LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ನ್ಯಾಯಾಂಗ ವ್ಯವಸ್ಥೆಯಲ್ಲಿ ಹುಳುಕು; ನ್ಯಾಯದಾನ ಪ್ರಕ್ರಿಯೆಯಲ್ಲಿ ಒಡಕು...! ಡಾ|| ಎಂ.ಎಸ್. ಮಣಿ

ಪ್ರಶ್ನಿಸುವ, ವಿಮರ್ಶಿಸುವ ಅಭ್ಯಾಸವನ್ನು ಕೈಬಿಟ್ಟಿದ್ದಾರೆ. ದೇಶದ ಎಲ್ಲೆಡೆ ಮುಗ್ಧತೆ ಕಣ್ಣಿಗೆ ಕಾಣಿಸುವಂತಾಗಿದೆ.
ದೇಶ ಬದಲಾಗುತ್ತಿದೆ ಎಂಬ ವ್ಯಾಖ್ಯಾನದ ಹಿಂದೆ ಬಹುಶಃ ಇದೇ ಅಡಗಿರಬಹುದು. ಇತ್ತೀಚಿನ ದಿನಗಳಲ್ಲಿ ಯಾರ ಮೇಲಾದರೂ ಆರೋಪ ಕೇಳಿ ಬಂದಾಗ ಮತ್ತು ಜಾರಿದಳದಂತಹ ಏಜೆನ್ಸಿಗಳು ದಾಳಿ ನಡೆಸಿದಾಗ ಸಹಜವಾಗಿ ಒಬ್ಬರು ವಿರೋಧಿಸಿದರೆ, ನಾಲ್ಕು ಜನ ಬೆಂಬಲಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಯುದ್ಧ ಭರದಿಂದ ಸಾಗುತ್ತಿದೆ. ಕೆಲವು ಅತೃಪ್ತ ಸಾಮಾನ್ಯ ಜನರು ಆರೋಪಿಗಳನ್ನು ಶಪಿಸುವ ಮೂಲಕ ಮನಸ್ಸಿನ ಶಾಂತಿಯನ್ನು ಬಯಸುತ್ತಿದ್ದಾರೆ. ಇದನ್ನು ನಿಷ್ಪಕ್ಷಪಾತ ಮನೋಭಾವದಿಂದ ಕಾಣುವ ವರ್ಗ ಕೂಡ ರಾಜಕೀಯ ಅನುರಣನವನ್ನು ಕಂಡುಕೊಂಡು ಮೌನ ವಹಿಸುತ್ತಿದೆ. ಇದೇ ಆಪಾದಿತರು ಖುಲಾಸೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದಾಗ, ಇದೇ ಆಯ್ದ ನೈತಿಕವಾದಿ ವರ್ಗವು ಉದಾರವಾಗಿ ತಮ್ಮ ಉದ್ದೇಶ ಸಾಧನೆಗಾಗಿ ಮತ ನೀಡುತ್ತಿದೆ.
ರಾಜಕೀಯ ದ್ವೇಷದಿಂದ ಉಂಟಾಗುವ ಇಂತಹ ಘಟನೆಗಳನ್ನು ಅನಿವಾರ್ಯ ಎನ್ನುತ್ತೇವೆ. ಜೊತೆಗೆ ಬಹುಪಾಲು ಜನರು ಇದನ್ನು ತಪ್ಪು ಎಂದು ಭಾವಿಸುವುದಿಲ್ಲವೆಂಬ ತೀರ್ಮಾನಕ್ಕೂ ಬಂದು ಬಿಟ್ಟಿರುತ್ತೇವೆ.. ಹೀಗಾಗಿಯೇ ದೇಶದಲ್ಲಿಂದು ಅಮಾಯಕರ ಸಂಖ್ಯೆ ಅಗಾಧವಾಗಿ ಏರುತ್ತಿದೆ.
ಇದನ್ನೇಕೆ ಹೇಳುತ್ತಿರುವೆನೆಂದರೆ, ದೇಶದ ಉದ್ದಗಲ ಸಂಚಲನ ಮೂಡಿಸಿದ್ದ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣ ಕುರಿತು ಬಾಂಬೆ ಹೈಕೋರ್ಟ್ ತೀರ್ಪು ಹೊರಡಿಸಿತ್ತು. ಇದು ಹಲವರಲ್ಲಿ ಅಚ್ಚರಿ ಮತ್ತು ಆತಂಕದ ಗೆರೆಗಳನ್ನು ಮೂಡಿಸಿದೆ. ಹಾಗಂತ ಸೊಹ್ರಾಬುದ್ದೀನ್ ಪರೋಪಕಾರಿಯಲ್ಲ. ಬದಲಿಗೆ ಗುಜರಾತ್‌ನ ಕುಖ್ಯಾತ ದರೋಡೆಕೋರ.
ಇದನ್ನು ಪ್ರಸ್ತಾಪಿಸಲು ಕಾರಣ, ಇವನನ್ನು ನಕಲಿ ಎನ್‌ಕೌಂಟರ್ ಮಾಡಿದ ಪ್ರಕರಣದಲ್ಲಿ ಭಾಗಿಯಾದ 22 ಜನರನ್ನು ಖುಲಾಸೆಗೊಳಿಸಿದ್ದನ್ನು ಬಾಂಬೆ ಹೈಕೋರ್ಟ್ ಇದೀಗ ಎತ್ತಿಹಿಡಿದಿದೆ. ಸೊಹ್ರಾಬುದ್ದೀನ್ ಸಹೋದರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಪ್ರಕರಣ ಸಂಪೂರ್ಣವಾಗಿ ಅಂತ್ಯಗೊAಡಿದೆ. 2005ರಲ್ಲಿ ನಡೆದ ಎನ್ ಕೌಂಟರ್ ಪ್ರಕರಣದಲ್ಲಿ ಅಂದಿನ ಗೃಹ ಸಚಿವರು ಕೂಡ ಒರ್ವ ಶಂಕಿತ ಆರೋಪಿಯಾಗಿದ್ದರು. ವಿಚಿತ್ರ ಎಂದರೆ, ವಿಚಾರಣೆಗೂ ಮುನ್ನವೇ ಸೆಷನ್ಸ್ ನ್ಯಾಯಾಲಯ ಇವರನ್ನು ಖುಲಾಸೆಗೊಳಿಸಿತ್ತು. ಹಾಗಾದರೆ, ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ನಡೆದಿದ್ದೇನು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಇದಾಗಿದೆ.
ನಮ್ಮಲ್ಲಿ ಪತ್ತೇದಾರಿ ಪುಸ್ತಕ ಓದುವವರೆಲ್ಲರಿಗೂ ಒಂದು ಹತ್ಯೆ, ಒಂದು ಸಾವಿಗೆ ಅಂತ್ಯವಾಗುವುದಿಲ್ಲ ಎಂಬುದು ತಿಳಿದಿರುತ್ತದೆ. ಹೌದು, ಸಾಮಾನ್ಯವಾಗಿ ಒಂದು ಅಪರಾಧದ ಹಿಂದೆ ಸರಣಿ ಅಪರಾಧವೂ ಜರಗಿರುತ್ತದೆ. ಹೌದು ಇತ್ತೀಚಗಷ್ಟೇ ಎನ್ ಕೌಂಟರ್ ಪ್ರಕರಣದಲ್ಲಿ ಭಾಗಿಯಾದ 22 ಜನರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಹಿಂದೊಮ್ಮೆ ಸುಪ್ರೀಂಕೋರ್ಟ್ ಜಸ್ಟೀಸ್ ಬಿ. ಎಚ್. ಲೋಯಾ ಸಾವಿನ ಪ್ರಕರಣ ದೇಶದ ಉದ್ದಗಲ ಸಂಚಲನ ಮೂಡಿಸಿತ್ತು. ಆಗ ಜಸ್ಟೀಸ್ ಲೋಯಾ ಸಾವು ಅನುಮಾನಾಸ್ಪದವಾಗಿದೆ. ಹೀಗಾಗಿ, ಸ್ವತಂತ್ರ ತನಿಖೆ ಆಗಬೇಕೆಂದು ಹಲವರು ಪಟ್ಟು ಹಿಡಿದಿದ್ದರು. ಮಹಾರಾಷ್ಟ್ರ ಸರ್ಕಾರ ಸ್ವತಂತ್ರ ತನಿಖೆಯ ಅವಶ್ಯಕತೆ ಇಲ್ಲ. ಕಾರಣ ಜಸ್ಟೀಸ್ ಲೋಯಾ ಹೃದಯ ಸ್ತಂಭದಿಂದ ಮೃತಪಟ್ಟಿದ್ದಾರೆಂದು ಹೇಳಿತ್ತು. ಒಂಬತ್ತು ವರ್ಷಗಳ ಹಿಂದೆ ನಾಗಪುರದಲ್ಲಿ ಮರಣಿಸಿದ ಜಸ್ಟೀಸ್ ಲೋಯಾ ಅವರ ಸಾವು ಸಹಜವೋ, ಅಸಹಜವೋ ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ಇದರ ಬಗ್ಗೆ ಮುಂದೊಮ್ಮೆ ವಿವರವಾಗಿ ವಿಶ್ಲೇಷಿಸುವೆ.
ಸದ್ಯ ಸಾರ್ವಜನಿಕವಾಗಿ ಇಲ್ಲಿಯವರೆಗೂ ನಡೆದ ಘಟನಾವಳಿಯನ್ನು ಒಗ್ಗೂಡಿಸಿ ಕಂಡಾಗ ನಡೆದಿರುವ ಸಾವುಗಳು ಏಕಾಕಿಯಾಗಿ ನಡೆದಿದೆ ಎಂದು ಒಂದೇ ಗುಕ್ಕಿನಲ್ಲಿ ಹೇಳುವುದು ಕಷ್ಟಕರವಾಗುತ್ತಿದೆ. ಇದೇನೆ ಇರಲಿ, ಸರಣಿ ಸಾವುಗಳ ಹಿಂದೆ ಭಯಾನಕ ರಕ್ತ ಸಿಕ್ತ ಘಟನಾವಳಿಗಳು ರಿಂಗಣಿಸುತ್ತಿವೆ. ಬಹುಶಃ ಜಸ್ಟೀಸ್ ಲೋಯಾ ಬದುಕಿದ್ದರೆ ಸೊಹ್ರಾಬುದ್ದೀನ್ ಸೇರಿದಂತೆ ಅವರ ಕುಟುಂಬಸ್ಥರ ಸಾವುಗಳ ಹಿಂದಿನ ರಹಸ್ಯ ಹೊರ ಬರಬಹುದಿತ್ತು.
ಸಿಬಿಐಪ್ರಕಾರ, ಸೊಹ್ರಾಬುದ್ದೀನ್ ಶೇಖ್ ಅವರ ಪತ್ನಿ ಕೌಸರ್ ಬಿ ಮತ್ತು ಸಹಚರ ತುಳಸಿರಾಮ್ ಪ್ರಜಾಪತಿ ಅವರನ್ನು 2005 ನವೆಂಬರ್ 23ರಂದು ಹೈದರಾಬಾದ್‌ನಿಂದ ಮಹಾರಾಷ್ಟ್ರದ ಸಾಂಗ್ಲಿಗೆ ಹೋಗುವ ಮಾರ್ಗದಲ್ಲಿ ಐಷಾರಾಮಿ ಬಸ್‌ನಿಂದ ಅಪಹರಿಸಲಾಗಿತ್ತು. ಅಪಹರಿಸಿ ದಂಪತಿಯನ್ನು ಗುಜರಾತ್‌ನ ತೋಟದ ಮನೆಯೊಳಗೆ ಅಕ್ರಮವಾಗಿ ಬಂಧಿಸಿಟ್ಟರು. ಕೌತುಕ ಎಂದರೆ, ತುಳಸಿರಾಮ್ ಪ್ರಜಾಪತಿಯನ್ನು ಮೂರು ದಿನಗಳ ನಂತರ ರಾಜಸ್ಥಾನದ ಭಿಲ್ವಾರಾದ ಮನೆಯಿಂದ ಬಂಧಿಸಲಾಯಿತೆAಬAತೆ ತೋರಿಸಲಾಗಿದೆ. ಅಘಾತಕಾರಿ ವಿಚಾರ ಎಂದರೆ, ಗುಜರಾತ್ ಮತ್ತು ರಾಜಸ್ಥಾನದ ಹಿರಿಯ ಪೊಲೀಸ್ ಅಧಿಕಾರಿಗಳು ಸೊಹ್ರಾಬುದ್ದೀನ್ ನನ್ನು ಕೊಲ್ಲಲು ಕ್ರಿಮಿನಲ್ ಪಿತೂರಿ ರೂಪಿಸಿದ್ದರಂತೆ. ಇದಕ್ಕಾಗಿಯೇ ಪ್ರಜಾಪತಿಯನ್ನು ತಂಡದೊಳಗಡೆ ಸೇರಿಸಲಾಗಿತ್ತು. ರಾಜಕೀಯ ಒತ್ತಡದಿಂದ ಸೊಹ್ರಾಬುದ್ದೀನ್ ನನ್ನು ಬಂಧಿಸಬೇಕಾಗುತ್ತದೆ. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂಬುದನ್ನು ಪ್ರಜಾಪತಿಗೆ ತಿಳಿಸಲಾಗಿತ್ತಂತೆ.
ಇದರಂತೆ, ಸೊಹ್ರಾಬುದ್ದೀನ್ ಶೇಖ್ ನನ್ನು 2005 ನವೆಂಬರ್ 26ರಂದು ಅಹಮದಾಬಾದ್‌ನಲ್ಲಿ ನಕಲಿ ಎನ್‌ಕೌಂಟರ್‌ನಡೆಸಿ ಕೊಲ್ಲಲಾಗಿದೆ. ಅದೇ ಮಾಸದಲ್ಲಿ ಕೌಸರ್ ಬಿ ಅವರನ್ನು ಸಹ ಕೊಲ್ಲಲಾಗಿದೆ. ಇವರ ಶವವನ್ನು ನವೆಂಬರ್ 29 ರಂದು ವಿಲೇವಾರಿ ಮಾಡಲಾಗಿದೆ. ಒಂದು ವರ್ಷದ ನಂತರ, ಗುಜರಾತ್‌ನಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ತುಳಸಿರಾಮ್ ಪ್ರಜಾಪತಿಯನ್ನು ಸಹ ಕೊಲ್ಲಲಾಯಿತೆಂದು ಸಿಬಿಐ ಹೇಳಿಕೊಂಡಿದೆ.
ಸೊಹ್ರಾಬುದ್ದೀನ್ ಶೇಖ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ರಾಜಕೀಯ ನಾಯಕನನ್ನು ಕೊಲ್ಲುವ ಉದ್ದೇಶದಿಂದ ಅಹಮದಾಬಾದ್‌ಗೆ ಬಂದಿದ್ದನೆ ಬವಾದ ಪೊಲೀಸರದಾಗಿತ್ತು. ಜೊತೆಗೆ, ಪೊಲೀಸರ ಮೇಲೆ ಗುಂಡು ಹಾರಿಸಿದ್ದರಿಂದ ಎನ್ ಕೌಂಟರ್ ಮಾಡಲಾಯಿತೆಂಬುದು ಪೊಲೀಸರ ಸಬೂಬಾಗಿದೆ. 2000ರಿಂದಲೂ ಗುಜರಾತ್‌ನಲ್ಲಿ ಇದೇ ಬಗೆಯಲ್ಲಿ ಎನ್ ಕೌಂಟರ್‌ಗಳು ನಡೆಯುತ್ತಿವೆ. ಇರಲಿ, ಸೊಹ್ರಾಬುದ್ದೀನ್ ಸಹೋದರ ರುಬಾಬುದ್ದೀನ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನ ಸಹೋದರನ ಹತ್ಯೆ ಮತ್ತವನ ಪತ್ನಿ ಕೌಸರ್ ಬಿ ಅನುಮಾನಾಸ್ಪದವಾಗಿ ಕಾಣೆಯಾಗಿರುವ ಬಗ್ಗೆ ತನಿಖೆ ಮಾಡಲು ಆಗ್ರಹಿಸಿದ್ದ. ಆಗ ಸುಪ್ರೀಂ ಕೋರ್ಟ್ ಗುಜರಾತ್ ಪೊಲೀಸರಿಗೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲು ಸೂಚಿಸಿತ್ತು.
- ಮುಂದುವರೆಯುವುದು...

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು