LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts

ಡಾ. ಅಂಬೇಡ್ಕರ್ ಜೀವನ ಇಡೀ ವಿಶ್ವಕ್ಕೆ ಮಾದರಿ: ಎಸ್ ರವಿ

ಕನಕಪುರ: ವಿಶ್ವದ ಮಹಾನಾಯಕ, ಸಂವಿಧಾನ ಶಿಲ್ಪಿ, ವಿಶ್ವರತ್ನ, ಜ್ಞಾನ ಸೂರ್ಯ ಡಾ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತಿಯನ್ನು ನಗರದ ಅಂಬೇಡ್ಕರ್ ಭವನದಲ್ಲಿ, ತಾಲ್ಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲಾಯಿತು. ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಬಾಬಾ ಸಾಹೇಬ್ ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಎಂ ಜಿ ರಸ್ತೆ ಮೂಲಕ ಹಲವು ಜಾನಪದ ಕಲಾತಂಡಗಳ ಅದ್ಭುತ ಪ್ರದರ್ಶನದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಕಲಶವನ್ನು ಹೊತ್ತು ಕೊಂಡು ಮೆರವಣಿಗೆ ಹೊರಟು ಅಂಬೇಡ್ಕರ್ ಭವನ ತಲುಪಿದರು.ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಸ್ ರವಿ ಸಮಾಜದಲ್ಲಿ ಸಮಸಮಾಜ ನಿರ್ಮಾಣ ಮಾಡಲು ಶ್ರಮಿಸಿದ ಸಮಾಜ ಸುಧಾರಕ ಮಹಾನ್ ನಾಯಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ವನ್ನು ನೀಡಿದವರು,ಆದರೆ ಸನಾತನ ಮನುವಾದಿಗಳು , ವಿಶ್ವದಲ್ಲೇ ಶ್ರೇಷ್ಠವಾದ ಧರ್ಮ ಎಂದರೆ ಅದು ಸನಾತನ ಧರ್ಮ ಎಂದು ಹೇಳುತ್ತಾರೆ,ಕೇವಲ ದೇವರು ಮಾತ್ರವಲ್ಲ ಪ್ರಕೃತಿಯನ್ನು ಸಹ ದೇವರಾಗಿ ಕಂಡು ಪೂಜಿಸುವುದು ವಾಡಿಕೆಯಾಗಿದೆ,ಎಲ್ಲಾ ಧರ್ಮಗಳಿಗೂ ಸಂಸ್ಥಾಪಕರಿ ದ್ದಾರೆ,ನಮ್ಮ ಹಿಂದೂ ಧರ್ಮಕ್ಕೆ ಸಂಸ್ಥಾಪಕರಿಲ್ಲ, ಬದುಕುವ ರೀತಿ ಅಷ್ಟೇ ನಾಯಿ,ನರಿ,ಹಂದಿಗಳನ್ನು ದೇವರ ರೂಪದಲ್ಲಿ ನೋಡುವ ನಾವು,ಅಸ್ಪೃಶ್ಯರನ್ನು ಸಮಾನ ವಾಗಿ ನೋಡಲುಸಿದ್ಧರಿಲ್ಲ, ಸಂಕುಚಿತ ಮನೋಭಾವದ ವರಾದ ನಾವುಗಳು ನಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳುತ್ತೇವೆ ಇದು ಮನುವಾದಿಗಳ ಸಂಸ್ಕೃತಿಯಾಗಿದೆ ಎಂದರು ಸಮಾಜದಲ್ಲಿ ಶೋಷಣೆ ಗೊಳಗಾದವರನ್ನ ಸರಿ ಸಮಾನ ವಾಗಿ ನೋಡದ ಸಮಾಜ ನಮ್ಮದು, ಬಸವಣ್ಣನವರು ನಾವೆಲ್ಲರೂ ಒಂದೇ ಎಂದು ಸಮ ಸಮಾಜವನ್ನು ನಿರ್ಮಾಣ ಮಾಡಲು ಹೊರಟಾಗ ಸನಾತನ ಧರ್ಮ ದವರು ಅವರನ್ನು ಓಡಿಸಿಕೊಂಡು ಹೋಗಿ ಕೊಲೆ ಮಾಡಿ ದರು ಎಂಬುದು ಇತಿಹಾಸ ತಿಳಿಸುತ್ತದೆ,ದೇಶದಲ್ಲಿ ತುರ್ತು ಪರಿಸ್ಥಿತಿ ವೇಳೆ ದೇಶದ ಶೋಷಿತ ಸಮುದಾಯ ಗಳಿಗೆ ಬಗರ್ ಹುಕುಂ ಸಾಗುವಳಿ, ಉಳುವವನೇ ಭೂಮಿಯ ಒಡೆಯ ಎಂದು ಘೋಷಣೆ ಮಾಡಿ,ಶೋಷಿತ ಜನಾಂಗಕ್ಕೆ ಭೂಮಿ ಹಂಚಿಕೆ ಮಾಡಿ ಉಕ್ಕಿನ ಮಹಿಳೆ ಎನಿಸಿಕೊಂಡ ವರು ಶ್ರೀಮತಿ ಇಂದಿರಾಗಾಂಧಿಯವರು, ಅಂಬೇಡ್ಕರ್ ಅವರನ್ನು ಪೂಜಿಸುವ ಬದಲು ಅವರು ನಮ್ಮ ದೇಶಕ್ಕೆ ಸಮರ್ಪಣೆ ಮಾಡಿರುವ ಸಂವಿಧಾನವನ್ನು ಓದಿದರೆ ಅಷ್ಟೇ ಸಾಕು ಅವರಿಗೆ ನಾವು ಕೊಡುವ ಗೌರವವಾಗಿದ್ದು ಇಂತಹ ಮಹನೀಯರ ಸಮಾರಂಭಕ್ಕೆ ಹಾಜರಾಗದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಅಸಮಾಧಾನ ಗೊಂಡು ಹಾಜರಾಗದವರ ಹಾಜರಾತಿ ಪಡೆದು ಶಿಸ್ತು ಕ್ರಮಕ್ಕೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿ ತಾಲ್ಲೂಕಿನಲ್ಲಿರುವ ಹಲವಾರು ಸಂಘಟನೆಗಳು ನಾಡಿನ ಮಹಾನ್ ಪುರುಷರ ಕಾರ್ಯಕ್ರಮಗಳಲ್ಲಿ ಆಸಕ್ತಿ ವಹಿಸಬೇಕು,ಮಾಧ್ಯಮ ಮಿತ್ರರು ಸಂಘಟನೆಗಳ ಪರ ನಿಲ್ಲುವುದನ್ನು ಬಿಟ್ಟು ಅವರಿಗೂ ಬುದ್ಧಿ ಹೇಳುವ ಕೆಲಸ ಮಾಡುವಂತೆ ಸಲಹೆ ನೀಡಿದರು.ಮುಖ್ಯ ಭಾಷಣಕಾರ ಬೀರಯ್ಯ ಮಾತನಾಡಿ ಇಂದು ನಮ್ಮ ದೇಶದ ಕಾನೂನು,ಪ್ರಜಾಪ್ರಭುತ್ವ, ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರೆ ಅದು ಬಾಬಾ ಸಾಹೇಬ್ ರು ಕೊಟ್ಟ ಸಂವಿಧಾನದಿಂದ ಮಾತ್ರ ಸಾಧ್ಯನಾಗಿದೆ, ಬಾಬಾ ಸಾಹೇಬ್ ರು ತಮ್ಮ ಸಂವಿಧಾನದ ಮೂಲಕ ಕಾನೂನು ಕಟ್ಟಳೆಗಳ ಪರಿಪಾಲನೆಗೆ ಹಲವು ಕಾನೂನು ಪರಿಚ್ಛೇದ ಗಳನ್ನು ನೀಡಿದ ಫಲವಾಗಿ ಇಂದು ನಮ್ಮ ದೇಶದಲ್ಲಿ ಕಾನೂನು ಬಹಳ ಕಠಿಣವಾಗಿದ್ದು ಈ ತಳಹದಿಯ ಮೇಲೆ ನ್ಯಾಯಾಂಗ ವ್ಯವಸ್ಥೆ ನಡೆಯುತ್ತಿರುವುದು ಗಮನಾರ್ಹ ವಿಷಯ ಎಂದರು.
ದೇಶದಲ್ಲಿ ಕಾರ್ಮಿಕರಿಗೆ ಸಮಯ ನಿಗದಿ, ವಿಮಾ ಯೋಜನೆ, ಹೆಚ್ಚುವರಿ ಕೆಲಸದ ಅವಧಿಗೆ ದುಪ್ಪಟ್ಟು ಹಣ ಸೇರಿದಂತೆ ಮಹಿಳಾ ಸಮಾನತೆ, ಹೆರಿಗೆ ರಜೆ ಮೂಲಕ ಅವರಿಗೂ ಸಮಾನ ಹಕ್ಕುಗಳನ್ನು ನೀಡುವ ಮೂಲಕ ಸಮಾನತೆಯನ್ನು ಎತ್ತಿ ಹಿಡಿದು ಪ್ರಗತಿಪರ ಸುಧಾರಣೆ ಗಳನ್ನು ತರಲು ಪ್ರಯತ್ನಿಸಿದರೂ,ಸಂಸತ್ತಿನಲ್ಲಿ ಬಿಲ್ ಅಂಗೀಕಾರವಾಗದೆ ಅದನ್ನು ಕಡೆಗಣಿಸಲಾಯಿತು ಅಂಬೇಡ್ಕರ್ ಅವರು ಹಿಂದೂ ಸಮಾಜದಲ್ಲಿ ಮಹಿಳೆ ಯರಿಗೆ, ಪುರುಷರಿಗೆ ಸಮಾನವಾದ ಆಸ್ತಿ ಮತ್ತು ವಿವಾಹ ಹಕ್ಕುಗಳನ್ನು ನೀಡಲು ಹಿಂದೂ ಕೋಡ್ ಈ ಬಿಲ್ ರೂಪಿಸಿದ್ದರು ಮಹಿಳೆಯರಿಗೆ ಸಮಾನ ಹಕ್ಕು (ಆಸ್ತಿ, ವಿವಾಹ ವಿಚ್ಛೇದನ) ಕಲ್ಪಿಸುವ ಹಿಂದೂ ಕೋಡ್ ಬಿಲ್ ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲು ವಿಫಲವಾದ ಕಾರಣ, ಅಂದಿನ ಸರ್ಕಾರದಲ್ಲಿನ ತೀವ್ರ ವಿರೋಧದ ಹಿನ್ನೆಲೆಯಲ್ಲಿ 1951ರಲ್ಲಿ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನ ನೀಡಿದ್ದರು ಎಂದು ತಿಳಿಸಿದರು. ತಹಶೀಲ್ದಾರ್ ಸಂಜಯ್, ಭೂ ಮಾಪನ ಅಧಿಕಾರಿ ನಂದೀಶ್,ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್, ಕಸಾಪ ಅಧ್ಯಕ್ಷ ಶಿವಲಿಂಗಯ್ಯ, ಕೆ ಡಿಪಿ ಸದಸ್ಯೆ ಸುಕನ್ಯಾ ರಂಗಸ್ವಾಮಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಎನ್ ದಿಲೀಪ್, ಮುಖಂಡರಾದ ನೀಲಿ ರಮೇಶ್ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು