮಾಡುವವರಿಗೆ ಏಪ್ರನ್‍ಗಳನ್ನು ಹಾಗೂ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯು ವಿತರಿಸಿರುವುದು ತುಂಬಾ ಸಂತಸದ ವಿಚಾರ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಚ್. ತಿಮ್ಮಯ್ಯ ಅವರು ಹೇಳಿದರು.

ನಗರದ ಕ್ಷೇತ್ರ ಕಾರ್ಯ ನಿರ್ವಹಣಾಧಿಕಾರಿ ಗಳವರ ಕಚೇರಿಯ ಆವರಣದಲ್ಲಿ ನೆಲಮಂಗಲ ರೋಟರಿ ಸಂಸ್ಥೆ ಮತ್ತು ರಾಜಾಜಿನಗರ ಮಾಲಾ ಮತ್ತು ನೆಲಮಂಗಲದ ಔಷಧಿ ವ್ಯಾಪಾರಿಗಳ ಸಂಘ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ್ದ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮತ್ತು ಬಿಸಿಯೂಟ ತಯಾರಿಸುವ 500 ಮಂದಿಗೆ ರೂ. 210000 ಲಕ್ಷದ ವೆಚ್ಚಗಳಲ್ಲಿ ಉಚಿತವಾಗಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಂತರ ಮಾತನಾಡಿದ ರೋಟರಿ ಸಂಸ್ಥೆಯ ಅಧ್ಯಕ್ಷ ಎಂ.ಟಿ ನವೀನ್ ಕುಮಾರ್ ಅವರು ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳು ತಮ್ಮ ಪಠ್ಯೇತರ ಚಟುವಟಿಕೆಯ ಸಂದರ್ಭ ಆಕಸ್ಮಿಕವಾಗಿ ಗಾಯಗಳಾಗುವುದನ್ನು ಅರಿತು ಅವರಿಗೆ ಪ್ರಥಮ ಚಿಕಿತ್ಸೆಗಾಗಿ ಅಗತ್ಯವಿರುವ ವಸ್ತುಗಳ ಪೆಟ್ಟಿಗೆಯನ್ನು ಹಾಗೂ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಅಕ್ಷರ ದಾಸೋಹ ಅಡಿಯಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರ ಸುರಕ್ಷತೆ ಮತ್ತು ಸ್ವಚ್ಛತೆಗಾಗಿ ಏಪ್ರಾನ್ ಗಳನ್ನು ಉಚಿತವಾಗಿ ಒದಗಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲ ಸೂರು ರೋಟರಿಯ ಮೋಹನ್ ಕುಮಾರ್, ಸಹಕಾರ ನಗರದ ರೋಟರಿ ಸಂಸ್ಥೆಯ ಜಾನಕಿ ರಾಮ್, ಜಾಲಹಳ್ಳಿ ರೋಟರಿ ಸಂಸ್ಥೆಯ ವಿದ್ಯಾರಣ್ಯಪುರ ಮಧುಸೂಧನ್, ಅಬ್ಬಿಗೆರೆ ದುರ್ಗಾ ಚಾಲನ್ ರೋಟರಿ ಸಂಸ್ಥೆ ಪ್ಲಾಟಿನಂ ಸಿಟಿ ರೂಪ ವೆಂಕಟ್ ,ರೋಟರಿ ಓರಾಯನ್ ಗೇಟ್ವೇ ರಘುನಂದನ್, ರೋಟರಿ ಲೇಕ್ ವರ್ಲ್ಡ್ ದುಬೈದ ರೋಟರಿ ಸೋಂಪುರ ಚೆನ್ನ ತಿಮ್ಮಯ್ಯ, ರೋಟರಿ ಉದ್ಯೋಗ ಪಂಚನಾಥನ್, ರೋಟರಿ ಗೋಕುಲ್ ವಿದ್ಯಾ ಮನೋಜ್ ಕುಮಾರ್, ರೋಟರಿ ರಾಜಾಜಿನಗರ ಮಾಲಾ ಮತ್ತು ನೆಲಮಂಗಲದ ಔಷಧಿ ವ್ಯಾಪಾರಗಳ ಸಂಘದ ಅಧ್ಯಕ್ಷ ವಾದಿರಾಜು ಸೇರಿದಂತೆ ಹಲವಾರು ಪ್ರಮುಖರು ಉಪಸಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು